ಜಗದೀಶ್ ಶೆಟ್ಟರ್ ಗೆ ಕರೆ ಮಾಡಿ ಐಫೋನ್-17 ಪ್ರೋ ಮ್ಯಾಕ್ಸ್ಗೆ ಬೇಡಿಕೆ: ಯುವಕನ ಆಡಿಯೋನ್ನೊಮ್ಮೆ ನೀವು ಕೇಳಿ
ಎಂಥೆಂಥಾ ಜನ ಇದ್ದಾರೆ ನೋಡಿ. ಮಾಜಿ ಮುಖ್ಯಮಂತ್ರಿ, ಸಂಸದರಿಗೆ ಯುವಕನೋರ್ವ ಕರೆ ಮಾಡಿ ಐಫೋನ್-17 ಪ್ರೋ ಮ್ಯಾಕ್ಸ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಹೌದು ಅಚ್ಚರಿ ಅನ್ನಿಸಿದರೂ ಸತ್ಯ. ಯುವಕನೋರ್ವ, ಸಂಸದ ಜಗದೀಶ್ ಶೆಟ್ಟರ್ ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾನೆ. ಬಳಿಕ ಸರ್ ನನಗೊಂದು ಹೆಲ್ಪ್ ಆಗಬೇಕು ನಿಮ್ಮಿಂದ ಎಂದಿದ್ದಾನೆ. ಅದಕ್ಕೆ ಏನು ಹೇಳಪ್ಪ ಎಂದು ಶೆಟ್ಟರ್ ಅವರು ಹೇಳಿದ್ದಾರೆ. ಆಗ ಯುವಕ ಏನಿಲ್ಲ ಸರ್ ಹೊಸದಾಗಿ ಐಫೋನ್-17 ಪ್ರೋ ಮ್ಯಾಕ್ಸ್ ಲಾಂಚ್ ಆಗಿದೆ. ನನಗೆ ಐಫೋನ್-17 ಪ್ರೋ ಮ್ಯಾಕ್ಸ್ ಕೊಡಿಸಿ ಎಂದಿದ್ದಾನೆ.
ಬೆಳಗಾವಿ, (ಡಿಸೆಂಬರ್ 01): ಎಂಥೆಂಥಾ ಜನ ಇದ್ದಾರೆ ನೋಡಿ. ಮಾಜಿ ಮುಖ್ಯಮಂತ್ರಿ, ಸಂಸದರಿಗೆ ಯುವಕನೋರ್ವ ಕರೆ ಮಾಡಿ ಐಫೋನ್-17 ಪ್ರೋ ಮ್ಯಾಕ್ಸ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಹೌದು ಅಚ್ಚರಿ ಅನ್ನಿಸಿದರೂ ಸತ್ಯ. ಯುವಕನೋರ್ವ, ಸಂಸದ ಜಗದೀಶ್ ಶೆಟ್ಟರ್ ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾನೆ. ಬಳಿಕ ಸರ್ ನನಗೊಂದು ಹೆಲ್ಪ್ ಆಗಬೇಕು ನಿಮ್ಮಿಂದ ಎಂದಿದ್ದಾನೆ. ಅದಕ್ಕೆ ಏನು ಹೇಳಪ್ಪ ಎಂದು ಶೆಟ್ಟರ್ ಅವರು ಹೇಳಿದ್ದಾರೆ. ಆಗ ಯುವಕ ಏನಿಲ್ಲ ಸರ್ ಹೊಸದಾಗಿ ಐಫೋನ್-17 ಪ್ರೋ ಮ್ಯಾಕ್ಸ್ ಲಾಂಚ್ ಆಗಿದೆ. ನನಗೆ ಐಫೋನ್-17 ಪ್ರೋ ಮ್ಯಾಕ್ಸ್ ಕೊಡಿಸಿ ಎಂದಿದ್ದಾನೆ. ಆಗ ಶೆಟ್ಟರ್, ತಬ್ಬಿಬ್ಬಾಗಿದ್ದು, ಇದನ್ನೂ ಎಂಪಿಯವರಿಗೆ ಕೇಳ್ತಿರಲಪ್ಪ ಎಂದಿದ್ದಾರೆ.
ಇನ್ನು ಶೆಟ್ಟರ್ಗೆ ಕರೆ ಮಾಡಿ ಐಫೋನ್ಗೆ ಕರೆ ಮಾಡಿರುವುದು ರಾಮದುರ್ಗ ಮೂಲದ ಪ್ರತಿಕ್ ಎಂದು ಗುರುತಿಸಲಾಗಿದ್ದು, ಈತ ಕಾಂಗ್ರೆಸ್ ಕಾರ್ಯಕರ್ತ ಎಂದು ತಿಳಿದುಬಂದಿದೆ.ಅವಮಾನ ಮಾಡಲೇಂದೇ ಶೆಟ್ಟರ್ಗೆ ಕರೆ ಮಾಡಿ ಐಫೋನ್ ಗೆ ಡಿಮ್ಯಾಂಡ್ ಇಟ್ಟು ಆಡಿಯೋ ವೈರಲ್ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಈ ಆಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ನೀವು ಒಮ್ಮೆ ಯುವಕನ ಆಡಿಯೋವನ್ನು ಕೇಳಿ.