ಚಿತ್ರದುರ್ಗ: ಬಿಜೆಪಿ ಅಭ್ಯರ್ಥಿಗೆ ಮೇಕೆ ಮರಿ ಗಿಫ್ಟ್ ನೀಡಿದ ಕಾರ್ಯಕರ್ತರು
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಬ್ಯರ್ಥಿ ಪೂರ್ಣಿಮಾ ಅವರಿಗೆ ರಾಮಚಂದ್ರ ಎಂಬ ಕಾರ್ಯಕರ್ತ ಮೇಕೆ ಮರಿ ಗಿಫ್ಟ್ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು ಜನರಿಗೆ ದುಡ್ಡು, ಗಿಫ್ಟ್ಗಳನ್ನು ಕೊಡುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಬದಲಾಗಿದ್ದು, ಜನರೇ ರಾಜಕಾರಣಿಗಳಿಗೆ ದುಡ್ಡು ಮತ್ತು ಗಿಫ್ಟ್ಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ನಿಖಿಲ್ ಕುಮಾರಸ್ವಾಮಿ ಹೀಗೆ ಅನೇಕ ನಾಯಕರಿಗೆ ಜನರು ಹಣ ಮತ್ತು ಗಿಫ್ಟ್ಗಳನ್ನು ನೀಡುತ್ತಾರೆ. ಅದರಂತೆ ಈಗ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಬ್ಯರ್ಥಿ ಪೂರ್ಣಿಮಾ ಅವರಿಗೆ ರಾಮಚಂದ್ರ ಎಂಬ ಕಾರ್ಯಕರ್ತ ಮೇಕೆ ಮರಿ ಗಿಫ್ಟ್ ನೀಡಿದ್ದಾರೆ. ಈ ವೇಳೆ ಕಾರ್ಯಕರ್ತರು ಮೇಕೆ ಮರಿಗೂ ಬಿಜೆಪಿ ಶಾಲು ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಹಿರಿಯೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕಿ, ಅಭ್ಯರ್ಥಿ ಪ್ರೀತಿಯಿಂದ ಕಾರ್ಯಕರ್ತರು ಅನೇಕ ಕಡೆ ಕುರಿ, ಮೇಕೆ ನೀಡಿದ್ದಾರೆ. ಉಡುಗೊರೆ ಬಂದ ಮೇಕೆ, ಕುರಿಗಳನ್ನು ನಮ್ಮ ಫಾರಂನಲ್ಲಿ ಸಾಕುತ್ತೇನೆಂದು ಹೇಳಿದರು. ಅಲ್ಲದೇ ಮೇಕೆ ಗಿಫ್ಟ್ ಪಡೆದ ವಿಚಾರವನ್ನು ಪೂರ್ಣಿಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ
