PM, CMಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ, ವಿಡಿಯೋ ಮಾಡಿಟ್ಟು ಯುವಕ ನೇಣಿಗೆ ಶರಣು

Updated By: ರಮೇಶ್ ಬಿ. ಜವಳಗೇರಾ

Updated on: Jul 03, 2025 | 8:46 PM

ಆನ್‍ಲೈನ್ ಗೇಮ್‍ನಲ್ಲಿ (Online Game) ಬರೋಬ್ಬರಿ 18 ಲಕ್ಷ ರೂ. ಹಣ ಕಳೆದುಕೊಂಡು ಯುವಕನೊಬ್ಬ ನೇಣಿಗೆ ಶರಣಾದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. ಮೃತನನ್ನು ಸರಸ್ವತಿ ನಗರದ ಶಶಿ ಕುಮಾರ್ (25) ಎಂದು ಗುರುತಿಸಲಾಗಿದೆ. ಯುವಕ ಆನ್‍ಲೈನ್ ಗೇಮ್‍ನಲ್ಲಿ 18 ಲಕ್ಷ ರೂ. ಕಳೆದುಕೊಂಡಿದ್ದ. ಇದರಿಂದ ನೊಂದು ಆನ್‍ಲೈನ್ ಗೇಮ್ ನಿಷೇಧಿಸುವಂತೆ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಡಿಸಿ ಹಾಗೂ ಎಸ್ಪಿ ಮುಖಾಂತರ ಮನವಿ ಮಾಡಿಕೊಂಡಿದ್ದ. ಆದ್ರೆ ದೂರು ನೀಡಿದರು ಯಾವುದೇ ಕ್ರಮವಾಗದ ಹಿನ್ನಲೆ ಸೆಲ್ಫಿ ವಿಡಿಯೋ ಮಾಡಿ ಯುವಕ ನೋವು ತೋಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ದಾವಣಗೆರೆ, (ಜುಲೈ 03): ಆನ್‍ಲೈನ್ ಗೇಮ್‍ನಲ್ಲಿ (Online Game) ಬರೋಬ್ಬರಿ 18 ಲಕ್ಷ ರೂ. ಹಣ ಕಳೆದುಕೊಂಡು ಯುವಕನೊಬ್ಬ ನೇಣಿಗೆ ಶರಣಾದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. ಮೃತನನ್ನು ಸರಸ್ವತಿ ನಗರದ ಶಶಿ ಕುಮಾರ್ (25) ಎಂದು ಗುರುತಿಸಲಾಗಿದೆ. ಯುವಕ ಆನ್‍ಲೈನ್ ಗೇಮ್‍ನಲ್ಲಿ 18 ಲಕ್ಷ ರೂ. ಕಳೆದುಕೊಂಡಿದ್ದ. ಇದರಿಂದ ನೊಂದು ಆನ್‍ಲೈನ್ ಗೇಮ್ ನಿಷೇಧಿಸುವಂತೆ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಡಿಸಿ ಹಾಗೂ ಎಸ್ಪಿ ಮುಖಾಂತರ ಮನವಿ ಮಾಡಿಕೊಂಡಿದ್ದ. ಆದ್ರೆ ದೂರು ನೀಡಿದರು ಯಾವುದೇ ಕ್ರಮವಾಗದ ಹಿನ್ನಲೆ ಸೆಲ್ಫಿ ವಿಡಿಯೋ ಮಾಡಿ ಯುವಕ ನೋವು ತೋಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಡೆತ್‍ನೋಟ್‍ನಲ್ಲಿ ಗೇಮ್‍ನ ಅಕ್ರಮದ ಬಗ್ಗೆ ಯುವಕ ಅನಾವರಣ ಮಾಡಿದ್ದಾನೆ. ಅದರಲ್ಲಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಪ್ರಸ್ತಾಪ ಮಾಡಿ, ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾನೆ. ನನ್ನಂತೆ ಹಣ ಕಳೆದುಕೊಂಡು ನೋವು ಅನುಭವಿಸುವುದು ಕಡಿಮೆಯಾಗಲಿ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಇನ್ನು ಈ ಸಂಬಂಧ ದಾವಣಗೆರೆ ಎಸ್ಪಿ ಪ್ರತಿಕ್ರಿಯಿಸಿದ್ದು, ಏನೆಲ್ಲಾ ಹೇಳಿದ್ದಾರೆ ನೋಡಿ.