ರೇಣುಕಾ ಸ್ವಾಮಿ ಕೇಸ್: ವಿಚಾರಣೆಗೆ ಗೈರು, ಪ್ರತ್ಯಕ್ಷ ಸಾಕ್ಷಿ ಪುನೀತ್ ಬಂಧನಕ್ಕೆ ವಾರೆಂಟ್
ಕಿರಣ್ ಮತ್ತು ಪುನೀತ್ ಅವರಿಬ್ಬರ ವಿಚಾರಣೆಯನ್ನು ಇಂದು ನ್ಯಾಯಾಲಯದಲ್ಲಿ ಮಾಡಬೇಕಿತ್ತು. ಆದರೆ ಪುನೀತ್ ಅವರು ವಿಚಾರಣೆಗೆ ಗೈರಾಗಿದ್ದಾರೆ. ಈ ಹಿಂದೆಯೇ ಇವರು ಚಾರ್ಜ್ ಶೀಟ್ ಭಾಗವಾಗಿ ಸಿಆರ್ ಪಿಸಿ 164 ಅಡಿಯಲ್ಲಿ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡಿದ್ದಾರೆ ಆದರೆ ಇಂದು ನ್ಯಾಯಾಲಯದಲ್ಲಿ ಇಬ್ಬರೂ ಹೇಳಿಕೆ ದಾಖಲಿಸಬೇಕಿತ್ತು. ಎಸ್ಪಿಪಿ ಅವರು ಇವರ ವಿಚಾರಣೆ ನಡೆಸಲಿದ್ದರು. ಆದರೆ ವಿಚಾರಣೆಗೆ ಪುನೀತ್ ಗೈರಾಗಿದ್ದಾರೆ.

ಮುಖ್ಯಾಂಶಗಳು
- ರೇಣುಕಾ ಸ್ವಾಮಿ ಪ್ರಕರಣದ ಸಾಕ್ಷಿ ವಿಚಾರಣೆ
- ಸಾಕ್ಷಿ ವಿಚಾರಣೆಗೆ ಪುನೀತ್ ಗೈರಾಗಿದ್ದಾರೆ
- ಪ್ರತ್ಯಕ್ಷ ಸಾಕ್ಷಿ ಪುನೀತ ವಿರುದ್ಧ ಬಂಧನದ ವಾರೆಂಟ್
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬಿರುಸಿನಿಂದ ನಡೆಯುತ್ತಿದೆ. ಇಂದು (ಅಕ್ಟೋಬರ್ 27) ಇಬ್ಬರು ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆಯನ್ನು ನಡೆಸಬೇಕಿತ್ತು. ಕಿರಣ್ ಮತ್ತು ಪುನೀತ್ ಅವರಿಬ್ಬರ ವಿಚಾರಣೆಯನ್ನು ಇಂದು ನ್ಯಾಯಾಲಯದಲ್ಲಿ ಮಾಡಬೇಕಿತ್ತು. ಆದರೆ ಪುನೀತ್ ಅವರು ವಿಚಾರಣೆಗೆ ಗೈರಾಗಿದ್ದಾರೆ. ಈ ಹಿಂದೆಯೇ ಇವರು ಚಾರ್ಜ್ ಶೀಟ್ ಭಾಗವಾಗಿ ಸಿಆರ್ ಪಿಸಿ 164 ಅಡಿಯಲ್ಲಿ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡಿದ್ದಾರೆ ಆದರೆ ಇಂದು ನ್ಯಾಯಾಲಯದಲ್ಲಿ ಇಬ್ಬರೂ ಹೇಳಿಕೆ ದಾಖಲಿಸಬೇಕಿತ್ತು. ಎಸ್ಪಿಪಿ ಅವರು ಇವರ ವಿಚಾರಣೆ ನಡೆಸಲಿದ್ದರು. ಆದರೆ ವಿಚಾರಣೆಗೆ ಪುನೀತ್ ಗೈರಾಗಿದ್ದಾರೆ.
ಪುನೀತ್, ಡಿ ಕಂಪೆನಿ ಫ್ಯಾನ್ ಪೇಜಿನ ಅಡ್ಮಿನ್ ಎನ್ನಲಾಗಿದ್ದು, ದರ್ಶನ್ಗೆ ಆಪ್ತರಾಗಿದ್ದರು. ಇವರು ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಆಗಿದ್ದು, ಈ ಹಿಂದೆ ಇದೇ ಪ್ರಕರಣದಲ್ಲಿ ಪುನೀತ್ ಅವರ ಬಂಧನವೂ ಆಗಿತ್ತು. ಬಳಿಕ ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಆದರೆ ಇದೀಗ ಪುನೀತ್ ಅವರು ವಿಚಾರಣೆಗೆ ಗೈರಾದ ಕಾರಣ ಅವರ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದ್ದು, ಬಂಧನದ ವಾರೆಂಟ್ ಹೊರಡಿಸಲಾಗಿದೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ
ಇಂದು (ಅಕ್ಟೋಬರ್ 27) ಪುನೀತ್, ವಿಚಾರಣೆಗೆ ಹಾಜರಾಗದ ಕಾರಣ ವಿಚಾರಣೆಯನ್ನು ನಾಳೆಗೆ (ಅಕ್ಟೋಬರ್ 28) ಮುಂದೂಡಲಾಗಿದೆ. ಜೊತೆಗೆ ನ್ಯಾಯಾಲಯವು ಪುನೀತ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಅನ್ನು ಹೊರಡಿಸಿದೆ. ಪುನೀತ್, ಈ ಪ್ರಕರಣದ ಪ್ರಮುಖ ಸಾಕ್ಷಿ ಆಗಿದ್ದಾರೆ. ರೇಣುಕಾ ಸ್ವಾಮಿ ಮೃತದೇಹವನ್ನು ಹೊತ್ತೊಯ್ದ ಸ್ಕಾರ್ಪಿಯೋ ವಾಹನ ಪುನೀತ್ ಅವರದ್ದೇ ಎನ್ನಲಾಗಿದೆ.
ರೇಣುಕಾ ಸ್ವಾಮಿ ಶವದ ಸಾಗಾಟ ಮತ್ತು ಇತರೆ ಸಾಕ್ಷಿ ನಾಶಗಳಲ್ಲಿ ಪುನೀತ್ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಾಗಾಗಿ ಪುನೀತ್ ಅನ್ನು ಈ ಹಿಂದೆ ಬಂಧಿಸಲಾಗಿತ್ತು. ಬಳಿಕ ಪುನೀತ್ ಜಾಮೀನು ಪಡೆದಿದ್ದರು. ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಆಗಿರುವ ಪುನೀತ್ ಅವರನ್ನು ನ್ಯಾಯಾಲಯದಲ್ಲಿ ವಿಚಾರಣೆ ಮಾಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Tue, 27 October 26




