ಪೌರ ಕಾರ್ಮಿಕರ ದುಮ್ಮಾನಗಳನ್ನು ಆಲಿಸುವಾಗ ಇಕ್ಕಟ್ಟಿನ ಸ್ಥಿತಿ ಎದುರಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Oct 06, 2023 | 2:02 PM

ಪೌರ ಕಾರ್ಮಿಕರು ನಡೆಸುವ ಸಭೆಗೆ ಹಾಜರಾಗುವಂತೆ ಅವರನ್ನು ವಿನಂತಿಸಿಕೊಂಡಾಗ ದಿನಾಂಕವನ್ನು ಆದಷ್ಟು ಬೇಗ ತಿಳಿಸಿದರೆ ಭಾಗವಹಿಸುವುದಾಗಿ ಹೇಳಿದರು. ಈ ಬಾರಿ 11ರಂದು ಸಭೆ ಇಟ್ಟುಕೊಳ್ಳಲಾಗಿದೆ ಮತ್ತು ಮುಂದಿನ ಸಭೆಗಳನ್ನು ಅವರ ಗಮನಕ್ಕೆ ತಂದ ಬಳಿಕವೇ ದಿನಾಂಕ ನಿಗದಿಪಡಿಸುವುದಾಗಿ ಒಬ್ಬ ಹಿರಿಯರು (ಪ್ರಾಯಶಃ ಸಂಘಧ ಅಧ್ಯಕ್ಷರಿರಬೇಕು) ಹೇಳುತ್ತಾರೆ. ದಿನಾಂಕ ತಿಳಿಸಿದರೆ ಬರುವುದಾಗಿ ಶಿವಕುಮಾರ್ ಹೇಳಿದರು.

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (BBMP) ಕೆಲಸ ಮಾಡುವ ಪೌರ ಕಾರ್ಮಿಕರ (pourakarmikas) ದೂರು ದುಮ್ಮಾನಗಳನ್ನು ಆಲಿಸಿದರು. ಪೌರ ಕಾರ್ಮಿಕರ ಸಂಘದ ವತಿಯಿಂದ ಅವರಿಗೆ ಹಲವಾರು ಅರ್ಜಿಗಳನ್ನು ಅವರಿಗೆ ಸಲ್ಲಿಸಲಾಯಿತು. ಮನವಿ ಪತ್ರಗಳಲ್ಲಿ ಕೆಲವನ್ನು ಸ್ಥಳದಲ್ಲೇ ಪರಿಶೀಲಿಸಿದ ಶಿವಕುಮಾರ್, ಗಮನಹರಿಸುವ ಭರವಸೆ ನೀಡಿದರು. ಪೌರ ಕಾರ್ಮಿಕರು ನಡೆಸುವ ಸಭೆಗೆ ಹಾಜರಾಗುವಂತೆ ಅವರನ್ನು ವಿನಂತಿಸಿಕೊಂಡಾಗ ದಿನಾಂಕವನ್ನು ಆದಷ್ಟು ಬೇಗ ತಿಳಿಸಿದರೆ ಭಾಗವಹಿಸುವುದಾಗಿ ಹೇಳಿದರು. ಈ ಬಾರಿ 11ರಂದು ಸಭೆ ಇಟ್ಟುಕೊಳ್ಳಲಾಗಿದೆ ಮತ್ತು ಮುಂದಿನ ಸಭೆಗಳನ್ನು ಅವರ ಗಮನಕ್ಕೆ ತಂದ ಬಳಿಕವೇ ದಿನಾಂಕ ನಿಗದಿಪಡಿಸುವುದಾಗಿ ಒಬ್ಬ ಹಿರಿಯರು (ಪ್ರಾಯಶಃ ಸಂಘಧ ಅಧ್ಯಕ್ಷರಿರಬೇಕು) ಹೇಳುತ್ತಾರೆ. ದಿನಾಂಕ ತಿಳಿಸಿದರೆ ಬರುವುದಾಗಿ ಶಿವಕುಮಾರ್ ಹೇಳಿದಾಗ, ಯಾವತ್ತೂ ಬಂದೇ ಇಲ್ವಲ್ಲ ಸರ್ ಅಂತ ಒಬ್ಬ ಕಾರ್ಮಿಕಳು ಹೇಳುತ್ತಾರೆ. ಮಹಿಳೆಯ ಕಡೆ ತಿರುಗಿ ಶಿವಕುಮಾರ್ ಆಶ್ವಾಸನೆ ನೀಡುವಾಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಅವರು ಬಂದೇ ಬರ್ತಾರೆ, ಅವರು ಜನರಿಗೆ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದಾರೆ ಅಂತ ಬಡಬಡಿಸುತ್ತಾನೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.