ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ನಟ ದರ್ಶನ್ ಜೈಲಿನಿಂದ ಶೀಘ್ರವೇ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿ ಅವರ ಅಭಿಮಾನಿಯೊಬ್ಬರು ಹಾಸನದ ಪ್ರಸಿದ್ಧ ಶ್ರೀ ಹಾಸನಾಂಬ ದೇವಿ ದೇವಾಲಯದಲ್ಲಿ ಹರಕೆ ಹೊತ್ತಿದ್ದಾರೆ. ದರ್ಶನ್ ಅವರ ಫೋಟೋವನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಈ ಅಭಿಮಾನಿ, ದರ್ಶನ್ ಅವರಿಗೆ ಶೀಘ್ರವೇ ಜೈಲುವಾಸದಿಂದ ಮುಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ನಟ ದರ್ಶನ್ ತೂಗುದೀಪ ಅವರು ಜೈಲಿನಿಂದ ಶೀಘ್ರವೇ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿ ಅವರ ಅಭಿಮಾನಿಯೊಬ್ಬರು ಹಾಸನದ ಪ್ರಸಿದ್ಧ ಶ್ರೀ ಹಾಸನಾಂಬ ದೇವಿ ದೇವಾಲಯದಲ್ಲಿ ವಿಶೇಷ ಹರಕೆ ಹೊತ್ತಿದ್ದಾರೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬ ದೇವಿಯ ಧರ್ಮ ದರ್ಶನದ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತ ಅಭಿಮಾನಿ, ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ‘ಪುಣ್ಯಾತ್ಮ’ ಎಂದು ಬರೆದಿರುವ ದರ್ಶನ್ ಅವರ ಫೋಟೋವನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಈ ಅಭಿಮಾನಿ, ದರ್ಶನ್ ಅವರಿಗೆ ಶೀಘ್ರವೇ ಜೈಲುವಾಸದಿಂದ ಮುಕ್ತಿ ಸಿಗಲಿ ಎಂದು ದೇವಿ ಎದುರು ಪ್ರಾರ್ಥಿಸಿದ್ದಾರೆ. ಈ ಫೋಟೋ ಹಿಡಿದು ದೇವಿಯ ದರ್ಶನ ಪಡೆದ ದೃಶ್ಯ ಸ್ಥಳೀಯರ ಹಾಗೂ ಇತರ ಭಕ್ತರ ಗಮನ ಸೆಳೆದಿದೆ. ಈ ವೇಳೆ ಅಭಿಮಾನಿಗಳು ‘ಡಿ ಬಾಸ್’ ಎಂದು ಜೈಕಾರ ಕೂಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
