ಸಮವಸ್ತ್ರ ಬಗ್ಗೆ ಮಾತಾಡಿದ ಬಿಗ್ ಬಾಸ್ ಖ್ಯಾತಿಯ ನಟ-ನಿರ್ದೇಶಕ ಪ್ರಥಮ್

| Updated By: ರಾಜೇಶ್ ದುಗ್ಗುಮನೆ

Updated on: Feb 10, 2022 | 8:23 AM

ಮುಂದುವರಿದು ಮಾತಾಡುವ ಅವರು ಜೈನರೂ ಅಲ್ಪಸಂಖ್ಯಾತರು, ಅವರಲ್ಲಿ ದಿಗಂಬರ ಪಂಥವಿದೆ, ಅವರು ಮೈಮೇಲೆ ಏನನ್ನೂ ಧರಿಸುವುದಿಲ್ಲ, ಆ ಪಂಥದವರು ತಮ್ಮ ಸಂಪ್ರದಾಯದ ಹಾಗೆ ಶಾಲೆಗೆ ಬರುತ್ತೇವೆ ಅಂದರೆ ಹೇಗೆ ಅಂತ ಪೆದ್ದುಪೆದ್ದಾಗಿ ಕೇಳುತ್ತಾರೆ.

ಸಮವಸ್ತ್ರದ ಬಗ್ಗೆ ಸಾರ್ವಜನಿಕ ಬದುಕಿನಲ್ಲಿರುವವರು ತಮಗೆ ತಿಳಿದ ಹಾಗೆ ಹೇಳಿಕೆಗಳನ್ನು ನೀಡಲಾರಂಭಿದ್ದಾರೆ. ನಟ-ನಿರ್ದೇಶಕ ಪ್ರಥಮ್ (Pratham) ಅವರನ್ನೂ ಈ ಬಗ್ಗೆ ಕೇಳಲಾಗಿದೆ. ಮೊದಲು ಸಮವಸ್ತ್ರದ (uniform) ಬಗ್ಗೆ ವ್ಯಾಖ್ಯಾನ ನೀಡುವ ಅವರು ಕೊನೆಯಲ್ಲಿ ವಿವೇಚನೆ ಇಲ್ಲದಂತೆ ಮಾತಾಡುತ್ತಾರೆ. ಈ ವಿಡಿಯೋವನ್ನು ಕೊನೇವರೆಗೆ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಯೂನಿಫಾರ್ಮ್ ಪದದ ಕನ್ನಡ ಅರ್ಥ ಸಮವಾದ ವಸ್ತ್ರ ಅಂದರೆ ಶಾಲೆಗೆ ಬರುವ ಮಗು ಲಕ್ಷಾಧೀಶನ (millionaire) ಮಗುವಾಗಿರಲಿ ಅಥವಾ ಬಡವನ ಮಗು-ಇಬ್ಬರೂ ಒಂದೇ ಬಗೆಯ ವಸ್ತ್ರ ಧರಿಸಬೇಕು, ಹಾಗಾಗೇ ಅದು ಸಮವಸ್ತ್ರ ಎಂದು ಪ್ರಥಮ್ ಸಮವಸ್ತ್ರದ ವ್ಯಾಖ್ಯಾನ ನೀಡುತ್ತಾರೆ. ಮಕ್ಕಳಿಗೆ ಶಾಲೆಗಳಲ್ಲಿ ಕಲಿಸುವ ಮೊದಲ ಪಾಠವೇ ಸಮಾನತೆ, ಹಾಗಾಗಿ ಶಾಲೆಗೆ ಬಂದ ಮೇಲೆ ಮಕ್ಕಳು ಬೇರೆ ರೀತಿಯ ವಸ್ತ್ರ ಧರಿಸುತ್ತೇವೆ ಅಂತ ಹಟ ಹಿಡಿದರೆ ಅದು ಸಮವಸ್ತ್ರ ಹೇಗಾಗುತ್ತದೆ ಎಂದು ಪ್ರಥಮ್ ಕೇಳುತ್ತಾರೆ.

ಈಗ ಕೆಲವರು ಹಿಜಾಬ್ ಧರಿಸಿ ಬರುತ್ತೇವೆ, ಕೆಲವರು ಕೇಸರಿ ಶಾಲು ಧರಿಸಿ, ಮತ್ತೂ ಕೆಲವರು ನೀಲಿ ಶಾಲು ಧರಿಸಿ ಶಾಲೆಗಳಿಗೆ ಬರುತ್ತೇವೆ ಅನ್ನುತ್ತಿದ್ದಾರೆ. ಹಾಗೆಯೇ ಲಿಂಗಾಯತರು ಲಿಂಗ ಧರಿಸಿ, ಬ್ರಾಹ್ಮಣರು ಜನಿವಾರ ಧರಿಸಿ ಬರುತ್ತೇವೆ ಅಂತ ಹೇಳಲಾರಂಭಿಸಿದರೆ ಅದು ಸಮವಸ್ತ್ರ ಹೇಗೆ ಅನಿಸಿಕೊಳ್ಳುತ್ತದೆ ಅಂತ ಪ್ರಥಮ್ ಕೇಳುತ್ತಾರೆ.

ಮುಂದುವರಿದು ಮಾತಾಡುವ ಅವರು ಜೈನರೂ ಅಲ್ಪಸಂಖ್ಯಾತರು, ಅವರಲ್ಲಿ ದಿಗಂಬರ ಪಂಥವಿದೆ, ಅವರು ಮೈಮೇಲೆ ಏನನ್ನೂ ಧರಿಸುವುದಿಲ್ಲ, ಆ ಪಂಥದವರು ತಮ್ಮ ಸಂಪ್ರದಾಯದ ಹಾಗೆ ಶಾಲೆಗೆ ಬರುತ್ತೇವೆ ಅಂದರೆ ಹೇಗೆ ಅಂತ ಕೇಳುತ್ತಾರೆ.

ಇದನ್ನೂ ಓದಿ:   ಹಿಜಾಬ್ ವಿವಾದ ಪ್ರಕರಣ ವರ್ಗಾವಣೆ: ಸರ್ಕಾರದ ಮಟ್ಟದಲ್ಲಿ ಸಭೆ ಬಳಿಕ ಮುಂದಿನ ನಿರ್ಧಾರ ಎಂದ ಆರಗ ಜ್ಞಾನೇಂದ್ರ

Published on: Feb 09, 2022 06:22 PM