ಜೂನ್ನಲ್ಲಿ ಅಭಿಷೇಕ್-ಅವಿವ ವಿವಾಹ; ಅದ್ದೂರಿಯಾಗಿ ನಡೆಯಲಿದೆ ಆರತಕ್ಷತೆ ಕಾರ್ಯಕ್ರಮ, ಇಲ್ಲಿದೆ ಆಮಂತ್ರಣ ಪತ್ರ
Abhishek Ambareesh And Aviva Bidapa Wedding: 2022ರ ಡಿಸೆಂಬರ್ 11ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅಭಿಷೇಕ್ ಹಾಗೂ ಅವಿವ ನಿಶ್ಚಿತಾರ್ಥ ನೆರವೇರಿತು. ಅಂದಿನಿಂದಲೂ ಇವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ.
ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಮಾಡೆಲ್ ಅವಿವ ಬಿಡಪ ಮದುವೆಗೆ ಮುಹೂರ್ತ ನಿಗದಿ ಆಗಿದೆ. ಜೂನ್ 5ರಂದು (ಸೋಮವಾರ) ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ಜರುಗಲಿದೆ. ಸದ್ಯ ಅಭಿಷೇಕ್ ಅಂಬರೀಷ್–ಅವಿವ (Aviva Bidapa) ವಿವಾಹದ ಆಮಂತ್ರಣ ಪತ್ರ ವೈರಲ್ ಆಗಿದೆ. ಇವರ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಭಾವಿ ದಂಪತಿಗೆ ಈಗಲೇ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
2022ರ ಡಿಸೆಂಬರ್ 11ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅಭಿಷೇಕ್ ಹಾಗೂ ಅವಿವ ನಿಶ್ಚಿತಾರ್ಥ ನೆರವೇರಿತು. ಕುಟುಂಬದವರು, ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿತ್ತು. ಅಂದಿನಿಂದಲೂ ಇವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ.
ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಸುಮಲತಾ ಅವರು ಚಿತ್ರರಂಗದಲ್ಲಿ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡವರು. ಅಂಬರೀಷ್ ಕೂಡ ಸಾಕಷ್ಟು ಜನಪ್ರಿಯತೆ ಹೊಂದಿದ್ದರು. ಹೀಗಾಗಿ, ಎರಡೂ ಕ್ಷೇತ್ರದ ಗಣ್ಯರು ಆರತಕ್ಷತೆಗೆ ಬರಲಿದ್ದಾರೆ. ಮದುವೆಗೆ ಆಪ್ತ ಬಳಗದವರು ಮಾತ್ರ ಹಾಜರಿ ಹಾಕಲಿದ್ದಾರೆ. ಇನ್ನು, ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಸುಮಾರು 1 ಲಕ್ಷ ಜನರು ಇದರಲ್ಲಿ ಭಾಗಿ ಆಗೋ ನಿರೀಕ್ಷೆ ಇದೆ.
ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಮದುವೆ ದಿನಾಂಕ, ಸ್ಥಳ, ಅತಿಥಿಗಳು ಇನ್ನಿತರೆ, ಮದುವೆ ಬೆಂಗಳೂರಿನಲ್ಲಾ? ಮಂಡ್ಯದಲ್ಲಾ?
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಪರಿಚಯ ಪ್ರೀತಿಗೆ ತಿರುಗಿತು. ಕುಟುಂಬದ ಒಪ್ಪಿಗೆ ಪಡೆದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಮದುವೆ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 am, Mon, 29 May 23