ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರಿಕ್ ಮೈಸೂರಲ್ಲಿ ಪ್ರೇಮರಾಜ್ ಹೆಸರಲ್ಲಿ ಓಡಾಡಿಕೊಂಡಿದ್ದ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 22, 2022 | 12:57 PM

ಮೈಸೂರಲ್ಲಿರುವಾಗ ಶಾರಿಖ್ ತನ್ನ ಹೆಸರನ್ನು ಪ್ರೇಮರಾಜ್ ಎಂದು ಹೇಳಿಕೊಂಡಿದ್ದ ಮತ್ತು ಅವನು ತೋರಿಸಿದ ಆಧಾರ್ ಕಾರ್ಡ್ ಮತ್ತು ಇತರ ದಾಖಲೆ ಪತ್ರಗಳಲ್ಲೂ ಅದೇ ಹೆಸರಿತ್ತಂತೆ.

ಮೈಸೂರು: ಮಂಗಳೂರಲ್ಲಿ ರವಿವಾರ ನಡೆದ ಕುಕ್ಕರ್ ಬ್ಲಾಸ್ಟ್ (cooker blast) ಪ್ರಕರಣದಲ್ಲಿ ಆರೋಪಿಯಾಗಿರುವ ಶಾರಿಖ್ (Shariq) ಮಂಗಳೂರಿಗೆ ತೆರಳುವ ಮುನ್ನ ಮೈಸೂರಲ್ಲಿ ಕೆಲದಿನಗಳ ಮಟ್ಟಿಗೆ ನೆಲಸಿದ್ದ ಮತ್ತು ನಗರದಲ್ಲಿ ಪ್ರಸಾದ್ ಎನ್ನುವವರು ನಡೆಸುವ ಮೊಬೈಲ್ ಮತ್ತು ಕಂಪ್ಯೂಟರ್ ಹಾರ್ಡ್ ವೇರ್ ತರಬೇತಿ ಕೇಂದ್ರದಲ್ಲಿ (training centre) ಹೆಸರು ನೋಂದಾಯಿಸಿಕೊಂಡು ತರಬೇತಿ ಪಡೆಯುತ್ತಿದ್ದ. ಅವನು ತನ್ನ ಹೆಸರನ್ನು ಪ್ರೇಮರಾಜ್ (Premraj) ಎಂದು ಹೇಳಿಕೊಂಡಿದ್ದ ಮತ್ತು ಅವನು ತೋರಿಸಿದ ಆಧಾರ್ ಕಾರ್ಡ್ ಮತ್ತು ಇತರ ದಾಖಲೆ ಪತ್ರಗಳಲ್ಲೂ ಅದೇ ಹೆಸರಿತ್ತಂತೆ. ಮೈಸೂರಿನ ಟಿವಿ9 ವರದಿಗಾರ ಪ್ರಸಾದ್ ಅವರೊಂದಿಗೆ ನಡೆಸಿದ ಮಾತುಕತೆಯ ವಿಡಿಯೋ ಇಲ್ಲಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Nov 22, 2022 12:57 PM