Loading video

Video: ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ

|

Updated on: Mar 31, 2025 | 2:17 PM

ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಲಷ್ಕರ್ ಎ ತೊಯ್ಬಾದ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಅಬ್ದುಲ್​ ರೆಹಮಾನ್​ನನ್ನು ಹತ್ಯೆ ಮಾಡಲಾಗಿದ್ದು, ವಿಡಿಯೋ ಹೊರಬಿದ್ದಿದೆ. ಅಪರಿಚಿತ ವ್ಯಕ್ತಿಗಳು ಬೈಕ್​ನಲ್ಲಿ ಬಂದು ಅಂಗಡಿಯೊಳಗಿದ್ದ ರೆಹಮಾನ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪಾಕಿಸ್ತಾನ ಮತ್ತು ಭಾರತದಾದ್ಯಂತ ವಿವಿಧ ದಾಳಿಗಳಲ್ಲಿ ಭಾಗಿಯಾಗಿರುವುದರಿಂದ ಹಲವಾರು ದೇಶಗಳು ಈ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಕರೆದಿದೆ.

ಇಸ್ಲಾಮಾಬಾದ್, ಮಾರ್ಚ್​ 31: ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಲಷ್ಕರ್ ಎ ತೊಯ್ಬಾದ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಅಬ್ದುಲ್​ ರೆಹಮಾನ್​ನನ್ನು ಹತ್ಯೆ ಮಾಡಲಾಗಿದ್ದು, ವಿಡಿಯೋ ಹೊರಬಿದ್ದಿದೆ. ಅಪರಿಚಿತ ವ್ಯಕ್ತಿಗಳು ಬೈಕ್​ನಲ್ಲಿ ಬಂದು ಅಂಗಡಿಯೊಳಗಿದ್ದ ರೆಹಮಾನ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಪಾಕಿಸ್ತಾನ ಮತ್ತು ಭಾರತದಾದ್ಯಂತ ವಿವಿಧ ದಾಳಿಗಳಲ್ಲಿ ಭಾಗಿಯಾಗಿರುವುದರಿಂದ ಹಲವಾರು ದೇಶಗಳು ಈ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಕರೆದಿದೆ. ಈ ಗುಂಪಿಗೆ ಆರ್ಥಿಕ ನೆರವು ಸಂಗ್ರಹಿಸುವುದು ಆತನ ಜವಾಬ್ದಾರಿಯಾಗಿತ್ತು. ಮಾರ್ಚ್ 16 ರಂದು ಪಾಕಿಸ್ತಾನದಲ್ಲಿ ಮತ್ತೊಬ್ಬ ಭಯೋತ್ಪಾದಕ ಮತ್ತು ಹಫೀಜ್ ಸಯೀದ್‌ನ ಆಪ್ತ ಸಹಾಯಕನನ್ನು ಹತ್ಯೆ ಮಾಡಿದ ಕೆಲವು ದಿನಗಳ ನಂತರ ಇದು ಸಂಭವಿಸಿದೆ. ಮೃತನನ್ನು ಅಬು ಕತಾಲ್ ಎಂದು ಗುರುತಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ