ಡಿಕೆ ರವಿಯವರ ಸಾವಿಗೆ ರೋಹಿಣಿಯವರ ಪತಿ ಜೊತೆ ನಡೆದ ವಾಗ್ವಾದ ಪ್ರೇರಣೆಯಾಯಿತು ಅಂತ ವಕೀಲರೊಬ್ಬರು ಹೇಳುತ್ತಾರೆ!
ರವಿ ಮತ್ತು ರೋಹಿಣಿ ನಡುವೆ ಮದುವೆಗೆ ಮೊದಲು ಸ್ನೇಹವಿರಬಹುದು. ಆದರೆ ಅವರಿಬ್ಬರು ಬೇರೆ ಬೇರೆ ಸಂಗಾತಿಗಳನ್ನು ವರಿಸಿಕೊಂಡ ನಂತರ ಆ ಸ್ನೇಹಕ್ಕೆ ತೆರೆಬೀಳಬೇಕಿತ್ತು. ಅದು ಹಾಗಾಗಿಲ್ಲ. ಹಾಗಂತ ಕೇವಲ ರೋಹಿಣಿಯವರ ತಲೆ ಮೇಲೆ ಗೂಬೆ ಕೂರಿಸುವುದು ಸರೀನಾ?
ಬೆಂಗಳೂರು: ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ವಕೀಲ ಸೂರ್ಯ ಮುಕುಂದರಾಜ್ ಅವರು ಉನ್ನತಸ್ತರದ ಅಧಿಕಾರಿಗಳಾಗಿರುವ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಡಿ ರೂಪಾ ಮೌದ್ಗೀಲ್ (D Roopa Moudgil) ನಡುವೆ ನಡೆಯುತ್ತಿರುವ ಜಗಳದ ಮೆಲೆ ಸ್ವಲ್ಪ ಬೆಳಕು ಚೆಲ್ಲುವ ಪ್ರಯಾಸ ಮಾಡಿರುವರಾದರೂ ಅವರು ಹೇಳುವ ಒಂದು ಮಾತು ಆಶ್ಚರ್ಯ ಹುಟ್ಟಿಸುತ್ತದೆ. ಸಿಬಿಐ ಸಲ್ಲಿಸಿರುವ ವರದಿ ಪ್ರಕಾರ ಡಿಕೆ ರವಿ (DK Ravi) ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ರಾತ್ರಿ (ಬೆಳಗಿನ ಜಾವ 1 ಗಂಟೆಯ ನಂತರ ಅಂತ ವಕೀಲ ಹೇಳುತ್ತಾರೆ) ರೋಹಿಣಿ ಸಿಂಧೂರಿ ಅವರಿಗೆ ಫೋನ್ ಮಾಡಿದ್ದರಂತೆ. ಪೋನ್ ರಿಸೀವ್ ಮಾಡಿದ್ದು ಅವರ ಪತಿ ಸುಧೀರ್ ರೆಡ್ಡಿ. ಅವರಿಬ್ಬರ ನಡುವೆ ವಾಗ್ವಾದ ನಡೆಯುತ್ತದೆ ಮತ್ತು ಅದೇ ರವಿಯವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆಯಾಗುತ್ತದೆ ಅಂತ ಮುಕುಂದ್ ರಾಜ್ ಹೇಳುತ್ತಾರೆ. ಅಲ್ಲ ಸ್ವಾಮಿ, ಮದುವೆಯಾಗಿರೋ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯೊಬ್ಬರಿಗೆ ಅಪರಾತ್ರಿಯಲ್ಲಿ ಪೋನ್ ಮಾಡಿದರೆ, ಮಹಿಳೆಯ ಗಂಡ ಹೇಗೆ ರಿಯಾಕ್ಟ್ ಮಾಡುತ್ತಾನೆ? ಜಗಳ ಮಾಡೋದು ಸಹಜ ತಾನೆ? ರವಿ ಮತ್ತು ರೋಹಿಣಿ ನಡುವೆ ಮದುವೆಗೆ ಮೊದಲು ಸ್ನೇಹವಿರಬಹುದು. ಆದರೆ ಅವರಿಬ್ಬರು ಬೇರೆ ಬೇರೆ ಸಂಗಾತಿಗಳನ್ನು ವರಿಸಿಕೊಂಡ ನಂತರ ಆ ಸ್ನೇಹಕ್ಕೆ ತೆರೆಬೀಳಬೇಕಿತ್ತು. ಅದು ಹಾಗಾಗಿಲ್ಲ. ಹಾಗಂತ ಕೇವಲ ರೋಹಿಣಿಯವರ ತಲೆ ಮೇಲೆ ಗೂಬೆ ಕೂರಿಸುವುದು ಸರೀನಾ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ