ಹಾಸನದಿಂದ ಬೆಂಗಳೂರಿಗೆ ಬಂದ ಭವಾನಿ ರೇವಣ್ಣ ಮಾಧ್ಯಮಗಳ ಕಣ್ತಪ್ಪಿಸಿ ಮನೆಯೊಳಗೆ ಹೋದರು!

ಅರುಣ್​ ಕುಮಾರ್​ ಬೆಳ್ಳಿ

Updated on: May 01, 2024 | 6:08 PM

ಭವಾನಿ ಹಾಸನದಿಂದ ಹೊರಡುವ ಮೊದಲು ರೇವಣ್ಣ ಸಹ ನಗರಕ್ಕೆ ಆಗಮಿಸಿದರು. ಅವರು ಈಗ ಇದೇ ಮನೆಯಲ್ಲಿದ್ದಾರೋ ಅಥವಾ ಮುಂದೇನು ಅಂತ ಚರ್ಚಿಸಲು ಪದ್ಮನಾಭನಗರದಲ್ಲಿರುವ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಮನೆಗೆ ಹೋಗಿದ್ದರೋ ಗೊತ್ತಿಲ್ಲ. ಅವರು ಸಹ ಭವಾನಿಯವರಷ್ಟೇ ಆತಂಕಿತರಾಗಿದ್ದಾರೆ.

ಬೆಂಗಳೂರು: ಹಾಸನ ಜೆಡಿಎಸ್ ನಾಯಕ ಮತ್ತು ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಅವರಿಗೆ ಎಂಥ ಸ್ಥಿತಿ ಬಂದಿದೆ ನೋಡಿ. ಮಾಧ್ಯಮದವರೊಂದಿಗೆ ಮಾತಾಡಲು ಯಾವತ್ತೂ ಹಿಂದೇಟು ಹಾಕದ ಅವರು ಇಂದು ಮರೆಯಾಗಿ ತಪ್ಪಿಸಿಕೊಳ್ಳುವ ಹಾಗೆ ಮನೆಯೊಳಗೆ ಹೋಗುವುದನ್ನು ದೃಶ್ಯಗಳಲ್ಲಿ ನೋಡಬಹುದು. ಬೇರೆ ಸಮಯವಾಗಿದ್ದರೆ ಅವರು ನಿಸ್ಸಂಕೋಚವಾಗಿ ಸುದ್ದಿಗಾರರೊಡನೆ ಮಾತಾಡುತ್ತಿದ್ದರು. ಅವರು ಯಾಕೆ ಕಳ್ಳರ ಹಾಗೆ ತಪ್ಪಿಸಿಕೊಂಡು ಹೊದರೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಸೆಕ್ಸ್ ಟೇಪ್ ಗಳು ಭವಾನಿಯವನ್ನು ಈ ಸ್ಥಿತಿಗೆ ತಂದಿವೆ. ಇಂದು ಮಧ್ಯಾಹ್ನ ಅವರು ಹಾಸನದಿಂದ ಬೆಂಗಳೂರಿಗೆ ಆಗಮಿಸಿದರು. ನಗರದ ಬಸವನಗುಡಿ ಏರಿಯಾದ ರಾಣೋಜಿರಾವ್ ರಸ್ತೆಯಲ್ಲಿರುವ ಭವ್ಯ ಬಂಗ್ಲೆ ರೇವಣ್ಣಗೆ ಸೇರಿದ್ದು. ಮನೆಯ ಮುಂಭಾಗದಲ್ಲಿ ಅವರ ಹೆಸರನ್ನು ನೋಡಬಹುದು. ಭವಾನಿ ಹಾಸನದಿಂದ ಹೊರಡುವ ಮೊದಲು ರೇವಣ್ಣ ಸಹ ನಗರಕ್ಕೆ ಆಗಮಿಸಿದರು. ಅವರು ಈಗ ಇದೇ ಮನೆಯಲ್ಲಿದ್ದಾರೋ ಅಥವಾ ಮುಂದೇನು ಅಂತ ಚರ್ಚಿಸಲು ಪದ್ಮನಾಭನಗರದಲ್ಲಿರುವ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಮನೆಗೆ ಹೋಗಿದ್ದರೋ ಗೊತ್ತಿಲ್ಲ. ಅವರು ಸಹ ಭವಾನಿಯವರಷ್ಟೇ ಆತಂಕಿತರಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹಾಸನಾಂಬೆಯ ದರ್ಶನಕ್ಕೆ ಪತಿಯೊಂದಿಗೆ ಆಗಮಿಸಿದ ಭವಾನಿ ರೇವಣ್ಣ ಜನರ ಗಮನ ತಮ್ಮತ್ತ ಸೆಳೆದುಕೊಂಡರು!

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.