Aadhaar Update Date: ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ

Aadhaar Update Date: ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ

ಕಿರಣ್​ ಐಜಿ
|

Updated on: Jun 18, 2024 | 7:24 AM

ಸೆಪ್ಟಂಬರ್ 14ರ ಬಳಿಕವೂ ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಬಹುದಾದರೂ ₹50 ಶುಲ್ಕ ನೀಡಬೇಕಾಗುತ್ತದೆ. ಅಲ್ಲಿಯವರೆಗೆ ಉಚಿತ ಅಪ್​ಡೇಟ್​ಗೆ ಅವಕಾಶವಿದೆ.

ಆಧಾರ್ ಕಾರ್ಡ್ ಉಚಿತ​​ ಅಪ್​ಡೇಟ್​ಗೆ ಇನ್ನೊಂದು ಛಾನ್ಸ್ ಸಿಕ್ಕಿದೆ. ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್​ಡೇಟ್ ಮಾಡುವ ಅವಕಾಶವನ್ನು ಇನ್ನಷ್ಟು ಕಾಲ ವಿಸ್ತರಿಸಲಾಗಿದೆ. ಜೂನ್ 14ರವರೆಗೂ ಇದ್ದ ಕಾಲಾವಕಾಶ ಈಗ ಸೆಪ್ಟಂಬರ್ 14ರವರೆಗೂ ಮುಂದುವರಿದಿದೆ. ಯುಐಡಿಎಐ ಈ ವಿಚಾರವನ್ನು ಪ್ರಕಟಿಸಿದೆ. ಆಧಾರ್ ಕಾರ್ಡ್ ಹೊಂದಿರುವವರು ಶುಲ್ಕ ಇಲ್ಲದೇ ಸೆಪ್ಟಂಬರ್ 14ರವರೆಗೂ ಆನ್​ಲೈನ್​ನಲ್ಲಿ ಮಾಹಿತಿ ಅಪ್​ಡೇಟ್ ಮಾಡಬಹುದಾಗಿದೆ. ಆಧಾರ್ ಕೇಂದ್ರಕ್ಕೆ ಹೋಗಿ ಮಾಡಿಸುವುದಾದರೆ ₹50 ಶುಲ್ಕ ಪಾವತಿಸಬೇಕಾಗುತ್ತದೆ. ಸೆಪ್ಟಂಬರ್ 14ರ ಬಳಿಕವೂ ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಬಹುದಾದರೂ ₹50 ಶುಲ್ಕ ನೀಡಬೇಕಾಗುತ್ತದೆ. ಅಲ್ಲಿಯವರೆಗೆ ಉಚಿತ ಅಪ್​ಡೇಟ್​ಗೆ ಅವಕಾಶವಿದೆ.