ಕೌಟುಂಬಿಕ ಕಲಹದ ಕುರಿತು ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ಗುಜರಾತ್ ವ್ಯಕ್ತಿ
ಸಾವಿಗೂ ಮುನ್ನ ಆ ವ್ಯಕ್ತಿ ತಮ್ಮ ಮೊಬೈಲ್‌ನಲ್ಲಿ 13 ನಿಮಿಷಗಳ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಆ ವೀಡಿಯೊದಲ್ಲಿ ತಮ್ಮ ವೈವಾಹಿಕ ಜೀವನದಲ್ಲಿ ಎದುರಾದ ಸಮಸ್ಯೆಗಳು, ಪತ್ನಿ ಹಾಗೂ ಕುಟುಂಬದವರೊಂದಿಗೆ ನಡೆದ ಕೌಟುಂಬಿಕ ಕಲಹಗಳು ಮತ್ತು ತಮಗೆ ಸಿಕ್ಕ ಕಿರುಕುಳದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಮೃತರ ಬಳಿ ಸಿಕ್ಕ ಆ 13 ನಿಮಿಷಗಳ ವೀಡಿಯೊವನ್ನು ಆಧರಿಸಿ ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೌಟುಂಬಿಕ ಕಲಹವೇ ಈ ಸಾವಿಗೆ ಪ್ರಮುಖ ಕಾರಣವೇ ಎಂಬುದರ ಕುರಿತು ಮೃತನ ಕುಟುಂಬಸ್ಥರನ್ನು ಹಾಗೂ ಪತ್ನಿಯ ಕಡೆಯವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಅಹಮದಾಬಾದ್, ಅಕ್ಟೋಬರ್ 20: ಗುಜರಾತ್ ಮೂಲದ ವ್ಯಕ್ತಿಯೊಬ್ಬರು ಸುಮಾರು 1,700 ಅಡಿ ಆಳದ ಕಣಿವೆಗೆ ಬಿದ್ದು ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ. ಪ್ರಾಣ ಕಳೆದುಕೊಳ್ಳುವ ಮುನ್ನ ಆ ವ್ಯಕ್ತಿ ಕೌಟುಂಬಿಕ ಕಲಹದ ಕುರಿತು ವಿವರವಾಗಿ ಮಾತನಾಡಿ 13 ನಿಮಿಷಗಳ ವಿಡಿಯೋ ಒಂದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ, ಮೊಬೈಲ್ ಅನ್ನು ಅಲ್ಲಿಯೇ ಬಿಟ್ಟು ಕೆಳಗೆ ಹಾರಿದ್ದಾರೆ. ಕೌಟುಂಬಿಕ ವಿವಾದ ಹಾಗೂ ಮಾನಸಿಕ ಖಿನ್ನತೆಯಿಂದ ನೊಂದಿದ್ದ ಆ ವ್ಯಕ್ತಿಯು ಪ್ರಪಾತದ ಅಂಚಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 1,700 ಅಡಿ ಆಳದ ಆಳವಾದ ಕಣಿವೆಗೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಕ್ಷಣಾ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಸಾವಿಗೂ ಮುನ್ನ ಆ ವ್ಯಕ್ತಿ ತಮ್ಮ ಮೊಬೈಲ್‌ನಲ್ಲಿ 13 ನಿಮಿಷಗಳ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಆ ವೀಡಿಯೊದಲ್ಲಿ ತಮ್ಮ ವೈವಾಹಿಕ ಜೀವನದಲ್ಲಿ ಎದುರಾದ ಸಮಸ್ಯೆಗಳು, ಪತ್ನಿ ಹಾಗೂ ಕುಟುಂಬದವರೊಂದಿಗೆ ನಡೆದ ಕೌಟುಂಬಿಕ ಕಲಹಗಳು ಮತ್ತು ತಮಗೆ ಸಿಕ್ಕ ಕಿರುಕುಳದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಮೃತರ ಬಳಿ ಸಿಕ್ಕ ಆ 13 ನಿಮಿಷಗಳ ವೀಡಿಯೊವನ್ನು ಆಧರಿಸಿ ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೌಟುಂಬಿಕ ಕಲಹವೇ ಈ ಸಾವಿಗೆ ಪ್ರಮುಖ ಕಾರಣವೇ ಎಂಬುದರ ಕುರಿತು ಮೃತನ ಕುಟುಂಬಸ್ಥರನ್ನು ಹಾಗೂ ಪತ್ನಿಯ ಕಡೆಯವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

