‘ಸಾರಾ ಗೋವಿಂದ್ ಧಮ್ಕಿ ಹಾಕಿದ್ರು’; ಕಾನೂನು ಹೋರಾಟಕ್ಕೆ ಮುಂದಾದ ಚೇತನ್
ರಾಜ್ ಕುಮಾರ್ ಪುಣ್ಯ ಭೂಮಿ ವಿಷಯವಾಗಿ ನಟ ಚೇತನ್ ಅಹಿಂಸ ಅವರು ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಈಗ ಅವರು ನೀಡಿರುವ ಹೇಳಿಕೆ ಗಮನ ಸೆಳೆದಿದೆ. ಶೆಷಾದ್ರಿಪುರಂ ಪೋಲೀಸ್ ಠಾಣೆಗೆ ಆಗಮಿಸಿಲಿರೋ ನಟ ಚೆತನ್ ಹಾಗೆ ಅವರ ಬೆಂಬಲಿಗರು ದೂರು ನೀಡುತ್ತಾ ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ರಾಜ್ಕುಮಾರ್ ಪುಣ್ಯಭೂಮಿ ವಿಷಯಕ್ಕೆ ಚೇತನ್ ಅಹಿಂಸ ಅವರು ಕೊಂಕು ತೆಗೆದಿದ್ದರು. ಈಗಾಗಲೇ ಅವರು ವಿವಾದಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ದಾರೆ. ಈ ವಿಷಯವಾಗಿ ಈಗ ಹೊಸ ಬೆಳವಣಿಗೆ ನಡೆದಿದೆ. ಸಾರಾ ಗೋವಿಂದು ಈಗ ಅವರು ಧಮ್ಕಿ ಹಾಕಿರುವ ಆರೋಪವನ್ನು ಚೇತನ್ ಮಾಡಿದ್ದಾರೆ. ಸಾರಾ ಗೋವಿಂದು ಹಾಗೂ ಕನ್ನಡಪರ ಹೋರಾಟಗಾರರು ನನ್ನ ಮನೆಗೆ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಮಾತಾಡಿದ್ರು. ಸಾರಾ ಗೋವಿಂದ್ ನನಗೆ ಧಮ್ಕಿ ಹಾಕೋ ರೀತಿ ಮಾತಾಡಿದ್ದರು’ ಎಂದು ಚೆತನ್ ಆರೋಪಿಸಿದ್ದಾರೆ. ಹೀಗಾಗಿ ಅವರು ದೂರು ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
