Acerpure Smart TV: ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಲೋಕಕ್ಕೆ ಏಸರ್ ಪ್ಯೂರ್ ಎಂಟ್ರಿ
ಏಸರ್ ಲ್ಯಾಪ್ಟಾಪ್ ಈಗಾಗಲೇ ಟೆಕ್ ಮಾರ್ಕೆಟ್ನಲ್ಲಿ ಜನಪ್ರಿಯತೆ ಗಳಿಸಿದೆ. ಅದರ ಜತೆಗೇ ಈಗ ಏಸರ್ ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೂ ಕಾಲಿರಿಸಿದೆ. ಏಸರ್ ಭಾರತದಲ್ಲಿ ಸ್ಮಾರ್ಟ್ ಟಿವಿಗಳು, ವಾಟರ್ ಪ್ಯೂರಿಫೈಯರ್, ಏರ್ ಸರ್ಕ್ಯುಲೇಟರ್ ಫ್ಯಾನ್, ವಾಕ್ಯೂಮ್ ಕ್ಲೀನರ್ ಸಹಿತ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ತೈವಾನ್ ಮೂಲದ ಏಸರ್ ಕಂಪನಿ, ಈವರೆಗೆ ಲ್ಯಾಪ್ಟಾಪ್ ಮತ್ತು ಐಟಿ ಗ್ಯಾಜೆಟ್ಗಳಿಗೆ ಮಾತ್ರ ಸೀಮಿತವಾಗಿತ್ತು. ಏಸರ್ ಲ್ಯಾಪ್ಟಾಪ್ ಈಗಾಗಲೇ ಟೆಕ್ ಮಾರ್ಕೆಟ್ನಲ್ಲಿ ಜನಪ್ರಿಯತೆ ಗಳಿಸಿದೆ. ಅದರ ಜತೆಗೇ ಈಗ ಏಸರ್ ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೂ ಕಾಲಿರಿಸಿದೆ. ಏಸರ್ ಭಾರತದಲ್ಲಿ ಸ್ಮಾರ್ಟ್ ಟಿವಿಗಳು, ವಾಟರ್ ಪ್ಯೂರಿಫೈಯರ್, ಏರ್ ಸರ್ಕ್ಯುಲೇಟರ್ ಫ್ಯಾನ್, ವಾಕ್ಯೂಮ್ ಕ್ಲೀನರ್ ಸಹಿತ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಲ್ಲದೆ, ಮೇಕ್ ಇನ್ ಇಂಡಿಯಾ ಯೋಜನೆಯಡಿ ಏಸರ್ಪ್ಯೂರ್ ಎಂಬ ಬ್ರ್ಯಾಂಡ್ ಅನ್ನು ಕಂಪನಿ ಪರಿಚಯಿಸಿದೆ. ಏಸರ್ಪ್ಯೂರ್ ಬ್ರ್ಯಾಂಡ್ ಮೂಲಕ ನೂತನ ಮಾದರಿಯ ಗೃಹಬಳಕೆಯ ಉತ್ಪನ್ನಗಳನ್ನು ದೇಶದಲ್ಲಿ ಏಸರ್ ಮಾರಾಟ ಮಾಡಲಿದೆ. ಜತೆಗೆ 32, 43, 55 ಮತ್ತು 65 ಇಂಚಿನ ನೂತನ ಸ್ಮಾರ್ಟ್ ಟಿವಿಗಳ ಸರಣಿಯನ್ನು ಏಸರ್ ಬಿಡುಗಡೆ ಮಾಡಿದೆ.
Published on: May 18, 2024 10:40 AM
Latest Videos