ಅಗಲಿದ ಪುನೀತ್ ರನ್ನು ನೆನೆದು ಭಾವುಕರಾದ ಅಕ್ಕ ಪೂರ್ಣಿಮಾರನ್ನು ವಿಜಯ ರಾಘವೇಂದ್ರ ಸಂತೈಸಿದರು
ಪುನೀತ್ ಅವರ ಅಕ್ಕ ಪೂರ್ಣಿಮಾ, ಅಗಲಿದ ತಮ್ಮನನ್ನು ನೆನೆದು ಭಾವುಕರಾಗಿ ತಮ್ಮ ಅತ್ತೆಯ ಮಗ ಮತ್ತು ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರರನ್ನು ತಬ್ಬಿಕೊಂಡರು.
ಬೆಂಗಳೂರು: ಕರ್ನಾಟಕ ರತ್ನ ಪುನೀತ್ ರಾಜಕುಮಾರ (Puneeth Rajkumar) ಅವರು ಕನ್ನಡಿಗರನ್ನು ಅಗಲಿ 11 ತಿಂಗಳಾಯಿತು. ಗುರುವಾರ ಹನ್ನೊಂದನೇ ತಿಂಗಳು ಪ್ರಯುಕ್ತ ಅವರ ಕುಟಂಬದ ಸದಸ್ಯರು ಕಂಠೀರವ ಸ್ಟುಡಿಯೋಗೆ ತೆರಳಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದರು. ಅಲ್ಲಿಗೆ ಆಗಮಿಸಿದ್ದ ಪುನೀತ್ ಅವರ ಅಕ್ಕ ಪೂರ್ಣಿಮಾ (Purnima) (ನಟ ರಾಮ್ ಕುಮಾರ ಪತ್ನಿ ಮತ್ತು ಉದಯೋನ್ಮುಖ ನಟಿ ಧನ್ಯಾ ರಾಮ್ ತಾಯಿ) ಅಗಲಿದ ತಮ್ಮನನ್ನು ನೆನೆದು ಭಾವುಕರಾಗಿ ತಮ್ಮ ಅತ್ತೆಯ ಮಗ ಮತ್ತು ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರರನ್ನು (Vijay Raghavendra) ತಬ್ಬಿಕೊಂಡರು. ವಿಜಯ, ಪೂರ್ಣಿಮಾರನ್ನು ಸಂತೈಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
Latest Videos