ಪಠ್ಯ ಪುಸ್ತಕಲ್ಲಿ ಪುನೀತ್ ರಾಜಕುಮಾರ ಪಾಠ: ಪಠ್ಯ ಪುಸ್ತಕ ಸಮಿತಿಯೊಂದಿಗೆ ಚರ್ಚಿಸುವುದಾಗಿ ಹೇಳಿದರು ಸಚಿವ ನಾಗೇಶ್

ಪಠ್ಯ ಪುಸ್ತಕಲ್ಲಿ ಪುನೀತ್ ರಾಜಕುಮಾರ ಪಾಠ: ಪಠ್ಯ ಪುಸ್ತಕ ಸಮಿತಿಯೊಂದಿಗೆ ಚರ್ಚಿಸುವುದಾಗಿ ಹೇಳಿದರು ಸಚಿವ ನಾಗೇಶ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 18, 2022 | 8:59 PM

ಪುನೀತ್ ಅವರಿಗೆ ಮರಣೋತ್ತರವಾಗಿ ಸಲ್ಲಿಸಬೇಕಿರುವ ಗೌರವಗಳ ಬಗ್ಗೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪಕ್ಕಾ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ಮುಖ್ಯಮಂತ್ರಿಗಳು ಅಗಲಿದ ನಟನ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದರು, ಅದರೆ ಅದು ದಕ್ಕಲಿಲ್ಲ.

ರಾಜ್ಯದೆಲ್ಲೆಡೆ ಪುನೀತ್ ರಾಜಕುಮಾರ (Puneeth Rajkumar) ಅವರ ಚರ್ಚೆಯಾಗುತ್ತಿದೆ. ಗುರುವಾರ ಅವರ ಹುಟ್ಟುಹಬ್ಬವಾಗಿತ್ತು ಮತ್ತು ಅವರ ಕೊನೆಯ ಚಿತ್ರ ‘ಜೇಮ್ಸ್’ ತೆರೆ ಕಂಡಿತು. ಚಿತ್ರ ಎಲ್ಲ ಕಡೆ ಭರ್ಜರಿಯಾಗಿ ಓಡುತ್ತಿದೆ. ನಾವು ಆಗಲೇ ಚರ್ಚಿಸಿದ ಹಾಗೆ ‘ಜೇಮ್ಸ್’ ಒಂದೇ ದಿನದಲ್ಲಿ 100 ಕೋಟಿ ರೂ. ಕ್ಲಬ್ ಸೇರಿದ ಮತ್ತು ಇದನ್ನು ಚಿತ್ರ ನಿರ್ಮಾಪಕರು ಖಚಿತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಪುನೀತ್ ಅವರಿಗೆ ಮರಣೋತ್ತರವಾಗಿ (posthumously) ಸಲ್ಲಿಸಬೇಕಿರುವ ಗೌರವಗಳ ಬಗ್ಗೆ ವಿಸ್ತೃತವಾದ ಚರ್ಚೆ ರಾಜ್ಯದಲ್ಲಿ ನಡೆದಿದೆ. ಪುನೀತ್ ಅವರ ಬದುಕು ಸಾಧನೆ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಒಂದು ಪಾಠವಾಗಿ ಸೇರಿಸುವ ಬಗ್ಗೆಯೂ ಚರ್ಚೆ ಶುರುವಿಟ್ಟುಕೊಂಡಿದೆ. ಇದೇ ಸಂಬಂಧವಾಗಿ ಶುಕ್ರವಾರದಂದು ಮಾಧ್ಯಮದವರು ಬೆಂಗಳೂರಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಅವರನ್ನು ಕೇಳಿದರು. ಕೊಂಚ ಹೊತ್ತು ಯೋಚಿಸಿದ ಸಚಿವ ನಾಗೇಶ್ ಅವರು ಪಠ್ಯ ಪುಸ್ತಕ ರಚನೆ ಸಮಿತಿ ಅಂತ ಒಂದಿರುತ್ತದೆ, ಆ ಸಮಿತಿ ಈ ವಿಷಯದ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತದೆ, ಸರ್ಕಾರ ಸಮಿತಿಯ ಎದುರು ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದರು.

ಪುನೀತ್ ಅವರಿಗೆ ಮರಣೋತ್ತರವಾಗಿ ಸಲ್ಲಿಸಬೇಕಿರುವ ಗೌರವಗಳ ಬಗ್ಗೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪಕ್ಕಾ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ಮುಖ್ಯಮಂತ್ರಿಗಳು ಅಗಲಿದ ನಟನ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದರು, ಅದರೆ ಅದು ದಕ್ಕಲಿಲ್ಲ. ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಅದಿನ್ನೂ ವಾಸ್ತವದಲ್ಲಿ ಬದಲಾಗಿಲ್ಲ. ಗುರುವಾರ ಈ ಬಗ್ಗೆ ಮಾತಾಡಿದ ಮುಖ್ಯಮಂತ್ರಿಗಳು, ಪುನೀತ್ ರಾಜಕುಮಾರ ಅವರ ಕುಟುಂಬದೊಂದಿಗೆ ಮಾತಾಡಿ ಆದಷ್ಟು ಬೇಗ ಒಂದು ಕಾರ್ಯಕ್ರಮ ಏರ್ಪಡಿಸಿ ಪವರ್ ಸ್ಟಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮವನ್ನು ಹೇಗೆ ಮತ್ತು ಎಲ್ಲಿ ಆಯೋಜಿಸಬೇಕು, ಅದರ ಸ್ವರೂಪ ಹೇಗಿರಬೇಕು ಅಂತ ಶಿವಣ್ಣ, ರಾಘಣ್ಣ ಮತ್ತು ಅಶ್ವಿನಿ ಪುನೀತ್ ರಾಜಕುಮಾರ ಅವರ ಜೊತೆ ಚರ್ಚಿಸಿ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಇದನ್ನೂ ಓದಿ:  James Movie Release Highlights: ‘ಜೇಮ್ಸ್’ ಇಷ್ಟಪಷ್ಟ ಫ್ಯಾನ್ಸ್; ಅಪ್ಪು ಸಮಾಧಿ ದರ್ಶನ ಮಾಡಿದ 25,000ಕ್ಕೂ ಹೆಚ್ಚು ಅಭಿಮಾನಿಗಳು