Updated on: May 18, 2024 | 11:54 AM
ಸಂಗೀತಾ ಶೃಂಗೇರಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಡ್ರೆಸ್ ಹಾಗೂ ಬೆಲ್ಟ್ ಗಮನ ಸೆಳೆದಿದೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.
ಸಂಗೀತಾ ಶೃಂಗೇರಿ ಅವರ ಬೆಲ್ಟ್ ಮೇಲೆ ಸಿಂಹಿಣಿಯ ಲೋಗೋ ಇದೆ. ಇದು ಅಭಿಮಾನಿಗಳನ್ನು ಹೆಚ್ಚು ಆಕರ್ಷಿಸಿದೆ. ವಿವಿಧ ರೀತಿಯಲ್ಲಿ ಫ್ಯಾನ್ಸ್ ಇದಕ್ಕೆ ಕಮೆಂಟ್ ಮಾಡುತ್ತಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ಆಗಿದ್ದರು ಸಂಗೀತಾ ಶೃಂಗೇರಿ. ಈ ವೇಳೆ ಅವರ ಫ್ಯಾನ್ಸ್ ಸಂಗೀತಾನ ಸಿಂಹಿಣಿ ಎಂದು ಕರೆದರು. ಅದೇ ಹೆಸರು ಈಗ ಮುಂದುವರಿದಿದೆ.
ಸಂಗೀತಾ ಶೃಂಗೇರಿ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 6.31 ಲಕ್ಷ ಹಿಂಬಾಲಕರು ಇದ್ದಾರೆ. ಅವರ ಸೋಶಿಯಲ್ ಮೀಡಿಯಾ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಲೇ ಇದೆ.
ಸಂಗೀತಾ ಅವರು ಈ ಬಾರಿ ಬಿಗ್ ಬಾಸ್ ಗೆಲ್ಲುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ಆಗಲಿಲ್ಲ.
ಸಂಗೀತಾ ಶೃಂಗೇರಿ ಅವರಿಗೆ ಹೊಸ ಹೊಸ ಆಫರ್ಗಳು ಬರುತ್ತಿವೆ. ಆದರೆ, ಇದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಅಳೆದುತೂಗಿ ಅವರು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.