AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಚಡ್ಡಿ ಮೇಲೆ ಹೋಗುತ್ತಾರೆ, ಅವರನ್ನು ತಡೆಯಿರಿ; ಕಲಬುರಗಿ ನಗರಸಭೆ ಸದಸ್ಯನ ಮಾತಿನ ವಿಡಿಯೋ ವೈರಲ್

ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಚಡ್ಡಿ ಮೇಲೆ ಹೋಗುತ್ತಾರೆ, ಅವರನ್ನು ತಡೆಯಿರಿ; ಕಲಬುರಗಿ ನಗರಸಭೆ ಸದಸ್ಯನ ಮಾತಿನ ವಿಡಿಯೋ ವೈರಲ್

TV9 Web
| Updated By: sandhya thejappa

Updated on: Feb 10, 2022 | 9:45 AM

ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಚಡ್ಡಿ ಮೇಲೆ ಹೋಗುತ್ತಾರೆ. ಅವರನ್ನು ಮೊದಲು ತಡೆಯಿರಿ. ನಮಗೇಕೆ ಹಿಜಾಬ್ ವಿರೋಧಿಸುತ್ತೀರಿ ಎಂದು ಹೇಳಿಕೆ ನೀಡಿದ್ದ ನಗರ ಸಭೆ ಸದಸ್ಯ ಡಾ.ಅಹ್ಮದ್ ಪಟೇಲ್ ವಿಡಿಯೋ ವೈರಲ್ ಆಗಿದೆ.

ಕಲಬುರಗಿ: ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದ್ದಿದೆ. ಸದ್ಯ ಹೈಕೋರ್ಟ್ (High Court) ನ್ಯಾಯಮೂರ್ತಿಗಳು ಈ ವಿಚಾರಣೆಯನ್ನು ಮುಖ್ಯ ನಾಯಮೂರ್ತಿಗೆ ವರ್ಗಾವಣೆ ಮಾಡಿದ್ದಾರೆ. ಇಡೀ ರಾಜ್ಯ ಕೋರ್ಟ್ ತೀರ್ಮಾನಕ್ಕಾಗಿ ಕಾಯುತ್ತಿದೆ. ಕಳೆದ ಎರಡು ದಿನ ಕರ್ನಾಟಕದ ಮೂಲೆ ಮೂಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಸರ್ಕಾರ ಶಾಲೆ- ಕಾಲೇಜುಗಳಿಗೆ ರಜೆ ಕೂಡಾ ಘೊಷಿಸಿದೆ. ಮಂಗಳವಾರ ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದಲ್ಲಿ ಖಿದ್ಮತೆ ಮಿಲ್ಲತ್ ವತಿಯಿಂದ ಹಿಜಾಬ್ ಪರವಾಗಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ಮಾತನಾಡಿದ್ದ ನಗರ ಸಭೆ ಸದಸ್ಯ ಡಾ.ಅಹ್ಮದ್ ಪಟೇಲ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಚಡ್ಡಿ ಮೇಲೆ ಹೋಗುತ್ತಾರೆ. ಅವರನ್ನು ಮೊದಲು ತಡೆಯಿರಿ. ನಮಗೇಕೆ ಹಿಜಾಬ್ ವಿರೋಧಿಸುತ್ತೀರಿ ಎಂದು ಹೇಳಿಕೆ ನೀಡಿದ್ದ ನಗರ ಸಭೆ ಸದಸ್ಯ ಡಾ.ಅಹ್ಮದ್ ಪಟೇಲ್ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ

ಆಹಾರ ಆಚಾರ ವಿಚಾರ: ಕೆಲ ಪ್ರಾಚೀನ ಆರೋಗ್ಯ ಸಲಹೆಗಳ ಬಗ್ಗೆ ಆಲೋಚಿಸೋಣ, ಆಚರಿಸೋಣ

ಬ್ಯಾಂಕ್ ಅಧಿಕಾರಿ, ಪಿಎಸ್ಐ ನೌಕರಿ ನಿರಾಕರಣೆ ಮಾಡಿದ ಮಹಿಳೆ; ಕುರಿ ಸಾಕಾಣಿಕೆ ಮಾಡಿ ಲಕ್ಷಾಂತರ ರೂ. ಆದಾಯ ಗಳಿಕೆ