ಸಿನಿಮಾ ಗೆದ್ದಿಲ್ಲ ಎಂದು ಪ್ರೇಕ್ಷಕರ ಮೇಲೆ ಆಪಾದನೆ ಹೊರಿಸಬೇಡಿ; ವಸಿಷ್ಠ ಸಿಂಹ ಎಚ್ಚರಿಕೆ
‘ಜನರು ಥಿಯೇಟರ್ಗೆ ಬರುತ್ತಿಲ್ಲ ಎಂಬ ವಾದವನ್ನು ನಾನು ಒಪ್ಪಲ್ಲ. ಸಾಕಷ್ಟು ಸಿನಿಮಾ ಹಿಟ್ ಆಗಿರೋದನ್ನು ನೋಡಿದ್ದೇವೆ. ಕಾಟೇರ, ಅಧ್ಯಕ್ಷ ರೀತಿಯ ಸಿನಿಮಾಗಳು ಗೆಲುವು ಕಂಡಿವೆ. ಗೆದ್ದಿರೋ ಉದಾಹರಣೆಗಳು ತುಂಬಾ ಇವೆ’ ಎಂದಿದ್ದಾರೆ ವಸಿಷ್ಠ ಸಿಂಹ.
ಸದ್ಯ ಸಿನಿಮಾ ನೋಡೋಕೆ ಜನರು ಬರುತ್ತಿಲ್ಲ ಎನ್ನುವ ಆರೋಪ ಜೋರಾಗಿದೆ. ಎಲ್ಲರೂ ಒಟಿಟಿ, ಐಪಿಎಲ್ನ ದೂಷಿಸುತ್ತಿದ್ದಾರೆ. ಈ ಮಧ್ಯೆ ವಸಿಷ್ಠ ಸಿಂಹ ಅವರು (Vasishta Simha) ಬೇರೆಯದೇ ವಾದ ಮುಂದಿಟ್ಟಿದ್ದಾರೆ. ‘ಜನರು ಥಿಯೇಟರ್ಗೆ ಬರುತ್ತಿಲ್ಲ ಎಂಬ ವಾದವನ್ನು ನಾನು ಒಪ್ಪಲ್ಲ. ಸಾಕಷ್ಟು ಸಿನಿಮಾ ಹಿಟ್ ಆಗಿರೋದನ್ನು ನೋಡಿದ್ದೇವೆ. ಕಾಟೇರ, ಅಧ್ಯಕ್ಷ ರೀತಿಯ ಸಿನಿಮಾಗಳು ಗೆಲುವು ಕಂಡಿವೆ. ಗೆದ್ದಿರೋ ಉದಾಹರಣೆಗಳು ತುಂಬಾ ಇವೆ. ಹಿಟ್ ಆಗದೆ ಇರೋ ಸಿನಿಮಾಗಳ ಸಂಖ್ಯೆ ಹೆಚ್ಚಿರಬಹುದು ಅಷ್ಟೇ. ಸೋತಿದ್ದನ್ನೇ ಬಣ್ಣಿಸಿ ಪ್ರೇಕ್ಷಕರ ಮೇಲೆ ಆಪಾದನೆ ಹೊರಿಸಬಾರದು. ಸಿನಿಮಾ ಬರ್ತಿದೆ ಅನ್ನೋದು ಜನರಿಗೆ ಗೊತ್ತೇ? ಐಪಿಎಲ್ ಮ್ಯಾಚ್ ನಡೆಯುವಾಗ ಸಿನಿಮಾ ಬಂದರೆ ವರ್ಕ್ ಆಗದೆ ಇರಬಹುದು. ಅದನ್ನೂ ಮೀರಿಸುವ ಕಂಟೆಂಟ್ ಕೊಟ್ಟರೆ ಜನರು ನೋಡಿಯೇ ನೋಡುತ್ತಾರೆ’ ಎಂದಿದ್ದಾರೆ ವಸಿಷ್ಠ ಸಿಂಹ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos