ಭಾಗ್ಯವೇ ಕಾಲು ಮುರಿದುಕೊಂಡ ಬಿದ್ದ ಅರಣ್ಯಾಧಿಕಾರಿಯ ಭಾಗ್ಯವಂತಿ ಕೃಪಾ ನಲ್ಲಿ ಸಿಕ್ಕಿದ್ದು 2 ಕೆಜಿ ಚಿನ್ನದ ಜತೆ ಶ್ರೀಗಂಧ ಮರದ ತುಂಡುಗಳು!

ಇವೆಲ್ಲವುಗಳಿಗಿಂತ ಮುಖ್ಯವಾಗಿ ಅರಣ್ಯಾಧಿಕಾರಿ ಖೇಡಗಿ ಅವರ ಮನೆಯಲ್ಲಿ ಸಿಕ್ಕಿರುವ ವಸ್ತು ಏನು ಗೊತ್ತಾ? ಶ್ರೀಗಂಧದ ಕಟ್ಟಿಗೆಗಳು! ನಾಲ್ಕು ಕೆಜಿಯಷ್ಟು ಶ್ರೀಗಂಧ ಮರದ ತುಂಡುಗಳು ಸಿಕ್ಕಿವೆ. ಇದೆಲ್ಲ ಅವರ ಬಾಗಲಕೋಟೆ ನವನಗರನಲ್ಲಿರುವ ಮನೆಯಲ್ಲಿ ಸಿಕ್ಕಿದ್ದು.

TV9kannada Web Team

| Edited By: Arun Belly

Mar 18, 2022 | 11:16 PM

ಇದು ಬಾಗಲಕೋಟೆ ಜಿಲ್ಲೆ ಬಾದಾಮಿ ವಲಯದ ಅರಣ್ಯಾಧಿಕಾರಿ (RFO) ಶಿವಾನಂದ ಶರಣಪ್ಪ ಪಿ ಖೇಡಗಿ ಅವರ ಮನೆ (Shivanand Sharanappa Khedgi). ತಮ್ಮ ಮನೆಗೆ ಅವರ ಭಾಗ್ಯವಂತಿ ಕೃಪಾ (Bhagyavanti Krupa) ಅಂತ ಹೆಸರಿಟ್ಟಿದ್ದಾರೆ. ಮೊನ್ನೆಯವರೆಗೆ ಅಂದರೆ ಬುಧವಾರದವರೆಗೆ ನಿಸ್ಸಂದೇಹವಾಗಿ ಅವರ ಮನೆಯಲ್ಲಿ ಭಾಗ್ಯದೇವತೆ ಕಾಲು ಮುರಿದುಕೊಂಡು ಬಿದ್ದಿದ್ದಳು. ಅವರ ಕಣ್ಣು ಕುಕ್ಕುವ ಮನೆ ನೋಡಿದವರು ಮನೆಗೆ ತಕ್ಕ ಹೆಸರಿಟ್ಟಿದ್ದಾರೆ ಅಂದು ಕೊಂಡು ಅವರ ಭಾಗ್ಯವನ್ನು ಕೊಂಡಾಡುತ್ತಿದ್ದರು. ಜನರಾಡಿಕೊಳ್ಳುತ್ತಿದ್ದ ಮಾತು ಭ್ರಷ್ಟಾಚಾರ ನಿಗ್ರಹ ದಳದ (Anti Corruption Bureau-ACB) ಕಿವಿಗೂ ಬಿತ್ತು ಮಾರಾಯ್ರೇ. ಸರಿ ಮನೇಲಿ ಏನೇನೆಲ್ಲ ಇಟ್ಟ್ಟಿದ್ದಾರೆ ಅಂತ ನೋಡೋಣ ಎಂದು ಎಸಿಬಿ ಅಧಿಕಾರಿಗಳ ಒಂದು ತಂಡ ಬುಧವಾರದಂದು ಬೆಳಗ್ಗೆ ಭಾಗ್ಯವಂತಿ ಕೃಪಾಗೆ ಲಗ್ಗೆಯಿಟ್ಟರು. ಖೇಡಗಿ ಅವರ ಮನೆಯನ್ನೆಲ್ಲ ಜಾಲಾಡಿದಾಗ ಸಿಕ್ಕಿದ್ದು ಏನೇನು ಗೊತ್ತಾ ಮಾರಾಯ್ರೇ?

ಎರಡು ಕೆಜಿ ಚಿನ್ನ, 11 ಕೆಜಿ ಬೆಳ್ಳಿ, ಹತ್ತು ಲಕ್ಷ ನಗದು, ಬೇರೆ ಬೇರೆ ಬ್ಯಾಂಕ್ಗಳಲ್ಲಿ ಠೇವಣಿ ರೂಪದಲ್ಲಿ ಇಟ್ಟಿರುವ ಒಟ್ಟು ಸುಮಾರು 16 ಲಕ್ಷ ರೂ. ಹಣದ ಪ್ರಮಾಣ ಪತ್ರಗಳು! ಚಿತ್ರದಲ್ಲಿ ಕಾಣುವ ಭವ್ಯ ಬಂಗಲೆ ಅಲ್ಲದೆ, ಅವರ ಹೆಸರಲ್ಲಿ 5 ನಿವೇಶನಗಳಿವೆ.

ಇವೆಲ್ಲವುಗಳಿಗಿಂತ ಮುಖ್ಯವಾಗಿ ಅರಣ್ಯಾಧಿಕಾರಿ ಖೇಡಗಿ ಅವರ ಮನೆಯಲ್ಲಿ ಸಿಕ್ಕಿರುವ ವಸ್ತು ಏನು ಗೊತ್ತಾ? ಶ್ರೀಗಂಧದ ಕಟ್ಟಿಗೆಗಳು! ನಾಲ್ಕು ಕೆಜಿಯಷ್ಟು ಶ್ರೀಗಂಧ ಮರದ ತುಂಡುಗಳು ಸಿಕ್ಕಿವೆ. ಇದೆಲ್ಲ ಅವರ ಬಾಗಲಕೋಟೆ ನವನಗರನಲ್ಲಿರುವ ಮನೆಯಲ್ಲಿ ಸಿಕ್ಕಿದ್ದು.

ಬಲ್ಲ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ 18 ಭ್ರಷ್ಟ ಸರ್ಕಾರ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದರು.

ಇದನ್ನೂ ಓದಿ: ACB Raid: ಏಕಕಾಲಕ್ಕೆ ಕರ್ನಾಟಕದ 78 ಕಡೆಗಳಲ್ಲಿ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ಎಸಿಬಿ ದಾಳಿ

Follow us on

Click on your DTH Provider to Add TV9 Kannada