‘100 ಸಿನಿಮಾ ಬಂದಾಗ ಯಶಸ್ಸು ಕಾಣೋದು 5 ಮಾತ್ರ’; ಚಿತ್ರರಂಗದ ಕರಾಳತೆ ಬಗ್ಗೆ ರವಿಚಂದ್ರನ್ ಮಾತು
ಕನ್ನಡ ಸಿನಿಮಾ ಸೋಲಿನ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಸೋಲಿನ ಸರಣಿ ಇದ್ದೇ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಗೆಲ್ಲುವ ಸಿನಿಮಾಗಳು ಮಾತ್ರ ನಿಮಗೆ ಕಾಣೋದು ಎಂಬುದು ಅವರ ಅಭಿಪ್ರಾಯ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ರವಿಚಂದ್ರನ್ ಅವರು ಸಿನಿಮಾ ಸೋಲುಗಳ ಬಗ್ಗೆ ಮಾತನಾಡಿದ್ದಾರೆ. ‘100 ಸಿನಿಮಾಗಳು ಬಂದರೆ ಗೆಲ್ಲೋದು ಐದು ಸಿನಿಮಾ ಮಾತ್ರ. ಇನ್ನು ಐದು ಸಿನಿಮಾಗಳ ಬಿಸ್ನೆಸ್ ಅಲ್ಲಿಂದ ಅಲ್ಲಿಗೆ ಆಗುತ್ತದೆ. ಉಳಿದ 90 ಸಿನಿಮಾಗಳು ಸೋಲುತ್ತವೆ. ಪರಭಾಷೆಯಲ್ಲೂ ಹೀಗೆಯೇ ಆಗೋದು. ನಮಗೆ ಗೆದ್ದ ಸಿನಿಮಾಗಳು ಮಾತ್ರ ಕಾಣುತ್ತವೆ. ಏಕೆಂದರೆ ಸೋತ ಸಿನಿಮಾಗಳು ಇಲ್ಲಿಗೆ ಬರೋದೆ ಇಲ್ಲ’ ಎಂದು ರವಿಚಂದ್ರನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.