ಟಿಬಿ ಡ್ಯಾಂನಿಂದ ತುಂಗಭದ್ರಾ ನದಿಗೆ 80,000 ಕ್ಯೂಸೆಕ್ಸ್ ನೀರು ಹೊರಹರಿವು, ಮುಳುಗಡೆ ಭೀತಿಯಲ್ಲಿ ಕಂಪ್ಲಿ ಸೇತುವೆ
ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ಗಳಲ್ಲಿ ಕೆಲವು ನಾಜೂಕು ಸ್ಥಿತಿಯಲ್ಲಿವೆ, ಹಾಗಾಗಿ ಜಲಾಶಯದಲ್ಲಿ 80-90 ಅಡಿಗಳಿಗಿಂತ ಹೆಚ್ಚು ನೀರನ್ನು ಸ್ಟೋರ್ ಮಾಡಲಾಗಲ್ಲ, ನೀರನ್ನು ನದಿಗೆ ಹರಿಬಿಡುವುದು ಅನಿವಾರ್ಯವಾಗಿದೆ. ಇನ್ನಷ್ಟು ನೀರು ಹರಿಬಿಟ್ಟರೆ ಕಂಪ್ಲಿ ಸೇತುವೆ ಮುಳುಗಡೆ ಆಗೋದು ನಿಶ್ಚಿತ. ಮಾನ್ಸೂನ್ ಸೀಸನ್ ಶುರುವಾಗಿ ಒಂದು ತಿಂಗಳು ಕೂಡ ಅಗಿಲ್ಲ, ಮುಂದೆ ಇನ್ನೂ ದೊಡ್ಡ ಮಳೆಗಳಾಗಲಿವೆ.
ಬಳ್ಳಾರಿ, ಜುಲೈ 4: ವಿಡಿಯೋದಲ್ಲಿ ನಿಮಗೆ ಕಾಣುತ್ತಿರೋದು ಕಂಪ್ಲಿ ಪಟ್ಟಣದಲ್ಲಿರುವ ಸೇತುವೆ (Kampli bridge). ಇದು ಕಂಪ್ಲಿ ಮತ್ತು ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿರುವುದರಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸೇತುವೆ ಕೆಳಗಡೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದದಲ್ಲಿ ನೀರನ್ನು ತುಂಗಭದ್ರಾ ನದಿಗೆ ಹರಿಸಿರುವುದರಿಂದ ಕಂಪ್ಲಿ ಸೇತುವೆಗೆ ಮುಳುಗಡೆ ಭೀತಿ ಕಾಡುತ್ತಿದೆ. ನಮ್ಮ ಕೊಪ್ಪಳ ವರದಿಗಾರ ನೀಡಿರುವ ಮಾಹಿತಿ ಪ್ರಕಾರ 80,000 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗಿದೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಇನ್ನೂ ರಿಪೇರಿಯಾಗಿಲ್ಲ, ಸರ್ಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ ನಾಯಕರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ