ದರ್ಶನ್ಗೆ ಮತ್ತೆ ಶುರುವಾಯ್ತು ಬೆನ್ನು ನೋವು: ಚಿಕಿತ್ಸೆಗಾಗಿ ದರ್ಶನ್ ಪರ ವಕೀಲರ ವಾದ
ಪ್ರತ್ಯಕ್ಷ ಸಾಕ್ಷಿ ಪುನೀತ್, ತಮ್ಮ ಹೇಳಿಕೆ ಬದಲಾಯಿಸಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಬಿರುಸಿನ ಕ್ರಾಸ್ ಎಕ್ಸಾಮಿನ್ ಅನ್ನು ಸಹ ಮಾಡಿದ್ದಾರೆ. ಒಟ್ಟಾರೆ ಪ್ರಕರಣದ ವಿಚಾರಣೆ ಕುತೂಹಲಕರಾಗಿ ಘಟ್ಟದಲ್ಲಿದೆ. ಇದರ ನಡುವೆ ಪ್ರಕರಣಕ್ಕೆ ಸಂಬಂಧಿಸಿದವರು ಬೇರೆ ಬೇರೆ ಅರ್ಜಿಗಳನ್ನು ಸಹ ನ್ಯಾಯಾಲಯದಲ್ಲಿ ಹೂಡುತ್ತಿದ್ದಾರೆ. ಇತ್ತೀಚೆಗಷ್ಟೆ ಪ್ರದೋಶ್, ಮಧ್ಯಂತರ ಜಾಮೀನಿಗಾಗಿ ಅರ್ಜಿ ಹಾಕಿದ್ದರು, ಅವರಿಗೆ ಜಾಮೀನು ನಿರಾಕರಿಸಲಾಯ್ತಾದರೂ ತಂದೆಯವರು ಪಿತೃಕಾರ್ಯದಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಅನುಮತಿ ನೀಡಿತು. ಇದೀಗ ದರ್ಶನ್, ತಮ್ಮ ಬೆನ್ನು ನೋವಿನ ಚಿಕಿತ್ಸೆಗಾಗಿ ಮನವಿ ಮಾಡಿದ್ದಾರೆ.

ಮುಖ್ಯಾಂಶಗಳು
- ಬೆನ್ನು ನೋವಿಗೆ ಚಿಕಿತ್ಸೆ ಬೇಡುತ್ತಿರುವ ದರ್ಶನ್
- ದರ್ಶನ್ ಅವರಿಗೆ ಬೆನ್ನು ನೋವು ಕಾಡುತ್ತಿದೆ
- ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ತುರುಸಿನಿಂದ ನಡೆಯುತ್ತಿದೆ. ಪ್ರದೋಶ್ ತಮ್ಮ ಮಾಫಿ ಸಾಕ್ಷಿ ದಾಖಲಿಸಿದ್ದಾರೆ. ಪ್ರತ್ಯಕ್ಷ ಸಾಕ್ಷಿ ಪುನೀತ್, ತಮ್ಮ ಹೇಳಿಕೆ ಬದಲಾಯಿಸಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಬಿರುಸಿನ ಕ್ರಾಸ್ ಎಕ್ಸಾಮಿನ್ ಅನ್ನು ಸಹ ಮಾಡಿದ್ದಾರೆ. ಒಟ್ಟಾರೆ ಪ್ರಕರಣದ ವಿಚಾರಣೆ ಕುತೂಹಲಕರಾಗಿ ಘಟ್ಟದಲ್ಲಿದೆ. ಇದರ ನಡುವೆ ಪ್ರಕರಣಕ್ಕೆ ಸಂಬಂಧಿಸಿದವರು ಬೇರೆ ಬೇರೆ ಅರ್ಜಿಗಳನ್ನು ಸಹ ನ್ಯಾಯಾಲಯದಲ್ಲಿ ಹೂಡುತ್ತಿದ್ದಾರೆ. ಇತ್ತೀಚೆಗಷ್ಟೆ ಪ್ರದೋಶ್, ಮಧ್ಯಂತರ ಜಾಮೀನಿಗಾಗಿ ಅರ್ಜಿ ಹಾಕಿದ್ದರು, ಅವರಿಗೆ ಜಾಮೀನು ನಿರಾಕರಿಸಲಾಯ್ತಾದರೂ ತಂದೆಯವರು ಪಿತೃಕಾರ್ಯದಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಅನುಮತಿ ನೀಡಿತು. ಇದೀಗ ದರ್ಶನ್, ತಮ್ಮ ಬೆನ್ನು ನೋವಿನ ಚಿಕಿತ್ಸೆಗಾಗಿ ಮನವಿ ಮಾಡಿದ್ದಾರೆ.
ದರ್ಶನ್, ತಮಗೆ ಬೆನ್ನು ನೋವು ಮರುಕಳಿಸಿದ್ದು, ಫಿಸಿಯೋಥೆರಪಿ ಪಡೆದುಕೊಳ್ಳಲು ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು (ನವೆಂಬರ್ 05) ಅರ್ಜಿಯ ವಿಚಾರಣೆ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ದರ್ಶನ್ ಕಳೆದ 12 ವರ್ಷಗಳಿಂದ ಬೆನ್ನುಹುರಿಯ L4 ಮತ್ತು L5 ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಅವರಿಗೆ ತೀವ್ರ ನೋವಿದ್ದು, ಸ್ಟಿರಾಯ್ಡ್ ಇಂಜೆಕ್ಷನ್‌ಗಳನ್ನು ಪಡೆಯುತ್ತಿದ್ದಾರೆ’ ಎಂದರು.
15 ತಿಂಗಳಿಗೂ ಹೆಚ್ಚು ಕಾಲದಿಂದ ಕಾರಾಗೃಹದಲ್ಲಿರುವ ದರ್ಶನ್ ಅವರಿಗೆ ಸರಿಯಾದ ಹಾಸಿಗೆ ವ್ಯವಸ್ಥೆಯಿಲ್ಲದೆ ನೆಲದ ಮೇಲೆ ಮಲಗುತ್ತಿರುವುದರಿಂದ ಬೆನ್ನುನೋವು ಇನ್ನಷ್ಟು ಉಲ್ಬಣಗೊಂಡಿದೆ. ಕಳೆದ ವರ್ಷದ ಚಳಿಗಾಲದಲ್ಲಿ ಹಾಗೂ 2024ರಲ್ಲಿ ಜೈಲಿನಲ್ಲಿದ್ದಾಗಲೂ ವೈದ್ಯರು ಪರಿಶೀಲನೆ ನಡೆಸಿ ಫಿಸಿಯೋಥೆರಪಿ ನೀಡುವಂತೆ ವರದಿ ನೀಡಿದ್ದರು. ಈಗ ಅವರಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದೆ. ದರ್ಶನ್ ಅವರಿಗೆ ಜೈಲಿನಲ್ಲಿ ಅಗತ್ಯ ವೈದ್ಯಕೀಯ ಚಿಕಿತ್ಸೆ ಒದಗಿಸುವುದಾಗಿ ಪ್ರಾಸಿಕ್ಯೂಷನ್ ಸುಪ್ರೀಂ ಕೋರ್ಟ್‌ಗೆ ಮುಚ್ಚಳಿಕೆ ನೀಡಿತ್ತು. ಆದರೆ ಈಗ ಸೂಕ್ತ ಚಿಕಿತ್ಸೆ ನೀಡದೆ ಆ ಮುಚ್ಚಳಿಕೆಯನ್ನು ಉಲ್ಲಂಘಿಸಲಾಗಿದೆ. ಜೈಲು ಅಧಿಕಾರಿಗಳು ತಕ್ಷಣವೇ ದರ್ಶನ್ ಅವರಿಗೆ ಫಿಸಿಯೋಥೆರಪಿ ಸೇರಿದಂತೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಲು ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಕೇಸ್: ವಿಚಾರಣೆಗೆ ಗೈರು, ಪ್ರತ್ಯಕ್ಷ ಸಾಕ್ಷಿ ಪುನೀತ್ ಬಂಧನಕ್ಕೆ ವಾರೆಂಟ್
ಈ ಕುರಿತು ಲಿಖಿತ ಆಕ್ಷೇಪಣೆ ಹಾಗೂ ವಾದಮಂಡನೆ ಸಲ್ಲಿಸಲು ಪ್ರಾಸಿಕ್ಯೂಷನ್ ನವೆಂಬರ್ ಏಳರ ವರೆಗೆ ಕಾಲಾವಕಾಶ ಕೋರಿದರು. ಆದರೆ ಇದಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ ಅರ್ಜಿಯ ವಿಚಾರಣೆಯನ್ನು ನಾಳೆಗೆ (ನವೆಂಬರ್ 06) ಮುಂದೂಡಲಾಯ್ತು. ಈ ಹಿಂದೆಯೂ ಸಹ ದರ್ಶನ್ ಅವರಿಗೆ ಜೈಲಿನಲ್ಲಿರುವಾದ ಬೆನ್ನು ನೋವು ಕಾಡಿತ್ತು. ಆಗ ಸತತ ಅರ್ಜಿ ವಾದ-ಪ್ರತಿವಾದಗಳ ಬಳಿಕ ಅವರಿಗೆ ಚಿಕಿತ್ಸೆಗಾಗಿ ಜಾಮೀನು ನೀಡಲಾಗಿತ್ತು. ಬೆನ್ನು ನೋವಿನ ಕಾರಣದಿಂದಾಗಿ ದರ್ಶನ್ ಅವರಿಗೆ ಹಾಸಿಗೆ, ದಿಂಬು ನೀಡಲು ಸಹ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆದಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Thu, 5 November 26




