ಬೆಂಗಳೂರಿನ ಬಗ್ಗೆ ನಟ ಆಮಿರ್ ಖಾನ್ ಮಾತು, ವಿದ್ಯಾರ್ಥಿಗಳು ಫುಲ್ ಖುಷ್

|

Updated on: Feb 13, 2024 | 11:11 PM

Aamir Khan: ಆಮಿರ್ ಖಾನ್ ತಮ್ಮ ನಿರ್ಮಾಣದ ‘ಲಾಪತಾ ಲೇಡೀಸ್’ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ತಮಗೂ ಬೆಂಗಳೂರಿಗೂ ಇರುವ ನಂಟಿನ ಬಗ್ಗೆ ಮಾತನಾಡಿದರು.

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ನಿರ್ಮಾಣದ ‘ಲಾಪತಾ ಲೇಡೀಸ್’ ಸಿನಿಮಾದ ಪ್ರೀಮಿಯರ್ ಶೋ ಗಾಗಿ ಅವರು ಮಾಜಿ ಪತ್ನಿ ಕಿರಣ್ ರಾವ್ ಜೊತೆಗೂಡಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಐಐಎಂ ನ ವಿದ್ಯಾರ್ಥಿಗಳೊಡನೆ ಕೂತು ‘ಲಾಪತಾ ಲೇಡೀಸ್’ ಸಿನಿಮಾ ವೀಕ್ಷಿಸಿದರು. ಬಳಿಕ ಮಾಧ್ಯಮಗಳೊಟ್ಟಿಗೆ ಸಂವಾದ ನಡೆಸಿದ ಆಮಿರ್ ಖಾನ್, ತಮ್ಮ ನಿರ್ಮಾಣದ ‘ಲಾಪತಾ ಲೇಡೀಸ್’ ಸಿನಿಮಾ ಬಗ್ಗೆ, ಬೆಂಗಳೂರಿನೊಟ್ಟಿಗೆ ತಮಗಿರುವ ನಂಟಿನ ಬಗ್ಗೆ ಮಾತನಾಡಿದರು. ಜೊತೆಗೆ ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಹೇಗೆ? ಇನ್ನೂ ಕೆಲವು ವಿಷಯಗಳ ಬಗ್ಗೆ ಆಮಿರ್ ಖಾನ್ ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ