‘ದರ್ಶನ್​​ಗೆ ಬೆನ್ನು ನೋವು ಬಂದಿದ್ದು ಇಂದು ನಿನ್ನೆಯಲ್ಲ’; ವಕೀಲರ ಸ್ಪಷ್ಟನೆ

|

Updated on: Oct 30, 2024 | 1:22 PM

ನಟ ದರ್ಶನ್ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ಮಧ್ಯೆ ದರ್ಶನ್​ಗೆ ಬೆನ್ನು ನೋವಿನ ಸಮಸ್ಯೆ ಇರೋದು ಇಂದು ನಿನ್ನೆಯಿಂದ ಅಲ್ಲ ಎಂಬುದನ್ನು ವೈದ್ಯರು ಹೇಳಿದ್ದಾರೆ.

ದರ್ಶನ್ ಅವರು ಜಾಮೀನು ಪಡೆಯಲೆಂದೇ ಬೆನ್ನು ನೋವಿನ ನಾಟಕ ಆಡಿದರು ಎಂದು ಅನೇಕರು ಮಾತನಾಡಿಕೊಂಡಿದ್ದು ಇದೆ. ಈ ವಿಚಾರವಾಗಿ ಅವರ ವಕೀಲರು ಸ್ಪಷ್ಟನೆ ಕೊಟ್ಟಿದ್ದಾರೆ. ‘ದರ್ಶನ್​ಗೆ ಬೆನ್ನು ನೋವು ಇಂದು ನಿನ್ನೆ ಬಂದಿದ್ದಲ್ಲ. 2022-23ರಿಂದ ಈ ಸಮಸ್ಯೆ ಇದೆ. ಅದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಿದ್ದೇವೆ. ಹೀಗಾಗಿ ಜಾಮೀನು ಸಿಕ್ಕಿದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on