ಅಭಿ-ಅವಿವಾ ಬೀಗರೂಟಕ್ಕೆ ಭರದ ಸಿದ್ಧತೆ: ಹೀಗೆ ತಯಾರಾಗುತ್ತಿದೆ ಬೀಗರೂಟಕ್ಕೆ ಅಡುಗೆ

ಅಭಿ-ಅವಿವಾ ಬೀಗರೂಟಕ್ಕೆ ಭರದ ಸಿದ್ಧತೆ: ಹೀಗೆ ತಯಾರಾಗುತ್ತಿದೆ ಬೀಗರೂಟಕ್ಕೆ ಅಡುಗೆ

ಮಂಜುನಾಥ ಸಿ.
|

Updated on: Jun 16, 2023 | 7:30 AM

Abhishek-Aviva: ಅಭಿಷೇಕ್-ಅವಿವಾ ಮದುವೆ ಮುಗಿದಿದ್ದು ಇಂದು ಬೀಗರ ಔತಣ ಕೂಟ ನಡೆಯಲಿದೆ. ಔತಣ ಕೂಟಕ್ಕೆ ಅಡುಗೆ ಹೇಗೆ ಸಿದ್ಧವಾಗುತ್ತಿದೆ? ಇಲ್ಲಿದೆ ವಿಡಿಯೋ

ಅಭಿಷೇಕ್-ಅವಿವಾ (Abhishek-Aviva) ಅವರ ಮದುವೆ ಬೀಗರ ಔತಣ ಕೂಟಕ್ಕೆ ಸಿದ್ದತೆ ಜೋರಾಗಿದೆ. ಸೌದೆ ಒಲೆಯ ಮೇಲೆ ಅಡುಗೆಗಳು ತಯಾರಾಗುತ್ತಿವೆ. ಅಡುಗೆ ಭಟ್ಟರು ಅಡುಗೆ ಮಾಡುವುದರಲ್ಲಿ, ತರಕಾರಿ ಹೆಚ್ಚುವುದರಲ್ಲಿ ನಿರತರಾಗಿದ್ದಾರೆ. ಬೀಗರೂಟ ಆಯೋಜಿಸಿರುವ ಗೆಜ್ಜೆಲೆಗೆರೆಗೆ ಅಭಿಷೇಕ್ ಅಂಬರೀಶ್ ಭೇಟಿ ನೀಡಿದ್ದು ತಯಾರಿ ಹೇಗಿದೆ ಎಂಬುದನ್ನು ವೀಕ್ಷಿಸಿದ್ದಾರೆ. ಅಭಿಷೇಕ್ ಅವರನ್ನು ನೋಡಿ ಕೆಲಸ ಮಾಡುತ್ತಿದ್ದ ಮಹಿಳೆಯರು, ಅಡುಗೆ ಭಟ್ಟರು, ಸಹಾಯಕರು ಮುತ್ತಿಕೊಂಡು ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ