‘ಅಪ್ಪನ ಸಾವಿನ ನೋವಿನಲ್ಲಿ ಇದ್ದಾಗಲೇ ಹಣದ ವಿಷಯ’: ಆ ಕ್ಷಣ ನೆನಪಿಸಿಕೊಂಡ ರವಿಚಂದ್ರನ್​

Updated on: Mar 04, 2024 | 6:12 PM

ಕೊಪ್ಪಳದಲ್ಲಿ ಅಭಿಮಾನಿಗಳ ಎದುರು ರವಿಚಂದ್ರನ್​ ಮಾತನಾಡಿದ್ದಾರೆ. ‘ಊಟ ಮಾಡುವಾಗ ಮನೆಯಲ್ಲಿ ಒಂದು ಗಂಟೆ ನೀವು ಮೊಬೈಲ್​ ಫೋನ್​ ಆಫ್​ ಮಾಡಿ ನೋಡಿ. ನಿಮ್ಮ ಮನೆಯಲ್ಲಿ ಪ್ರೇಮಲೋಕ ಹುಟ್ಟುತ್ತದೆ’ ಎಂದು ಅವರು ಹೇಳಿದ್ದಾರೆ. ದುಡ್ಡು ಮುಖ್ಯವಲ್ಲ, ಪ್ರೀತಿ ಮುಖ್ಯ ಎಂದು ಹೇಳಿರುವ ರವಿಚಂದ್ರನ್​ ಅವರು ತಂದೆಯನ್ನು ನೆನಪು ಮಾಡಿಕೊಂಡಿದ್ದಾರೆ.

ಕೊಪ್ಪಳದ (Koppal) ಕನಕಗಿರಿ ಉತ್ಸವದಲ್ಲಿ ನಟ ರವಿಚಂದ್ರನ್ (Ravichandran) ಅವರು ಭಾಗಿ ಆಗಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮ ಅಪ್ಪನಿಗೆ ಹುಷಾರಿರಲಿಲ್ಲ. ನಾನು ಸೋಲುವ ಟೈಮ್​ನಲ್ಲಿ ಅಪ್ಪ ತೀರಿಕೊಳ್ಳುತ್ತಾರಾ ಎಂಬ ಭಯ ನನ್ನೊಳಗೆ ಇತ್ತು. ಅಪ್ಪ (N. Veeraswamy) ಬದುಕಿದ್ದಾಗಲೇ ಈ ಕ್ರೇಜಿ ಸ್ಟಾರ್​ ಒಂದು ಸಕ್ಸಸ್​ ನೋಡಬೇಕು ಅಂತ ರಾಮಾಚಾರಿ ಸಿನಿಮಾ ಮಾಡಿದೆ. ಅಪ್ಪ ನಗುತ್ತಲೇ ಹೋಗಬೇಕು ಎಂಬ ಉದ್ದೇಶದಿಂದ ಆ ಸಿನಿಮಾ ಮಾಡಿದೆ. ರಾಮಾಚಾರಿ ಸಿನಿಮಾ ನನ್ನನ್ನು ಗೆಲ್ಲಿಸಿತು. ದುಡ್ಡು ಮಾಡಬೇಕು ಎಂಬುದು ನನಗೆ ಅಂದೂ ಗೊತ್ತಿರಲಿಲ್ಲ. ಇವತ್ತೂ ಗೊತ್ತಿಲ್ಲ. ನಮ್ಮ ಅಪ್ಪ ತೀರಿಕೊಂಡ ತಕ್ಷಣ ಇನ್​ಶ್ಯೂರೆನ್ಸ್​ ಕಂಪನಿಯವರು ಬಂದು ನಿಮಗೆ ಇಷ್ಟು ದುಡ್ಡು ಬರುತ್ತೆ ಅಂದರು. ಅಪ್ಪ ಸತ್ತ ನೋವಿನಲ್ಲಿ ಇದ್ದಾಗ ದುಡ್ಡು ಬರುತ್ತೆ ಅಂತ ಅವರು ಹೇಳಿದಾಗ ಆ ದುಡ್ಡನ್ನು ನಾನು ಕಿತ್ತು ಹಾಕಿದೆ. ನಾನು ಕೂಡ ಇನ್​ಶ್ಯೂರೆನ್ಸ್​ ಕಟ್ಟಲ್ಲ ಅಂತ ನಿರ್ಧಾರ ಮಾಡಿದೆ. ನಾನು ಸಾಯುವುದೇ ಇಲ್ಲ. ನಿಮ್ಮ ಮನಸ್ಸಿನಲ್ಲಿ ಬದುಕಿರುತ್ತೇನೆ. ಇದಕ್ಕೆ ಯಾವ ಇನ್​ಶ್ಯೂರೆನ್ಸ್​ ಬೇಕಿಲ್ಲ’ ಎಂದು ರವಿಚಂದ್ರನ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More