ಆರೋಪ ಸಾಬೀತಾದಾಗ ಪಕ್ಷವೇ ಈಶ್ವರಪ್ಪನವರಿಗೆ ರಾಜೀನಾಮೆ ಸಲ್ಲಿಸುವಂತೆ ಹೇಳುತ್ತದೆ: ರೇಣುಕಾಚಾರ್ಯ

ಆರೋಪ ಸಾಬೀತಾದಾಗ ಪಕ್ಷವೇ ಈಶ್ವರಪ್ಪನವರಿಗೆ ರಾಜೀನಾಮೆ ಸಲ್ಲಿಸುವಂತೆ ಹೇಳುತ್ತದೆ: ರೇಣುಕಾಚಾರ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Apr 13, 2022 | 10:12 PM

ಪೊಲೀಸ್ ಅಧಿಕಾರಿ ಎಂ ಕೆ ಗಣಪತಿ ಅವರು ಆತ್ಯಹತ್ಯೆ ಮಾಡಿಕೊಂಡಾಗ ಅಗ ಗೃಹ ಸಚಿವರಾಗಿದ್ದ ಕೆಜೆ ಜಾರ್ಜ್ ರಾಜೀನಾಮೆ ನೀಡಿದ್ದರು ಎಂಬ ಅಂಶವನ್ನು ರೇಣುಕಾಚಾರ್ಯರಿಗೆ ಜ್ಞಾಪಿಸಿದಾಗ, ಆ ಪ್ರಕರಣವೇ ಬೇರೆ, ಈ ಪ್ರಕರಣವೇ ಬೇರೆ ಎರಡನ್ನೂ ಥಳುಕು ಹಾಕಲಾಗದು ಎಂದು ಅವರು ಹೇಳಿದರು.

ಬೆಂಗಳೂರು: ಸಂತೋಷ ಪಾಟೀಲ್ ಅವರ ಸಾವಿನ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರು ಕೇವಲ ಅರೋಪದ ಆಧಾರದಲ್ಲಿ ಸಚಿವ ಕೆ ಎಸ್ ಈಶ್ವರಪ್ಪನವರು (KS Eshwarappa) ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದರು. ಸಂತೋಷ ಅವರ ಕುಟುಂಬ ತೀವ್ರ ಸಂಕಷ್ಟದಲ್ಲಿದೆ. ಪ್ರಕರಣದ ಸಮಗ್ರ ತನಿಖೆಯಾಗಬೇಕಿದೆ, ಸುಖಾಸುಮ್ಮನೆ ಆರೋಪಗಳನ್ನು ಮಾಡುವುದು ಸರಿಯಲ್ಲ. ಸಂತೋಷ ಅವರೊಂದಿಗೆ ಇನ್ನಿಬ್ಬರು ಇದ್ದರಲ್ಲ, ಅವರು ಯಾರು, ಸಂತೋಷ ಉಡುಪಿಗೆ (Udupi) ಯಾಕೆ ಹೋಗಿದ್ದರು ಮತ್ತು ಲಾಡ್ಜ್ನಲ್ಲಿ ಎರಡು ಪ್ರತ್ಯೇಕ ರೂಮುಗಳನ್ನು ಬುಕ್ ಮಾಡಿ ಒಂದರಲ್ಲಿ ಸಂತೋಷ ಮತ್ತೊಂದರಲ್ಲಿ ಉಳಿದಿಬ್ಬರು ಇದ್ದಿದ್ದು ಯಾಕೆ? ಇದೆಲ್ಲವೂ ತನಿಖೆಯಾಗಬೇಕಿದೆ ಎಂದು ರೇಣುಕಾಚಾರ್ಯ ಹೇಳಿದರು.

ಪೊಲೀಸ್ ಅಧಿಕಾರಿ ಎಂ ಕೆ ಗಣಪತಿ ಅವರು ಆತ್ಯಹತ್ಯೆ ಮಾಡಿಕೊಂಡಾಗ ಅಗ ಗೃಹ ಸಚಿವರಾಗಿದ್ದ ಕೆಜೆ ಜಾರ್ಜ್ ರಾಜೀನಾಮೆ ನೀಡಿದ್ದರು ಎಂಬ ಅಂಶವನ್ನು ರೇಣುಕಾಚಾರ್ಯರಿಗೆ ಜ್ಞಾಪಿಸಿದಾಗ, ಆ ಪ್ರಕರಣವೇ ಬೇರೆ, ಈ ಪ್ರಕರಣವೇ ಬೇರೆ ಎರಡನ್ನೂ ಥಳುಕು ಹಾಕಲಾಗದು ಎಂದು ಅವರು ಹೇಳಿದರು. ವಿರೋಧ ಪಕ್ಷದಲ್ಲಿದ್ದಾಗ ಒಂದು ಮಾತು ಅಧಿಕಾರದಲ್ಲಿದ್ದಾಗ ಒಂದು ಮಾತು ಆಡ್ತೀರಲ್ಲ? ಜಾರ್ಜ್ ರಾಜೀನಾಮೆ ನೀಡಬೇಕೆಂದು ನೀವು ಪ್ರತಿಭಟನೆ ನಡೆಸಿದ್ದೀರಲ್ಲ ಎಂದು ಕೇಳಿದಾಗ ಶಾಸಕರು, ನಮ್ಮದು ದ್ವಿಮುಖ ನೀತಿಯ ಪಕ್ಷ ಅಲ್ಲ ಎಂದರು.

ಕಾಂಗ್ರೆಸ್ ನೈತಿಕತೆ ಬಗ್ಗೆ ಮಾತಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತೆ ಎಂದು ರೇಣುಕಾಚಾರ್ಯ ಲೇವಡಿ ಮಾಡಿದರು. ಜಾರ್ಜ್ ಅವರನ್ನು ರಾಜೀನಾಮೆ ಕೊಡುವಂತೆ ಹೇಳಿದ ಬಳಿಕ ಅವರಿಗೆ ಕ್ಲೀನ್ ಚಿಟ್ ಕೊಡಿಸಿ ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು.

ಇದನ್ನೂ ಓದಿ:   ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಮೋದಿ; ಬಿ.ಎಲ್. ಸಂತೋಷ್‌ಗೆ ಬುಲಾವ್

Published on: Apr 13, 2022 08:52 PM