ರೆಟ್ರೋ ಶೈಲಿಯಲ್ಲಿ ಬಂದ ಅಭಿಷೇಕ್-ಅವಿವ; ಅಭಿಮಾನಿಗಳಿಗೆ ಅಂಬರೀಷ್ ನೆನಪಿಗೆ ಬಂದ್ರು
Abhishek Ambareesh And Aviva Bidapa: ಕೆಆರ್ಜಿ ಕನೆಕ್ಟ್ಸ್ ಹೊಸ ರೀಲ್ಸ್ ಬಿಡುಗಡೆ ಮಾಡಿದೆ. ಈ ರೀಲ್ಸ್ನಲ್ಲಿ ಅಭಿಷೇಕ್ ಹಾಗೂ ಅವಿವ ಅವರು ಅಂಬರೀಷ್ ಅವರ ಹಳೆಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವ ಬಿಡಪ ಶೀಘ್ರದಲ್ಲೇ ಹಸೆಮಣೆ ಏರುತ್ತಿದ್ದಾರೆ. ಇವರ ಮದುವೆಯಾ ಆಮಂತ್ರಣ ಪತ್ರ ವೈರಲ್ ಆಗಿದೆ. ಇಂದು (ಮೇ 29) ಅಂಬರೀಷ್ ಜನ್ಮದಿನ. ಈ ಹಿನ್ನೆಲೆಯಲ್ಲಿ ಅಂಬರೀಷ್ ಅವರ ಸಮಾಧಿಗೆ ಆಮಂತ್ರಣ ಪತ್ರ ಇಟ್ಟು ಪೂಜೆ ಸಲ್ಲಿಕೆ ಮಾಡಲಾಗಿದೆ. ಜೂನ್ 5ರಂದು ವಿವಾಹ ಕಾರ್ಯ ನಡೆಯಲಿದ್ದು, ಜೂನ್ 7ರಂದು ಆರತಕ್ಷತೆ ನಡೆಯಲಿದೆ. ಈಗ ಅಭಿಷೇಕ್ ಅಂಬರೀಷ್ ಹಾಗೂ ಅವಿವ ಅವರು ರೆಟ್ರೋ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಅಭಿಷೇಕ್ ಅವರನ್ನು ನೋಡಿದ ಅನೇಕರಿಗೆ ಅಂಬಿಯ ನೆನಪಾಗಿದೆ.
ಕೆಆರ್ಜಿ ಕನೆಕ್ಟ್ಸ್ ಹೊಸ ರೀಲ್ಸ್ ಬಿಡುಗಡೆ ಮಾಡಿದೆ. ಈ ರೀಲ್ಸ್ನಲ್ಲಿ ಅಭಿಷೇಕ್ ಹಾಗೂ ಅವಿವ ಅವರು ಅಂಬರೀಷ್ ಅವರ ಹಳೆಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ಒಲವಿನ ಉಡುಗೊರೆ ಕೊಡಲೇನು..’, ‘ಚಳಿ ಚಳಿ ತಾಳೆನು ಈ ಚಳಿಯ..’, ‘ಮಂಡ್ಯದ ಗಂಡು..’ ಹಾಡುಗಳಿಗೆ ಅವಿವ ಹಾಗೂ ಅಭಿಷೇಕ್ ಡ್ಯಾನ್ಸ್ ಮಾಡಿದ್ದಾರೆ. ಅಭಿಷೇಕ್ ಅವರನ್ನು ನೋಡಿದ ಅನೇಕರಿಗೆ ಅಂಬರೀಷ್ ನೆನಪಾಗಿದೆ.
‘ಸ್ಯಾಂಡಲ್ವುಡ್ನ ರೆಬೆಲ್ ಸ್ಟಾರ್, ನಮ್ಮೆಲ್ಲರ ಪ್ರೀತಿಯ ಡಾ. ಅಂಬರೀಷ್ ಅವರ ಹುಟ್ಟುಹಬ್ಬದ ಸ್ಮರಣೆಯಲ್ಲಿ ಒಂದು ವಿಶೇಷವಾದ tribute. ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿಡಪ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು’ ಎಂದು ಕೆಆರ್ಜಿ ಕನೆಕ್ಟ್ಸ್ ವಿಡಿಯೋ ಹಂಚಿಕೊಂಡು ಅಡಿಬರಹ ನೀಡಿದೆ.
ಇದನ್ನೂ ಓದಿ: ಅಭಿಷೇಕ್ ಅಂಬರೀಷ್ನ ಮದುವೆ ಆಗ್ತಿರೋ ಈ ಅವಿವ ಬಿಡಪ ಯಾರು? ಇಲ್ಲಿದೆ ಮಾಹಿತಿ
View this post on Instagram
ಸದ್ಯ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಕೆಲಸಗಳಲ್ಲಿ ಅಭಿಷೇಕ್ ಅಂಬರೀಷ್ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ಗೆ ಜೊತೆಯಾಗಿ ರಚಿತಾ ರಾಮ್, ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ. ದುನಿಯಾ ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಕೆಲಸಗಳಲ್ಲಿ ಅಭಿ ತೊಡಗಿಕೊಂಡಿದ್ದಾರೆ.
ಮದುವೆ ಬಗ್ಗೆ ಮಾಹಿತಿ..
ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ