ನವೆಂಬರ್​ನಿಂದ ಕೆಲ ಫೋನ್​ಗಳಲ್ಲಿ ವ್ಯಾಟ್ಸ್ಯಾಪ್ ಸೇವೆ ಸ್ಥಗಿತ: ‘ಹೋದೆಯಾ ದೂರ ಓ ಜೊತೆಗಾರ’ ಆಗಲಿದೆ ನಿಮ್ಮ ರಿಂಗ್ ಟೋನ್!!

ನವೆಂಬರ್​ನಿಂದ ಕೆಲ ಫೋನ್​ಗಳಲ್ಲಿ ವ್ಯಾಟ್ಸ್ಯಾಪ್ ಸೇವೆ ಸ್ಥಗಿತ: ‘ಹೋದೆಯಾ ದೂರ ಓ ಜೊತೆಗಾರ’ ಆಗಲಿದೆ ನಿಮ್ಮ ರಿಂಗ್ ಟೋನ್!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2021 | 4:52 PM

ಆ್ಯಪಲ್ ಐಫೋನ್ 6, 6ಎಸ್ ಮತ್ತು 6 ಎಸ್ ಫ್ಲಸ್ ಪೋನ್​​ಗಳನ್ನು ಹೊಂದಿರುವವರು ಸಹ ವ್ಯಾಟ್ಸ್ಯಾಪ್ ಸೇವೆಯಿಂದ ವಂಚಿತರಾಗಲಿದ್ದಾರೆ.

ಕೆಲ ವ್ಯಾಟ್ಸ್ಯಾಪ್ ಪ್ರಿಯರಿಗೆ ಈ ಬಾರಿಯ ರಾಜ್ಯೋತ್ಸವ ದಿನದಂದು ನಿರಾಶೆ ವ್ಯಾಟ್ಸ್ಯಾಪ್ ಌಪ್ ಕೆಲ ನಿರ್ದಿಷ್ಟ ಫೋನ್ಗಳಲ್ಲಿ ಸೇವೆ ಒದಗಿಸುವುದನ್ನು ಲಭ್ಯವಿರುವ ಮಾಹಿತಿಯ ಪ್ರಕಾರ ನಿಮ್ಮ-ನಮ್ಮಲ್ಲಿರುವ ಹಲವಾರು ಸ್ಮಾರ್ಟ್ ಫೋನ್ ಗಳಲ್ಲಿ ವ್ಯಾಟ್ಸ್ಯಾಪ್ ಆ್ಯಪ್​ ನವೆಂಬರ್ ಒಂದರಿಂದ ನಿಷ್ಕ್ರಿಯಗೊಳ್ಳಲಿದೆ. ಓಎಸ್ ಹಳೆ ಮಾದರಿ ಆವೃತ್ತಿಗಳಲ್ಲಿ ತನ್ನ ಸೇವೆಯನ್ನು ಸಂಸ್ಥೆಯು ಕೊನೆಗಾಣಿಸಲಿದೆ.

ವ್ಯಾಟ್ಸ್ಯಾಪ್ ಎಫ್ ಎ ಕ್ಯೂ ವಿಭಾಗದಿಂದ ಲಭ್ಯವಿರುವ ಮಾಹಿತಿ ಪ್ರಕಾರ ಌಂಡ್ರಾಯ್ಡ್ 2.3.7 ಮತ್ತು ಅದಕ್ಕಿಂತ ಕಡಿಮೆ ಆಪರೇಟಿಂಗ್ ವಿಧಾನದ ಮೂಲಕ ರನ್ ಆಗುವ ಪೋನ್ ಗಳಲ್ಲಿ ಮತ್ತು ಐಒಎಸ್ 8 ಮತ್ತು ಅದಕ್ಕಿಂತ ಕಮ್ಮಿ ಆಪರೇಟಿಂಗ್ ವಿಧಾನಗಳ ಮೂಲಕ ರನ್ ಅಗುವ ಐಫೋನ್ ಗಳಲ್ಲಿ ವ್ಯಾಟ್ಸ್ಯಾಪ್ ಆ್ಯಪ್​​ ಮೂಲಕ ಚ್ಯಾಟ್ ಮಾಡುವುದು ಸಾಧ್ಯವಾಗುವುದಿಲ್ಲ.

ಹಾಗೆಯೇ, 4.0.3 ಐಸ್ ಕ್ರೀಮ್, ಸ್ಯಾಂಡ್ವಿಚ್, ಐಒಎಸ್9, ಕೆಎಐ 5.0 ಮೊದಲಾದ ಆವೃತ್ತಿಗಳಿಗೂ ವ್ಯಾಟ್ಸ್ಯಾಪ್ ಸಪೋರ್ಟ್ ಮಾಡಲಾರದು. ಆಗಲೇ ಹೇಳಿದಂತೆ ಸಂಸ್ಥೆಯ ಎಫ್ ಎ ಕ್ಯೂ ವಿಭಾಗದಲ್ಲಿ ಎಲ್ಲ ಮಾಹಿತಿ ಲಭ್ಯವಿದೆ.

ಆ್ಯಪಲ್ ಐಫೋನ್ 6, 6ಎಸ್ ಮತ್ತು 6 ಎಸ್ ಫ್ಲಸ್ ಪೋನ್​​ಗಳನ್ನು ಹೊಂದಿರುವವರು ಸಹ ವ್ಯಾಟ್ಸ್ಯಾಪ್ ಸೇವೆಯಿಂದ ವಂಚಿತರಾಗಲಿದ್ದಾರೆ.

ಹಾಗಾಗಿ, ನೀವು ವ್ಯಾಟ್ಸ್ಯಾಪ್ ಪ್ರಿಯರಾಗಿದ್ದು ಮೇಲೆ ತಿಳಿಸಿರುವ ಫೋನ್ ಹೊಂದಿದ್ದರೆ, ನವೆಂಬರ್ ಒಂದಕ್ಕಿಂತ ಮೊದಲು ಬದಲಾಯಿಸುವುದು ಒಳಿತು.

ಇದನ್ನೂ ಓದಿ: ಯುವತಿಯನ್ನು ಚುಡಾಯಿಸಿದಕ್ಕೆ ಗುಂಪುಗಳ ನಡುವೆ ಭಾರಿ ಘರ್ಷಣೆ, ವಿಡಿಯೋಗಳು ವೈರಲ್