ಪ್ರಗ್ನೆಂಟ್ ಮಾಡಿ ಬಳಿಕ ಗರ್ಭಪಾತ ಮಾಡಿಸಿದ್ದ‌: ಡೆತ್​​ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

Updated on: Dec 08, 2025 | 7:48 PM

ಪ್ರೀತಿಸಿದ (Love) ಯುವಕ ಲೈಂಗಿಕವಾಗಿ ಬಳಿಸಿಕೊಂಡು ಬಳಿಕ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ರಾಮನಗರ (Ramanagar) ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವತಿಯನ್ನು ವರ್ಷಿಣಿ (22) ಎಂದು ಗುರುತಿಸಲಾಗಿದೆ. ಯುವತಿ ಡೆತ್ ನೋಟ್ ಬರೆದಿಟ್ಟು, ಬಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆತ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ರಾಮನಗರ, ಡಿಸೆಂಬರ್ 08): ಪ್ರೀತಿಸಿದ (Love) ಯುವಕ ಲೈಂಗಿಕವಾಗಿ ಬಳಿಸಿಕೊಂಡು ಬಳಿಕ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ರಾಮನಗರ (Ramanagar) ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವತಿಯನ್ನು ವರ್ಷಿಣಿ (22) ಎಂದು ಗುರುತಿಸಲಾಗಿದೆ. ಯುವತಿ ಡೆತ್ ನೋಟ್ ಬರೆದಿಟ್ಟು, ಬಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆತ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಸಾಯುವ ಮುನ್ನ ಯುವತಿ ಬರೆದ ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ದೇವರದೊಡ್ಡಿ ಗ್ರಾಮದ ಅಭಿ ಎಂಬ ಯುವಕ ಕಾರಣ ಎಂದು ಬರೆದಿದ್ದಾಳೆ. ಅಭಿ ಪ್ರೀತಿ ಹೆಸರಲ್ಲಿ ಮೋಸ ಮಾಡಿದ್ದಾನೆ. ನನ್ನನ್ನು ಬ್ಲಾಕ್‌ಮೇಲ್ ಮಾಡಿ ಪ್ರಗ್ನೆಂಟ್ ಮಾಡಿ ಬಳಿಕ ಗರ್ಭಪಾತ ಮಾಡಿಸಿದ್ದ‌. ಹಣ ಹಾಗೂ ಚಿನ್ನದ ಉಂಗುರ ಪಡೆದು ವಂಚಿಸಿದ್ದಾನೆ. ಈಗ ಮತ್ತೆ ಕಿರುಕುಳ ನೀಡ್ತಿದ್ದಾನೆ. ನನ್ನ ಸಾವಿಗೆ ಕಾರಣವಾದ ಅಭಿಯನ್ನು ಸುಮ್ಮನೆ ಬಿಡಬೇಡಿ. ನನ್ನ ಹಾಗೆ ಯಾರಿಗೂ ಮೋಸ ಆಗಬಾರದು ಎಂದು ಬರೆದಿದ್ದಾಳೆ.

Published on: Dec 08, 2025 07:47 PM