ಮುಖ್ಯಮಂತ್ರಿಗಳ ಕಾನ್ವಾಯ್ ದಾಟಿ ಹೋಗಲು ಬೇರೆ ವಾಹನಗಳನ್ನು ತಡೆದ ಪೊಲೀಸರ ವಿರುದ್ಧ ರೊಚ್ಚಿಗೆದ್ದರು ಒಬ್ಬ ಮಹಿಳೆ!
ಗಣ್ಯರ ವಾಹನಗಳನ್ನು ತಡೆಯಿರಿ ಎಂದು ಜೋರಾಗಿ ಕೂಗುವ ಅವರು ಮುಖ್ಯಮಂತ್ರಿಗಳ ಕಾರಿನತ್ತ ಕೈ ಮಾಡಿ ಏನನ್ನೋ ಹೇಳುತ್ತಾರೆ. ಮುಖ್ಯಮಂತ್ರಿಗಳು ತಮ್ಮ ಕಾರಿನಿಂದ ಇಳಿದು ವಿಷಯವೇನು ಅಂತ ಕೇಳಿದ್ದರೆ ಚೆನ್ನಾಗಿರುತಿತ್ತೇನೋ. ಆದರೆ ಅವರ ಕಾರು ಭರ್ ಅಂತ ಹೊರಟೇ ಬಿಡುತ್ತದೆ!
ನಮ್ಮ ರಾಜ್ಯದಲ್ಲಿ ಇಂಥದೊಂದು ಕೆಟ್ಟ ಸಂಪ್ರದಾಯವಿದೆ, ಗಣ್ಯರ (VIPs) ಸುಗಮ ಓಡಾಟಕ್ಕೆ ರಸ್ತೆಗಳನ್ನು 5-10 ನಿಮಿಷಗಳ ಕಾಲ ಬ್ಲಾಕ್ ಮಾಡೋದು. ಕೆಲವರು ತುರ್ತಾಗಿ ಆಸ್ಪತ್ರೆಗೆ, ರೇಲ್ವೇ ಇಲ್ಲವೇ ವಿಮಾನ ನಿಲ್ದಾಣಕ್ಕೆ ಹೋಗುವುದಿರುತ್ತದೆ. ಅವರಿಗಾಗುವ ಅನಾನುಕೂಲತೆ (inconvenience) ಬಗ್ಗೆ ಗಣ್ಯರಿಗಾಗಲೀ, ಸಂಚಾರಿ ಪೊಲೀಸರಿಗಾಗಲೀ (traffic police) ಪರಿವೆಯೇ ಇರುವುದಿಲ್ಲ. ಬುಧವಾರದಂದು ಬೆಂಗಳೂರಿನ ಚಾಳುಕ್ಯ ವೃತ್ತದಲ್ಲಿ ನಡೆದಿದ್ದು ಅದೇ. ಇಂಥ ಅವ್ಯವಸ್ಥೆಯನ್ನು ಪ್ರಾಯಶಃ ಬಹಳ ದಿನಗಳಿಂದ ಗಮನಿಸುತ್ತಿದ್ದ ಒಬ್ಬ ಮಹಿಳೆಗೆ ಮುಖ್ಯಮಂತ್ರಿಗಳ ಕಾನ್ವಾಯ್ (CM’s convoy) ಹಾದು ಹೋಗಲು 5 ನಿಮಿಷಕ್ಕೂ ಹೆಚ್ಚಿನ ಅವಧಿಯವರೆಗೆ ಸರ್ಕಲ್ ನ ಬೇರೆ ಮೂರು ದಿಕ್ಕಿನಿಂದ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಿದಾಗ ಅವರ ತಾಳ್ಮೆಯ ಕಟ್ಟೆಯೊಡೆದಿದೆ. ಅವರು ತುರ್ತಾಗಿ ಕೋರ್ಟ್ಗೆ ಹೋಗುವುದಿತ್ತಂತೆ. ತಮ್ಮ ಕಾರಿನಿಂದ ಕೆಳಗಿಳಿದು ಬರುವ ಮಹಿಳೆ, ಗಣ್ಯರ ಕಾನ್ವಾಯ್ ನಿಲ್ಲಿಸಲು ರಸ್ತೆಯ ಮಧ್ಯೆ ಬಂದು ಬಿಡುತ್ತಾರೆ. ಟ್ರಾಫಿಕ್ ಪೇದೆ ಅವರನ್ನು ಹಿಂದಕ್ಕೆ ಸರಿಸಿದಾಗ ಅವರು, ಪೇದೆ ಮತ್ತು ಅಲ್ಲೇ ಇರುವ ಇಬ್ಬ ಟ್ರಾಫಿಕ್ ಇನ್ಸ್ ಪೆಕ್ಟರ್ ರನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸುತ್ತಾರೆ.
ಗಣ್ಯರ ವಾಹನಗಳನ್ನು ತಡೆಯಿರಿ ಎಂದು ಜೋರಾಗಿ ಕೂಗುವ ಅವರು ಮುಖ್ಯಮಂತ್ರಿಗಳ ಕಾರಿನತ್ತ ಕೈ ಮಾಡಿ ಏನನ್ನೋ ಹೇಳುತ್ತಾರೆ. ಮುಖ್ಯಮಂತ್ರಿಗಳು ತಮ್ಮ ಕಾರಿನಿಂದ ಇಳಿದು ವಿಷಯವೇನು ಅಂತ ಕೇಳಿದ್ದರೆ ಚೆನ್ನಾಗಿರುತಿತ್ತೇನೋ. ಆದರೆ ಅವರ ಕಾರು ಭರ್ ಅಂತ ಹೊರಟೇ ಬಿಡುತ್ತದೆ!
ಬಳಿಕ ಅವರು ಗಣ್ಯರು ಮತ್ತು ಸಂಚಾರಿ ಪೊಲೀಸರನ್ನು ದೂಷಿಸುತ್ತಲೇ ಹೋಗಿ ತಮ್ಮ ಕಾರು ಹತ್ತುತ್ತಾರೆ. ಅ ಕಾರನ್ನು ಓಡಿಸುವ ವ್ಯಕ್ತಿ ಸಹ ಪೊಲೀಸರೊಂದಿಗೆ ವಾದ ಮಾಡುತ್ತಲೇ ಅಲ್ಲಿಂದ ಹೊರಡುತ್ತಾರೆ. ಪೊಲೀಸರು ಏನು ತಾನೆ ಮಾಡಿಯಾರು, ಅವರನ್ನು ದೂಷಿಸುವುದಲ್ಲಿ ಪ್ರಯೋಜನವಿಲ್ಲ. ಮೇಲಿಂದ ಬಂದ ಆದೇಶಗಳನ್ನು ಅವರು ಪಾಲಿಸುತ್ತಾರೆ ಅಷ್ಟೇ. ಪಾಲಿಸಿದ್ದರೆ ಬದುಕು ಕಷ್ಟ ಕಷ್ಟ.
ದೂಷಿಸಬೇಕಿರುವುದು ಗಣ್ಯರನ್ನ. ಅವರಿಗೊಂದು ಕಾನೂನು ನಮಗೊಂದು ಕಾನೂನು ಯಾಕೆ ಮಾರಾಯ್ರೇ. ಎರಡು ನಿಮಿಷ ಕಾದರೆ, ಆಕಾಶ ಕಳಚಿ ಅವರ ಕಾರುಗಳ ಮೇಲೆ ಬೀಳುತ್ತಾ?
ಇದನ್ನೂ ಓದಿ: ಪಕ್ಕದ ಮನೆ ಮಹಿಳೆಯನ್ನು ಎಳೆದುಕೊಂಡು ಬಂದು ರೇಪ್ ಮಾಡಿದ ಪತಿ; ಮೊಬೈಲ್ನಲ್ಲಿ ವಿಡಿಯೋ ಮಾಡಿ ವಿಕೃತಿ ಮೆರೆದ ಪತ್ನಿ