ಮದುವೆ ಮಾಡಿಕೊಂಡು ನೇರವಾಗಿ ದರ್ಶನ್ ಮನೆ ಮುಂದೆ ಬಂದ ನವ ಜೋಡಿ
ದರ್ಶನ್ ಬಗ್ಗೆ ಜನರಿಗೆ ಯಾವ ರೀತಿ ಕ್ರೇಜ್ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ದರ್ಶನ್ ಫೋಟೋ ಎದುರು ಈ ಜೋಡಿ ಮದುವೆ ಆಗಿದೆ. ಮದುವೆ ಬಳಿಕ ನವ ದಂಪತಿ ರಾಜರಾಜೇಶ್ವರಿ ನಗರದ ದರ್ಶನ್ ಮನೆ ಮುಂದೆ ಬಂದಿದ್ದಾರೆ. ದರ್ಶನ್ ಅವರ ಆಶೀರ್ವಾದ ಪಡೆಯಬೇಕು ಎಂಬುದು ಈ ಜೋಡಿಯ ಆಸೆ ಆಗಿತ್ತು.
ದರ್ಶನ್ ಬಗ್ಗೆ ಜನರಿಗೆ ಯಾವ ರೀತಿ ಕ್ರೇಜ್ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ದರ್ಶನ್ (Darshan) ಫೋಟೋ ಎದುರು ಈ ಜೋಡಿ ಮದುವೆ ಆಗಿದೆ. ಮದುವೆ ಬಳಿಕ ನವ ದಂಪತಿ ರಾಜರಾಜೇಶ್ವರಿ ನಗರದ ದರ್ಶನ್ ಮನೆ ಮುಂದೆ ಬಂದಿದ್ದಾರೆ. ದರ್ಶನ್ ಅವರ ಆಶೀರ್ವಾದ ಪಡೆಯಬೇಕು ಎಂಬುದು ಈ ಜೋಡಿಯ ಆಸೆ ಆಗಿತ್ತು. ಅಚ್ಚರಿ ಎಂದರೆ ಹುಡುಗನ ಹೆಸರು ದರ್ಶನ್, ಹುಡುಗಿ ಹೆಸರು ವಿಜಯಲಕ್ಷ್ಮಿ! ‘ದರ್ಶನ್ ಫೋಟೋ ಮುಂದೆ ತಾಳಿ ಕಟ್ಟಿದ್ದು. ಅವರ ಮನೆ ಎದುರೇ ತಾಳಿ ಕಟ್ಟಬೇಕು ಎಂಬ ಕನಸು ಇತ್ತು. ಆದರೆ ಮನೆಯವರು ಬೈಯ್ದರು. ದರ್ಶನ್ ಅವರು ಮಾಡುವ ದಾನ ಧರ್ಮ ನಮಗೆ ಇಷ್ಟ. ಬದುಕಿದರೆ ಅವರ ಥರ ನಾವು ಕೂಡ ಬದುಕಬೇಕು. 6ನೇ ತರಗತಿಯಿಂದಲೂ ನಾವು ಅವರ ಫ್ಯಾನ್ಸ್’ ಎಂದು ಈ ಜೋಡಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
