ಅಂಬಿ ಸಮಾಧಿ ಮೇಲೆ ಅಭಿಷೇಕ್-ಅವಿವ ಮದುವೆ ಆಮಂತ್ರಣ ಇಟ್ಟ ಕುಟುಂಬ
ಜೂನ್ 5ರಂದು ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿಡಪ ಮದುವೆ ನೆರವೇರಲಿದೆ. ಈ ಮದುವೆಯ ಆಮಂತ್ರಣ ಪತ್ರವನ್ನು ಅಂಬಿ ಸಮಾಧಿ ಮೇಲೆ ಇಡುವ ಕೆಲಸ ಆಗಿದೆ.
ಇಂದು (ಮೇ 29) ಅಂಬರೀಷ್ ಅವರ ಜನ್ಮದಿನ. ಅವರು ನಮ್ಮ ಜೊತೆ ಇದ್ದಿದ್ದರೆ ಇಂದು 71ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಕುಟುಂಬದವರು ಹಾಗೂ ಅಭಿಮಾನಿಗಳಿಂದ ಅಂಬಿಯನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಜೂನ್ 5ರಂದು ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವ ಬಿಡಪ (Aviva Bidapa) ಮದುವೆ ನೆರವೇರಲಿದೆ. ಈ ಮದುವೆಯ ಆಮಂತ್ರಣ ಪತ್ರವನ್ನು ಅಂಬಿ ಸಮಾಧಿ ಮೇಲೆ ಇಡುವ ಕೆಲಸ ಆಗಿದೆ. ಇದು ಕುಟುಂಬದ ಪಾಲಿಗೆ ಭಾವುಕ ಕ್ಷಣ ಆಗಿತ್ತು. ಈ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ