ಗರುಡ ಮಾಲ್​ನಲ್ಲಿ ಮೆಡಿವಲ್ ಆರ್ಟ್ ಶೋ, ಕ್ರಿಸ್ ಸಂತೆ; ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟಿ ರಾಧಿಕಾ ನಾರಾಯಣ್

Edited By:

Updated on: Dec 23, 2021 | 8:46 AM

ಗರುಡ ಮಾಲ್​ನಲ್ಲಿ ಮೆಡಿವಲ್ ಆರ್ಟ್ ಶೋ ಹಾಗೂ ಕ್ರಿಸ್ ಸಂತೆ ಆಯೋಜಿಸಲಾಗಿದೆ. ರಂಗಿತರಂಗ ಸಿನಿಮಾ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಕೇಕ್ ಕಟ್ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ರಾಜ್ಯದಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು, ನಗರದ ಮಾಲ್ಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಅದರಲ್ಲೂ ಗರುಡ ಮಾಲ್​ನಲ್ಲಿ ಮೆಡಿವಲ್ ಆರ್ಟ್ ಶೋ ಹಾಗೂ ಕ್ರಿಸ್ ಸಂತೆ ಆಯೋಜಿಸಲಾಗಿದೆ. ರಂಗಿತರಂಗ ಸಿನಿಮಾ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಕೇಕ್ ಕಟ್ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇನ್ನು ಕೇಕ್ ಶೋನಲ್ಲಿ ಮಿಡಿವಲ್ ಕ್ಯಾಸ್ಟಲ್ ವಿಶೇಷವಾಗಿದ್ದು, 16 ಅಡಿ ಎತ್ತರ, 16 ಅಡಿ ಉದ್ದ ಹಾಗೂ 12 ಅಡಿ ಅಗಲದಲ್ಲಿ ಮೂಡಿ ಬಂದಿದೆ. ಏಳು ಅಡಿ ಎತ್ತರದ ನಾಲ್ಕು ಕೋಟೆ ಬುರುಜುಗಳು, ಸಾಂತಾಕ್ಲಾಸ್, ಮಿಕ್ಕಿ ಮೌಸ್ ಮಾದರಿಯ ಕೇಕ್ಗಳೂ ನೋಡುಗರ ಗಮನ ಸೆಳೆಯುತ್ತಿವೆ. ಕೇಕ್ ಶೋ ಜನವರಿ 2 ರವರೆಗೆ ನಡೆಯಲಿದೆ.

ಇದನ್ನೂ ಓದಿ

‘100 ಕೋಟಿ ರೂ. ಅಲ್ಲ ಎಂದಿದ್ದರೆ ನಾನು ಈ ಕೆಲಸ ಮಾಡ್ತಿರಲಿಲ್ಲ’; ಚೇತನ್​ ಸಿನಿಮಾ ಬಗ್ಗೆ ರಮ್ಯಾ ಮಾತು

ಕನಸಿನ ಹುಡುಗಿಯನ್ನು ಒಲಿಸಲು ಹುಡುಗರಿಗೆ ಇಲ್ಲಿದೆ ಟಿಪ್ಸ್