AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರುಡುಮಲೆ ಸಾಲಿಗ್ರಾಮ ಗಣೇಶನ ದೇವಸ್ಥಾನಕ್ಕೆ ಪೌರಾಣಿಕ ಐತಿಹ್ಯವಿದೆ; ರಾಮ, ಕೃಷ್ಣ ಸಹ ಇಲ್ಲಿ ಪೂಜೆ ಸಲ್ಲಿಸಿದ್ದಾರೆ!

ಕುರುಡುಮಲೆ ಸಾಲಿಗ್ರಾಮ ಗಣೇಶನ ದೇವಸ್ಥಾನಕ್ಕೆ ಪೌರಾಣಿಕ ಐತಿಹ್ಯವಿದೆ; ರಾಮ, ಕೃಷ್ಣ ಸಹ ಇಲ್ಲಿ ಪೂಜೆ ಸಲ್ಲಿಸಿದ್ದಾರೆ!

TV9 Web
| Edited By: |

Updated on: Sep 08, 2021 | 6:15 PM

Share

ಈ ದೇವಸ್ಥಾನದಲ್ಲಿರುವ ಏಕಶಿಲೆ ಗಣೇಶನ ಮೂರ್ತಿಯನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಪ್ರತಿಷ್ಠಾಪಿಸದರೆಂಬ ಪ್ರತೀತಿ ಇದೆ. ಮಹಾ ಋಷಿಗಳೆನಿಸಿಕೊಂಡಿದ್ದ ಕೌಂಡಿನ್ಯರಿಂದಲೂ ವಿಘ್ನೇಶ್ವರನಿಗೆ ಆರಾಧನೆ ನಡೆದಿದೆಯಂತೆ.

ಬೆಳಗಿದರೆ ವಿನಾಯಕ ಚತುರ್ಥಿ, ವಿಘ್ನೇಶ್ವರನಿಗೆ ದೇಶದೆಲ್ಲೆಡೆ ಪೂಜೆ ಆರಾಧನೆ ಸರ್ಕಾರ ಹಲವಾರು ನಿಬಂಧನೆಗಳನ್ನು ವಿಧಿಸಿದೆಯಾದರೂ ಭಕ್ತರಲ್ಲಿ ಸಂಭ್ರಮ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಉತ್ಸವದ ತಯಾರಿಗಳು ಭರದಿಂದ ಸಾಗಿವೆ. ಗಣೇಶನ ಹಬ್ಬದ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ಕುರಡುಮಲೆ ಗ್ರಾಮದಲ್ಲಿರುವ 18 ಅಡಿ ಎತ್ತರದ ಸಾಲಿಗ್ರಾಮ ಶಿಲೆಯ ಗಣಪನ ಬಗ್ಗೆ ಮಾತಾಡದೆ ಹೋದರೆ ಹಬ್ಬ ಅಪೂರ್ಣವೆನಿಸುತ್ತದೆ ಅಂದರೆ ತಪ್ಪಾಗಲಾರದು. ಕೂಟಾದ್ರಿ ಪರ್ವತದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ಧವಾದ ಗಣೇಶನ ದೇವಾಲಯವಿದು. ದೇವಾಲಯದ ಸುತ್ತಲಿರುವ ಬೆಟ್ಟದ ಸಾಲು ದೇವಸ್ಥಾನಕ್ಕೆ ಹೆಚ್ಚಿನ ಮೆರಗನ್ನು ನೀಡಿದೆ.

ಈ ದೇವಸ್ಥಾನದಲ್ಲಿರುವ ಏಕಶಿಲೆ ಗಣೇಶನ ಮೂರ್ತಿಯನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಪ್ರತಿಷ್ಠಾಪಿಸದರೆಂಬ ಪ್ರತೀತಿ ಇದೆ. ಮಹಾ ಋಷಿಗಳೆನಿಸಿಕೊಂಡಿದ್ದ ಕೌಂಡಿನ್ಯರಿಂದಲೂ ವಿಘ್ನೇಶ್ವರನಿಗೆ ಆರಾಧನೆ ನಡೆದಿದೆಯಂತೆ. ಹರಕೆ ಹೊತ್ತು ದೇವಸ್ಥಾನಕ್ಕೆ ಬರುವ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ.
ಈ ದೇವಸ್ಥಾಕ್ಕೆ ಬೇರೆಬೇರೆ ಪೌರಾಣಿಕ ಐತಿಹ್ಯಗಳಿವೆ. ಸೀತೆಯನ್ನು ರಾವಣ ಆಪಹರಿಸಿಕೊಂಡು ಲಂಕೆಗೆ ಒಯ್ದಾಗ, ಅವನ ವಿರುದ್ಧ ಯುದ್ಧಕ್ಕೆ ಹೊರಡುವ ಮುನ್ನ ರಾಮನು ಈ ದೇವಸ್ಥಾನಲ್ಲಿ ಪೂಜೆ ಸಲ್ಲಿಸಿದನಂತೆ.

ದ್ವಾಪರಯುಗದಲ್ಲಿ ಪಾಂಡವರು ಕೌರವರ ಮೇಲೆ ಯುದ್ಧಕ್ಕೆ ಹೋಗುವ ಮೊದಲು ಇಲ್ಲಿನ ಮಹಾಗಣಪತಿಗೆ ಪೂಜೆ ಸಲ್ಲಿಸಿದ್ದರು. ಇದಲ್ಲದೆ ಚೌತಿಯಂದು ಚಂದ್ರನನ್ನು ನೋಡಿದ ಶ್ರೀಕೃಷ್ಣ ಶಮಂತಕಮಣಿಯನ್ನು ಕದ್ದನೆಂಬ ಅಪವಾದವನ್ನು ಈ ಗಣೇಶನ ದರ್ಶನದಿಂದಲೇ ಬಗೆಹರಿಸಿಕೊಂಡ ಎನ್ನುವುದು ಸಹ ಪುರಾಣಗಳಲ್ಲಿದೆ.

ಅದೇ ರೀತಿ ಈಗಲೂ ಚೌತಿಯ ಚಂದ್ರನ ದರ್ಶನ ಮಾಡಿದರೆ ಗಣೇಶನ ದರ್ಶನದಿಂದ ಪಾಪ ಪರಿಹಾರವಾಗುತ್ತದೆ ಎನ್ನುತ್ತಾರೆ. ಈ ವಿಡಿಯೋನಲ್ಲಿ ನೀವು ನೋಡುತ್ತಿರುವ ಹಾಗೆ, ಖ್ಯಾತ ರಾಜಕಾರಣಿಗಳೂ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಈ ಗಣೇಶನ ದರ್ಶನ ಪಡೆದುಕೊಳ್ಳುತ್ತಾರೆ.

ಅಂದಹಾಗೆ, ಸದರಿ ದೇವಸ್ಥಾನವು ಬೆಂಗಳೂರಿನಿಂದ ಬಹಳ ದೂರವೇನೂ ಇಲ್ಲ. ಗಣೇಶನ ಉತ್ಸವಕ್ಕೆ ಮೊದಲು ಅಥವಾ ನಂತರ ಕುಟುಂಬದೊಂದಿಗೆ ಭೇಟಿ ನೀಡಿ ದರ್ಶನ ಭಾಗ್ಯ ಪಡೆದುಕೊಳ್ಳಬಹುದು.

ಇದನ್ನೂ ಓದಿ:  Viral Video: ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ತಡೆಯಲು ಕಾರನ್ನು ಮನೆ​ಗೆ ಕಟ್ಟಿ ಹಾಕಿದ ಮಾಲೀಕ; ವಿಡಿಯೋ ವೈರಲ್