ಬ್ಯಾಂಕ್ ಅಧಿಕಾರಿ, ಪಿಎಸ್ಐ ನೌಕರಿ ನಿರಾಕರಣೆ ಮಾಡಿದ ಮಹಿಳೆ; ಕುರಿ ಸಾಕಾಣಿಕೆ ಮಾಡಿ ಲಕ್ಷಾಂತರ ರೂ. ಆದಾಯ ಗಳಿಕೆ

ಮೊದಲು ಸಣ್ಣದಾಗಿ ಕುರಿ ಸಾಕಾಣಿಕೆ ಮಾಡಲು ಆರಂಭ ಮಾಡುತ್ತಾರೆ. ಮೊದಲು 30 ಚಿಕ್ಕ ಕುರಿಗಳನ್ನು ತಂದು ಸಾಕಾಣಿಕೆ ಮಾಡುತ್ತಾರೆ. ನಂತರ ಅದರಲ್ಲಿ ಗಂಡು ಕುರಿ ಟಗರುಗಳನ್ನು ಮಾರಾಟ ಮಾಡುತ್ತಾರೆ. ಮುಂದೆ ಹೆಣ್ಣು ಕುರಿಗಳಿಂದ ಕುರಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಂಡು ಹೋಗುತ್ತಾರೆ‌.

ಬ್ಯಾಂಕ್ ಅಧಿಕಾರಿ, ಪಿಎಸ್ಐ ನೌಕರಿ ನಿರಾಕರಣೆ ಮಾಡಿದ ಮಹಿಳೆ; ಕುರಿ ಸಾಕಾಣಿಕೆ ಮಾಡಿ ಲಕ್ಷಾಂತರ ರೂ. ಆದಾಯ ಗಳಿಕೆ
ಮಂಗಳಾ ನೀಲಗುಂದ
TV9kannada Web Team

| Edited By: preethi shettigar

Feb 10, 2022 | 8:53 AM

ಗದಗ: ವಿದ್ಯಾವಂತ ಮಹಿಳೆಯೊಬ್ಬರು ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ನೂರಾರು ಕನಸು ಕಟ್ಟಿಕೊಂಡಿದ್ದರು. ಆ ನಿಟ್ಟಿನಲ್ಲಿ ಬಿಎಸ್ಸಿ(BSC) ಡಿಗ್ರಿ ಮುಗಿಸಿ, ಕೃಷಿಯಲ್ಲಿ ಮಹತ್ವದ ಬದಲಾವಣೆ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಅವರ ಆಸೆ ಈಡೇರಲ್ಲಿಲ್ಲ. ಏಕೆಂದರೆ ಮನೆಯಲ್ಲಿ ಇದಕ್ಕೆ ಒಪ್ಪಲಿಲ್ಲ. ಕೊನೆಗೆ ಒಂದು ದಿನ ಆ ಮಹಿಳೆ ಕೋಳಿ ಹಾಗೂ ಕುರಿ ಸಾಕಾಣಿಕೆಗೆ ಮುಂದಾದರು. ಸದ್ಯ ಕೋಳಿ ಮತ್ತು ಕುರಿ(Sheep) ಸಾಕಾಣಿಕೆ ಮೂಲಕ ಇತರೆ ಮಹಿಳೆಯರಿಗೆ(Women) ಮಾದರಿಯಾಗಿದ್ದಾರೆ. ಮೂರು ಸರ್ಕಾರಿ ನೌಕರಿ ಧಿಕ್ಕರಿಸಿದ ಈ ಮಹಿಳೆ ವರ್ಷಕ್ಕೆ 6 ರಿಂದ 7 ಲಕ್ಷ ರೂಪಾಯಿ ಆದಾಯ ಗಳಿಸುವ ಮೂಲಕ ಕೃಷಿಯಲ್ಲಿ ಕಮಾಲ್ ಮಾಡಿದ್ದಾರೆ.

ಇತ್ತೀಚೆಗೆ ವಿದ್ಯಾವಂತ ಮಹಿಳೆಯರು ಖಾಸಗಿ ಕೆಲಸ ಹಾಗೂ ಸರ್ಕಾರಿ ಕೆಲಸ ಬೇಕು ಎಂದು ಕನಸು ಕಾಣುತ್ತಾರೆ‌. ಆ ನಿಟ್ಟಿನಲ್ಲಿ ಪ್ರಯತ್ನಿಸಿ ನೌಕರಿಯನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ನಾವು ಹೇಳುತ್ತಿರುವ ಈ ಮಹಿಳೆಗೆ ಬ್ಯಾಂಕ್, ವಾಟರ್ ಶೆಡ್ ಮ್ಯಾನೇಜರ್, ಕೃಷಿ ಇಲಾಖೆ ಹಾಗೂ ಪೊಲೀಸ್​ ಇಲಾಖೆಯಲ್ಲಿ ಸರ್ಕಾರಿ ನೌಕರಿ ಹುಡಿಕಿಕೊಂಡು ಬಂದಿದ್ದವು. ಆದರೆ ಈ ಮಹಿಳೆ ಸರ್ಕಾರ ನೌಕರಿಗಳನ್ನು ದಿಕ್ಕರಿಸಿದ್ದರು‌. ಅದಕ್ಕೂ ಕಾರಣವಿದೆ. ಸರ್ಕಾರಿ ನೌಕರಿ ಅಂದರೆ ಅವರು ಎಲ್ಲಿಗೆ ಹಾಕುತ್ತಾರೆ ಅಲ್ಲಿಗೆ ಹೋಗಿ ಕೆಲಸ‌ ಮಾಡಬೇಕು. ಹಾಗಾಗಿಯೇ ಈ ಮಹಿಳೆ ಕುರಿ ಸಾಕಾಣಿಕೆ ಮಾಡುವ ಪ್ಲಾನ್ ಮಾಡುತ್ತಾರೆ.

ಮೊದಲು ಸಣ್ಣದಾಗಿ ಕುರಿ ಸಾಕಾಣಿಕೆ ಮಾಡಲು ಆರಂಭ ಮಾಡುತ್ತಾರೆ. ಮೊದಲು 30 ಚಿಕ್ಕ ಕುರಿಗಳನ್ನು ತಂದು ಸಾಕಾಣಿಕೆ ಮಾಡುತ್ತಾರೆ. ನಂತರ ಅದರಲ್ಲಿ ಗಂಡು ಕುರಿ ಟಗರುಗಳನ್ನು ಮಾರಾಟ ಮಾಡುತ್ತಾರೆ. ಮುಂದೆ ಹೆಣ್ಣು ಕುರಿಗಳಿಂದ ಕುರಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಂಡು ಹೋಗುತ್ತಾರೆ‌. ಸದ್ಯ 300 ಕುರಿಗಳನ್ನು ಸಾಕಿ ಯಶಸ್ವಿಯಾಗಿದ್ದಾರೆ. ತಮ್ಮದೆ ಜಮೀನಿನಲ್ಲಿ 30-100 ವಿಸ್ತೀರ್ಣ ಹೊಂದಿರುವ ಕುರಿ ಸಾಕಾಣಿಕೆ ಶೆಡ್ ನಿರ್ಮಾಣ ಮಾಡಿದ್ದಾರೆ. ಕುರಿಗಳಿಗೆ ವಿಟಮಿನ್ ಡಿ ಸಿಗುವ ಉದ್ದೇಶದಿಂದ ಶೆಡ್​ನಿಂದ ಹೊರಗಡೆ ಬರಲು ವ್ಯವಸ್ಥೆ ಮಾಡಿದ್ದಾರೆ. ಇದರಲ್ಲಿ ಮಹಿಳೆ ಯಶಸ್ವಿಯಾಗಿದ್ದಾರೆ. ಈ ಮೂಲಕ ಕೃಷಿ ಹಾಗೂ ಕುರಿ ಸಾಕಾಣಿಯಲ್ಲಿ ಸಾಧನೆ ಮಾಡಿದ್ದಾರೆ.

300 ಕುರಿಗಳು ಹಾಗೂ ಜವಾರಿ ಕೋಳಿಗಳನ್ನು ಮಂಗಳಾ ನೀಲಗುಂದ ಸಾಕುತ್ತಿದ್ದಾರೆ. ನೀರನ್ನು ಬಹಳ ಅಚ್ಚು ಕಟ್ಟಾಗಿ ಉಪಯೋಗ ಮಾಡಿಕೊಳ್ಳುತ್ತಾರೆ. ಕುರಿ ಹಾಗೂ ಕೋಳಿ ಸಾಕಾಣಿಕೆ ಮಾಡಬೇಕಾದರೆ, ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಆದರೆ ಮಂಗಳಾ ನೀಲಗುಂದ ಅವರ ಜಮೀನಿನಲ್ಲಿ ಬೋರವೇಲ್ ಕೊರಿಸಿದರು ನೀರು ಮಾತ್ರ ಬಿದ್ದಿಲ್ಲಾ. ಹೀಗಾಗಿ ಅವರು ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಕೃಷಿ ಹೊಂಡದಿಂದ ಪೈಪ್ ಮೂಲಕ ನೀರು ಸರಬರಾಜು ಮಾಡಿಕೊಂಡು, ಕುರಿ ಹಾಗೂ ಕೋಳಿಗಳಿಗೆ ನೀಡುತ್ತಾರೆ. ಕುರಿ ಸಾಕಾಣಿಕೆ ಮಾಡಬೇಕಾದರೆ ಸಾಕಷ್ಟು ನೀರು ಬೇಕು ಎನ್ನುವ ಯೋಜನೆ ಬಹಳಷ್ಟು ರೈತರಲ್ಲಿ ಇರುತ್ತದೆ. ಆದರೆ ಈ ಮಹಿಳೆ ಕಡಿಮೆ ನೀರಿನಿಂದ ಕುರಿ ಸಾಕಾಣಿಕೆ ಮಾಡಬಹುದು ಎನ್ನುವದನ್ನು ತೋರಿಸಿ ಕೊಟ್ಟಿದ್ದಾರೆ.

ಇನ್ನೂ ಕುರಿಗಳಿಗೆ ಹೆಚ್ಚಾಗಿ ಹಸಿರು ಮೇವು ಹಾಕುತ್ತಾರೆ. ಆದರೆ, ಈವರಿಗೆ ಜಮೀನು ಇದ್ರು ಕೂಡಾ ಬೋರವೇಲ್ ಕೊರಸಿದರು ನೀರು ಬಿದ್ದಿಲ್ಲಾ. ಹೀಗಾಗಿ ಮಂಗಳಾ ನಿಲಗುಂದ ಅವರು, ನಾಲ್ಕು ಎಕರೆ ಜಮೀನಿನಲ್ಲಿ ಗೋವಿನಜೋಳವನ್ನು ಬೆಳೆಸಿ, ಗೋವಿನಜೋಳ ಜೋಳ ಹಾಲು ಕಟ್ಟುವ ವೇಳೆಯಲ್ಲಿ ಅದನ್ನು ಕಟಾವು ಮಾಡಿ, ಅದಕ್ಕೆ ಉಪ್ಪು ಹಾಗೂ ಬೆಲ್ಲವನ್ನು ವಿಶ್ರಣ ಮಾಡಿಕೊಂಡು ಒಂದು ಕ್ವಿಂಟಲ್ ಸೈನೆಜ್ ಬ್ಯಾಕ್​ನಲ್ಲಿ ಶೇಖರಣೆ ಮಾಡಿಕೊಂಡು ಇಟ್ಟುಕೊಂಡಿರುತ್ತಾರೆ‌‌. ಒಂದು ವರ್ಷಕ್ಕೆ ಬೇಕಾಗುವಷ್ಟು ರಸ ಮೇವು ತಯಾರಿಸಿಕೊಂಡು ಇಟ್ಟಿಕೊಂಡಿರುತ್ತಾರೆ. ಅದನ್ನೆ ಒಂದು ವರ್ಷ ಕಾಲ ಇಟ್ಟುಕೊಂಡು ಕುರಿಗಳಿಗೆ ಹಾಕುತ್ತಾರೆ.

ಮಂಗಳಾ ಅವರ ಫಾರ್ಮ್ ಸಾಕಷ್ಟು ಜನರಿಗೆ ಗೊತ್ತಿರುವುದರಿಂದ ಫಾರ್ಮ್​ಗೆ ಬಂದು ಕುರಿ ಹಾಗೂ ಕೋಳಿಯನ್ನು ತೆಗೆದುಕೊಂಡು ವ್ಯಾಪಾರಸ್ಥರು ಹಾಗೂ ಮಾಂಸಹಾರಿಗಳು ತೆಗೆದುಕೊಂಡು ಹೋಗುತ್ತಾರೆ‌. ಹೀಗಾಗಿ ಅವುಗಳನ್ನು ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುವ ಪ್ರಶ್ನೆಯೇ ಬರುವದಿಲ್ಲಾ. ಇನ್ನೂ ಬಿಎಸ್ಸಿ ಮುಗಿಸಿರುವ ಮಂಗಳಾ ನಿಲಗುಂದ, ಇತರೆ ರೈತರಿಗೆ ಕೃಷಿ, ತೋಟಗಾರಿಕೆ ಹಾಗೂ ಪ್ರಾಣಿ ಸಾಕಾಣಿಕೆ ಮಾಡುವ ಕುರಿತು ತರಬೇತಿ ಕೂಡಾ ನೀಡುತ್ತಾರೆ‌.

ಮಂಗಳಾ ಅವರ ಕುರಿಗಳ ಫಾರ್ಮ್​ ನೋಡಲು ಸಾಕಷ್ಟು ಜನರು ಬರುತ್ತಾರೆ‌. ಇದನ್ನು ನೋಡಿಕೊಂಡು ಸಾಕಷ್ಟು ಜನರು ಕುರಿ ಹಾಗೂ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಕುರಿ ಹಾಗೂ ಕೋಳಿ ಸಾಕಾಣಿಕೆಯಿಂದ ವರ್ಷಕ್ಕೆ 6 ರಿಂದ‌ 7 ಲಕ್ಷ ರೂಪಾಯಿ ಆದಾಯವನ್ನು ಗಳಿಸುತ್ತಾರೆ. ಅದೇಷ್ಟು ವಿದ್ಯಾವಂತ ಮಹಿಳೆಯರು ಮನೆಯಲ್ಲಿಯೇ ಇರುತ್ತಾರೆ. ಆದರೆ ಈ ಮಂಗಳ ಅಚ್ಚುಕಟ್ಟಾಗಿ ಕುರಿ ಹಾಗೂ ಕೋಳಿ ಸಾಕಾಣಿಕೆ ಮಾಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದಾರೆ.

ವರದಿ: ಸಂಜೀವ ಪಾಂಡ್ರೆ

ಇದನ್ನೂ ಓದಿ:

ವಿದೇಶದಲ್ಲಿ ಕೆಲಸ ಬಿಟ್ಟು ಹಳ್ಳಿ ಕಡೆ ಮುಖ ಮಾಡಿದ ಸಹೋದರರು; ಸಾವಯವ ಕೃಷಿ ಮೂಲಕ ಯಶಸ್ವಿ ಬದುಕು!

ರಾಜ್ಯ ಸರ್ಕಾರ ಕುರಿ, ಮೇಕೆ ಸಾಕಾಣಿಕೆದಾರರ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತಿಲ್ಲ: ಸಿದ್ದರಾಮಯ್ಯ ಗರಂ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada