ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಬೆಳಗಾವಿಯ ಕಾಂಗ್ರೆಸ್ ಕಾರ್ಯಕರ್ತೆ ಸುಮಾರು ದೂರದವರೆಗೆ ಓಡಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 13, 2022 | 9:53 PM

ನಾನು ನಿಮ್ಮ ಜೊತೆ ಯಾಕೆ ಬರಬೇಕು, ನಾನು ಬರಲ್ಲ ನಮ್ಮ ಜನರು ಬರುವವರೆಗೆ ಇಲ್ಲೇ ಕೂರುತ್ತೇನೆ ಅಂತ ಹಟಕ್ಕೆ ಬಿದ್ದರು. ಮಹಿಳಾ ಕಾನ್ ಸ್ಟೇಬಲ್ ಒಬ್ಬರೇ ಇದ್ದಿದ್ದರಿಂದ ಅಯೇಷಾರನ್ನು ಎತ್ತಿ ವ್ಯಾನಲ್ಲಿ ಕೂರಿಸುವುದು ಸಾಧ್ಯವಿರಲಿಲ್ಲ. ಪುರುಷ ಪೊಲೀಸರು ಜೀಪಲ್ಲಿ ಕೂತ್ಕೊಳ್ಳಿ ಅಂತ ಹೇಳಿದರೂ ಅವರು ಜಪ್ಪಯ್ಯ ಅನ್ನಲಿಲ್ಲ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಅವರ ವಿರುದ್ಧ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಆತ್ಮಹತ್ಯೆ ಮೂಲಕ ಸಾವನ್ನಪ್ಪಿರುವ ಸಂತೋಷ್ ಪಾಟೀಲ (Santosh Patil) ಅವರು ತವರು ಜಿಲ್ಲೆ ಬೆಳಗಾವಿಯಲ್ಲಿ ಬುಧವಾರ ಪ್ರತಿಭಟನೆ ನಡೆಯುತ್ತಿದ್ದಾಗ ಒಂದು ಸ್ವಾರಸ್ಯಕರ ಸಂಗತಿ ಸಂಭವಿಸಿತು. ಅದೇನು ಅನ್ನೋದು ನಿಮಗೆ ಈ ವಿಡಿಯೋನಲ್ಲಿ ಕಾಣುತ್ತದೆ. ರಸ್ತೆಯಲ್ಲಿ ಒಂದೇಸಮ ಓಡುತ್ತಿರುವ ಮಹಿಳೆಯ ಹೆಸರು ಆಯೇಷಾ ಸನದಿ (Ayesha Sanadi) ಮತ್ತು ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ಈಶ್ವರಪ್ಪ ಅವರ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿದಾಗ ಅವರಿಂದ ತಪ್ಪಿಸಿಕೊಳ್ಳಲು ಆಯೇಷಾ ಓಡಲಾರಂಭಿಸಿದರು!

ಧಿಕ್ಕಾರ, ಧಿಕ್ಕಾರ, ಬಿಜೆಪಿಗೆ ಧಿಕ್ಕಾರ ಅಂತ ಕೂಗುತ್ತ್ತಾ ಏದುಸಿರು ಬಿಡುತ್ತಾ ಅವರು ಓಡಿದ್ದು ಸ್ವಲ್ಪ ದೂರ ಮಾತ್ರ. ಪೊಲೀಸರು ಅವರನ್ನು ಅಡ್ಡಹಾಕಿ ಹಿಡಿದೇಬಿಟ್ಟರು. ಆದರೆ ಅಲ್ಲೂ ಆವರು ತಮ್ಮ ವರಾತ ಮುಂದುವರಿಸಿ ಘೋಷಣೆಗಳನ್ನು ಕೂಗಿದರು. ಪೊಲೀಸ್ ವ್ಯಾನ್ ಹತ್ತಲು ನಿರಾಕರಿಸಿದರು.

ನಾನು ನಿಮ್ಮ ಜೊತೆ ಯಾಕೆ ಬರಬೇಕು, ನಾನು ಬರಲ್ಲ ನಮ್ಮ ಜನರು ಬರುವವರೆಗೆ ಇಲ್ಲೇ ಕೂರುತ್ತೇನೆ ಅಂತ ಹಟಕ್ಕೆ ಬಿದ್ದರು. ಮಹಿಳಾ ಕಾನ್ ಸ್ಟೇಬಲ್ ಒಬ್ಬರೇ ಇದ್ದಿದ್ದರಿಂದ ಅಯೇಷಾರನ್ನು ಎತ್ತಿ ವ್ಯಾನಲ್ಲಿ ಕೂರಿಸುವುದು ಸಾಧ್ಯವಿರಲಿಲ್ಲ. ಪುರುಷ ಪೊಲೀಸರು ಜೀಪಲ್ಲಿ ಕೂತ್ಕೊಳ್ಳಿ ಅಂತ ಹೇಳಿದರೂ ಅವರು ಜಪ್ಪಯ್ಯ ಅನ್ನಲಿಲ್ಲ.

ಆದರೆ, ಅಂತಿಮವಾಗಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತೆಯನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶ ಕಂಡರು.

ಇದನ್ನೂ ಓದಿ: ಸಂತೋಷ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಲಿ; ಈಶ್ವರಪ್ಪರನ್ನು ಬಂಧಿಸಲಿ: ಸಂತೋಷ್ ಮನೆಗೆ ಭೇಟಿ ಬಳಿಕ ಕೈ ನಾಯಕರ ಹೇಳಿಕೆ