AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾ ಸ್ವಾಮಿ ಪ್ರಕರಣ: ಪ್ರದೋಶ್​​ ಜಾಮೀನು ಅರ್ಜಿ ವಜಾ

ಮುಖ್ಯ ಪ್ರಕರಣದ ವಿಚಾರಣೆ ಜೊತೆಗೆ ಆರೋಪಿಗಳ ಜಾಮೀನು ಅರ್ಜಿ, ವೈದ್ಯಕೀಯ ಸವಲತ್ತು ಇನ್ನಿತರೆ ಕುರಿತು ಅರ್ಜಿಗಳು ಪದೇ ಪದೇ ಸಲ್ಲಿಕೆ ಆಗುತ್ತಿದ್ದು ಅವುಗಳ ವಿಚಾರಣೆ, ಆದೇಶಗಳು ಸಹ ಹೊರಬೀಳುತ್ತಲೇ ಇವೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ನೀಡಿದ ಪ್ರದೋಶ್, ಕೆಲ ದಿನಗಳ ಹಿಂದಷ್ಟೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ತಂದೆಯ ಕಾರ್ಯ ಮಾಡಬೇಕಿರುವ ಕಾರಣ ಮೂರು ವಾರಗಳ ಕಾಲ ಜಾಮೀನು ನೀಡಬೇಕು ಎಂದು ಅವರು ಅರ್ಜಿ ಸಲ್ಲಿಕೆ ಮಾಡಿದ್ದರು.

ರೇಣುಕಾ ಸ್ವಾಮಿ ಪ್ರಕರಣ: ಪ್ರದೋಶ್​​ ಜಾಮೀನು ಅರ್ಜಿ ವಜಾ
Pradosh Darshan
ಮಂಜುನಾಥ ಸಿ.
|

Updated on: Oct 30, 2026 | 4:09 PM

Share

ಮುಖ್ಯಾಂಶಗಳು

  • ಪ್ರದೋಶ್ ಜಾಮೀನು ಅರ್ಜಿ ಕುರಿತು ಆದೇಶ
  • ಪ್ರದೋಶ್ ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಲಯ
  • ಮೂರು ವಾರಗಳ ಜಾಮೀನು ಕೋರಿದ್ದ ಪ್ರದೋಶ್

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಮುಖ್ಯ ಪ್ರಕರಣದ ವಿಚಾರಣೆ ಜೊತೆಗೆ ಆರೋಪಿಗಳ ಜಾಮೀನು ಅರ್ಜಿ, ವೈದ್ಯಕೀಯ ಸವಲತ್ತು ಇನ್ನಿತರೆ ಕುರಿತು ಅರ್ಜಿಗಳು ಪದೇ ಪದೇ ಸಲ್ಲಿಕೆ ಆಗುತ್ತಿದ್ದು ಅವುಗಳ ವಿಚಾರಣೆ, ಆದೇಶಗಳು ಸಹ ಹೊರಬೀಳುತ್ತಲೇ ಇವೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ನೀಡಿದ ಪ್ರದೋಶ್, ಕೆಲ ದಿನಗಳ ಹಿಂದಷ್ಟೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ತಂದೆಯ ಕಾರ್ಯ ಮಾಡಬೇಕಿರುವ ಕಾರಣ ಮೂರು ವಾರಗಳ ಕಾಲ ಜಾಮೀನು ನೀಡಬೇಕು ಎಂದು ಅವರು ಅರ್ಜಿ ಸಲ್ಲಿಕೆ ಮಾಡಿದ್ದರು.

ವಾದ ಮಂಡಿಸಿದ್ದ ಪ್ರದೋಶ್ ಪರ ವಕೀಲರು, ಮೂರು ವಾರಗಳ ಕಾಲ ಜಾಮೀನು ನೀಡುವಂತೆ ಕೋರಿದ್ದರು. ಅಲ್ಲದೆ ಅವರ ಜೀವಕ್ಕೆ ಬೆದರಿಕೆ ಇರುವ ಕಾರಣದಿಂದಾಗಿ ಬೇರೆ ಠಾಣೆಯಲ್ಲಿ ಹಾಜರಿಗೆ ಅವಕಾಶ ಮಾಡಿಕೊಡುವಂತೆ ಕೋರಿದ್ದರು. ಆದರೆ ದರ್ಶನ್ ಪರ ವಕೀಲರು ಪ್ರದೋಶ್ ಜಾಮೀನಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಸಹ ಕಾನೂನು ತೊಡಕುಗಳನ್ನು ಎತ್ತಿ ಹೇಳಿದ್ದರು. ಮೂವರ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಪ್ರದೋಶ್ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ.

ಪ್ರದೋಶ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಆಗಿದ್ದು, ಇದೀಗ ಮಾಫಿ ಆಕ್ಷಿಯಾಗಿ ಬದಲಾಗಿದ್ದು, ಪ್ರಕರಣದ ಕುರಿತು ಇಂಚಿಂಚೂ ಮಾಹಿತಿಯನ್ನು ನ್ಯಾಯಾಧೀಶರ ಮುಂದೆ ಹೇಳಿದ್ದು, ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಪ್ರದೋಶ್ ಮಾಫಿ ಸಾಕ್ಷಿ ತಡೆಯಲು ದರ್ಶನ್ ಪರ ವಕೀಲರು ನಾನಾ ಪ್ರಯತ್ನಗಳನ್ನು ಮಾಡಿದರಾದರೂ ಯಾವುದೂ ಸಫಲವಾಗಿಲ್ಲ. ಪ್ರದೋಶ್, ಪೊಲೀಸರ ಒತ್ತಡಕ್ಕೆ ಮಣಿದು ಅವರಿಗೆ ಅನುಕೂಲವಾಗುವಂತೆ ಮಾಫಿ ಸಾಕ್ಷಿ ನುಡಿದಿದ್ದಾರೆ ಎಂದು ಸಹ ದರ್ಶನ್ ಪರ ವಕೀಲರು ಆರೋಪಿಸಿದ್ದರು. ಮಾಫಿ ಸಾಕ್ಷಿ ದಾಖಲು ಮಾಡಿದ ಬೆನ್ನಲ್ಲೆ ಪ್ರದೋಶ್, ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ರೇಣುಕಾ ಸ್ವಾಮಿ ತಾಯಿ ಪ್ರತಿಕೂಲ ಸಾಕ್ಷಿ? ಕೋರ್ಟ್​​ನಲ್ಲಿ ನಡೆದಿದ್ದೇನು?

ಈ ಹಿಂದೆ ಇದೇ ನ್ಯಾಯಾಲಯದಲ್ಲಿ ಇನ್ನೂ ಕೆಲ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಗಳನ್ನು ಸಹ ನ್ಯಾಯಾಲಯ ವಜಾ ಮಾಡಿತ್ತು. ಇದೀಗ ಪ್ರದೋಶ್ ಅರ್ಜಿಯೂ ಸಹ ವಜಾ ಆಗಿದೆ. ದರ್ಶನ್​​ ಗಂತೂ ಕನಿಷ್ಟ ಒಂದು ವರ್ಷಗಳ ಕಾಲ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಖುದ್ದು ಸುಪ್ರೀಂಕೋರ್ಟ್ ಹೇಳಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More