ಅಭಿಷೇಕ್ ಬಚ್ಚನ್ ಅವರಲ್ಲಿ ರಾಶಿ ರಾಶಿ ಸ್ನೀಕರ್ಗಳು, ಅವುಗಳಲ್ಲಿ ಹೆಚ್ಚಿನವು ರೂ. 2 ಲಕ್ಷಕ್ಕಿಂತ ಹೆಚ್ಚು ಬೆಲೆಯುಳ್ಳವು!
ಅಮಿತ್ ಜೊತೆ ಅಭಿಷೇಕ್ ಹಾಗಿರಲಿ, ಬೇರೆ ಯಾರನ್ನೂ ಹೋಲಿಕೆ ಮಾಡಲಾಗದು. ಓಕೆ ವಿಷಯವೇನೆಂದರೆ, ವರ್ಷದಲ್ಲಿ ಅರ್ಧಕ್ಕಿಂತ ಜಾಸ್ತಿ ಸಮಯ ನಿರುದ್ಯೋಗಿಯಾಗಿ ಸಮಯ ಕಳೆಯುವ ಅಭಿಷೇಕ್ ಅವರಲ್ಲಿ ಸಿಕ್ಕಾಪಟ್ಟೆ ಸ್ನೀಕರ್ಗಳ ಸಂಗ್ರಹವಿದೆ
ದಿವಂಗತ ಪಿ ವಿ ನರಸಿಂಹರಾವ್ ಅವರು ಪ್ರಧಾನ ಮಂತ್ರಿಗಳಾಗಿದ್ದ ಅವರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ಭಾರತದ ಮಾರ್ಕೆಟ್ ಜಾಗತೀಕರಣಗೊಳಿದಾಗ ನೈಕಿ, ಪ್ಯೂಮಾ, ಆಡಿದಾಸ್ ಮೊದಲಾದ ನೂರೆಂಟು ಶೂ ತಯಾರಕ ಕಂಪನಿಗಳು ನಮ್ಮಲ್ಲಿಗೆ ಬಂದಿದ್ದು ನಿಮಗೆ ಗೊತ್ತಿದೆ. ಕಾನ್ಪುರ್, ಬಾಟಾ, ಕೆರೊನಾ ಕಂಪನಿಗಳ ಚಪ್ಪಲಿ ಮತ್ತು ಶೂ ಬ್ರ್ಯಾಂಡ್ಗಳನ್ನು ಬಿಟ್ಟರೆ ನಮಗೆ ಸಿನಿಮಾ ತಾರೆಯರು ತೊಡುತ್ತಿದ್ದ ವಿದೇಶೀ ಮೂಲದ ಪಾದರಕ್ಷೆ, ಬೂಟುಗಳ ಹೆಸರುಗಳು ನಮಗೆ ಗೊತ್ತೇ ಆಗುತ್ತಿರಲಿಲ್ಲ. ಒಂದು ಜೊತೆ ಚಪ್ಪಲಿ ತೆಗೆದುಕೊಂಡರೆ ಒಂದು ವರ್ಷ, ಒಂದು ಜೊತೆ ಶೂ ತೆಗೆದುಕೊಂಡರೆ 10 ವರ್ಷ ನಡೆಸುತ್ತಿದ್ದ ಕಾಲವದು. ನನ್ನ ಮದುವೆಗೆ ತಕ್ಕೊಂಡ ಶೂ ಕಣೋ ಇದು ಅಂತ ಪಾಲಿಶನ್ನೇ ಕಾಣದ ಶೂಗಳನ್ನು ತಾತಂದಿರು ತೋರಿಸುವ ಶೂಗಳನ್ನು ನೀವೂ ನೋಡಿರಬಹುದು.
ನಾವು ಶೂಗಳ ಬಗ್ಗೆ ಮಾತಾಡುತ್ತಿರುವುದಕ್ಕೆ ಕಾರಣವಿದೆ. ಈ ಎಮ್ಎನ್ಸಿಗಳು ಹತ್ತಾರು ಬಗೆಯ ಶೂಗಳನ್ನು ತಯಾರು ಮಾಡುತ್ತಾರೆ. ಆಫೀಸಿಗೆ ಫಾರ್ಮಲ್ಸ್ ಆಗಿ ಮಿರಮಿರ ಮಿಂಚುವ ಲೆದರ್ ಶೂಸ್, ಆಟಗಳಿಗೆ ಸ್ಪೋರ್ಟ್ಸ್ ಶೂಸ್, ವಾಕ್ ಮಾಡಲು ಕ್ಯಾನ್ವಾಸ್ ಥರದ ಶೂಗಳು, ಜೀನ್ಸ್ ಧರಿಸಿದಾಗ ಹಾಕಲು ಸ್ನೀಕರ್ಸ್-ಒಂದೇ ಎರಡೇ?
ಬಿಗ್ ಬಿ ಅವರ ಪುತ್ರ ಅಭಿಷೇಕ್ ಬಚ್ಚನ್ ನಿಮಗೆಲ್ಲ ಗೊತ್ತು. ಅಪ್ಪನ ಹೆಸರಿನ ಹೊರತಾಗಿಯೂ ಬಾಲಿವುಡ್ ತನ್ನ ಐಡೆಂಟಿಟಿ ಸೃಷ್ಟಿಸಲು ವಿಫಲನಾದ ನಟ ಇವರು. ಅಭಿಯ ವಯಸ್ಸಿನಲ್ಲಿ ಬಿಗ್ ಬಿ ಮೂರು-ಮೂರು ಶಿಫ್ಟ್ಗಳಲ್ಲಿ ದುಡಿಯುತ್ತಿದ್ದರು. ದಶಕಗಳ ಕಾಲ ಸೂಪರ್ ಸ್ಟಾರ್ ಆಗಿ ಮೆರೆದ ನಟನೆಂದರೆ ಸುಮ್ನೇನಾ. ಜನ ಅವರನ್ನು ಈಗಲೂ ಸೂಪರ್ ಸ್ಟಾರ್ ಅಂತಲೇ ಭಾವಿಸುತ್ತಾರೆ. ತನ್ನ 78 ನೇ ವಯಸ್ಸಿನಲ್ಲೂ ಅಮಿತಾಭ್ ಬಚ್ಚನ್ ಬಿಡುವಿಲ್ಲದೆ ಕೆಲಸ ಮಾಡುತ್ತಾರೆ.
ಬಿಡಿ, ಅಮಿತ್ ಜೊತೆ ಅಭಿಷೇಕ್ ಹಾಗಿರಲಿ, ಬೇರೆ ಯಾರನ್ನೂ ಹೋಲಿಕೆ ಮಾಡಲಾಗದು. ಓಕೆ ವಿಷಯವೇನೆಂದರೆ, ವರ್ಷದಲ್ಲಿ ಅರ್ಧಕ್ಕಿಂತ ಜಾಸ್ತಿ ಸಮಯ ನಿರುದ್ಯೋಗಿಯಾಗಿ ಸಮಯ ಕಳೆಯುವ ಅಭಿಷೇಕ್ ಅವರಲ್ಲಿ ಸಿಕ್ಕಾಪಟ್ಟೆ ಸ್ನೀಕರ್ಗಳ ಸಂಗ್ರಹವಿದೆ. ಅವರಲ್ಲಿರುವ ಸ್ನೀಕರ್ಗಳನ್ನು ಕಂಡು ಅವರ ಮಿತ್ರರು, ಸಹೋದ್ಯೋಗಿ ನಟರು ಗಾಬರಿಯಾಗುತ್ತಾರಂತೆ. 20,000 ರೂ ಬೆಲೆ ಬಾಳುವ ಸ್ನೀಕರ್ಗಳಿಂದ ಹಿಡಿದು 2 ಲಕ್ಷ ರೂ. ಗಳಿಗಿಂತಲೂ ಹೆಚ್ಚು ಬೆಲೆಬಾಳುವ ಸ್ನೀಕರ್ ಗಳ ಸಂಗ್ರಹ ಅವರಲ್ಲಿದೆ.
ಅವುಗಳಲ್ಲಿ ಅಪ್ಪನ ಸಂಪಾದನೆಯಲ್ಲಿ ತೆಗೆದುಕೊಂಡಿರುವ ಜೊತೆಗಳು ಎಷ್ಟು, ತಮ್ಮ ಸ್ವಂತ ದುಡಿಮೆಯಲ್ಲಿ ತೆಗೆದುಕೊಂಡ ಸ್ನೀಕರ್ಗಳು ಎಷ್ಟೆಂದು ಅವರೇ ನಮಗೆ ಹೇಳಬೇಕು!
ಇದನ್ನೂ ಓದಿ: Radhika Pandith: ತಾನೇ ಹಾಡು ಹಾಕಿಕೊಂಡು ಡಾನ್ಸ್ ಮಾಡಿದ ಯಥರ್ವ್, ಜೊತೆಗೂಡಿದ ಆಯ್ರಾ; ವಿಡಿಯೊ ನೋಡಿ