Daily Devotional: ದಾನದ ಮಹತ್ವ ಹಾಗೂ ಪ್ರಯೋಜನ

Daily Devotional: ದಾನದ ಮಹತ್ವ ಹಾಗೂ ಪ್ರಯೋಜನ

ವಿವೇಕ ಬಿರಾದಾರ
|

Updated on: May 18, 2024 | 6:45 AM

ಹಿಂದೂ ಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ವಿದ್ಯಾ ದಾನ, ಅನ್ನ ದಾನ, ಹಣ ದಾನ ಹೀಗೆ ಸಾಕಷ್ಟು ದಾನಗಳಿವೆ. ದಾನ ಮಾಡಿದರೆ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಈ ದಾನದ ಮಹತ್ವವೇನು? ಹಾಗೂ ದಾನ ಮಾಡುವುದರಿಂದ ಆಗುವ ಪ್ರಯೋಜನವೇನು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಹಿಂದೂ ಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ವಿದ್ಯಾ ದಾನ, ಅನ್ನ ದಾನ, ಹಣ ದಾನ ಹೀಗೆ ಸಾಕಷ್ಟು ದಾನಗಳಿವೆ. ದಾನ ಮಾಡಿದರೆ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಮಹಾಭಾರತದಲ್ಲಿ ಕರ್ಣನನ್ನು ದಾನಶೂರ ಕರ್ಣ ಎಂದು ಕರೆಯುತ್ತಾರೆ. ಮತ್ತು ಹೆಚ್ಚು ದಾನ ಮಾಡುತ್ತ ಇನ್ನೊಬ್ಬರಿಗೆ ಒಳಿತನ್ನೇ ಬಯಸುವವರಿಗೆ ಕೊಡಗೈ ದಾನಿ ಎಂದೂ ಕರೆಯುತ್ತಾರೆ. ಚಾಣಕ್ಯರ ಪ್ರಕಾರ, ದಾನವೆಂದರೆ ಕೇವಲ ಹಣವನ್ನು ಸಹಾಯ ರೂಪದಲ್ಲಿ ನೀಡುವುದು ಮಾತ್ರವಲ್ಲ, ದಾನದ ನಿಜವಾದ ಅರ್ಥವೆಂದರೆ ಸೇವೆಗೆ ತನ್ನ ಶಕ್ತಿ, ಸಮಯ ಮತ್ತು ಸಂಪನ್ಮೂಲಗಳನ್ನು ನಿಸ್ವಾರ್ಥವಾಗಿ ಕೊಡುಗೆ ನೀಡುವುದಾಗಿದೆ. ದಾನ ಮಾಡುವುದರಿಂದ ಆತ್ಮದ ಶುದ್ಧೀಕರಣ ಮತ್ತು ಸಂಪತ್ತಿನ ಜೊತೆಗೆ ಸಂತೋಷವನ್ನು ಪಡೆಯಬಹುದು ಎಂದು ಚಾಣಕ್ಯರು ಹೇಳಿದ್ದಾರೆ. ದಾನದ ಮಹತ್ವವೇನು? ಹಾಗೂ ದಾನ ಮಾಡುವುದರಿಂದ ಆಗುವ ಪ್ರಯೋಜನವೇನು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.