‘ತೋತಾಪುರಿ ತಂಡದವರಿಗೆ ಅದಿತಿ ಪ್ರಭುದೇವ ಬೇಕಿರಲಿಲ್ಲ’: ನಟಿ ಹೀಗೆ ಹೇಳಿದ್ದೇಕೆ?

| Updated By: ರಾಜೇಶ್ ದುಗ್ಗುಮನೆ

Updated on: Sep 29, 2022 | 6:30 AM

‘ಬಬ್ಲಿ ಪಾತ್ರ ಎಂದಾಗ ಅದಿತಿ ಸುಲಭವಾಗಿ ಕಾಣಿಸಿಕೊಳ್ಳುತ್ತಾಳೆ. ಆದರೆ, ಚಿತ್ರತಂಡದವರಿಗೆ ಅದಿತಿ ಬೇಕಾಗಿರಲಿಲ್ಲ. ಬೇರೆಯದೇ ಮ್ಯಾನರಿಸಂ ತೋರಿಸೋ ನಟಿ ಬೇಕಿತ್ತು’ ಎಂದಿದ್ದಾರೆ ಅದಿತಿ.

‘ತೋತಾಪುರಿ’ ಸಿನಿಮಾದಲ್ಲಿ (Totapuri Movie) ಅದಿತಿ ಪ್ರಭುದೇವ ಅವರು ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಮಾಡಿರುವ ಪಾತ್ರ ಸಖತ್ ಟಫ್ ಆಗಿತ್ತಂತೆ. ‘ಬಬ್ಲಿ ಪಾತ್ರ ಎಂದಾಗ ಅದಿತಿ ಸುಲಭವಾಗಿ ಕಾಣಿಸಿಕೊಳ್ಳುತ್ತಾಳೆ. ಆದರೆ, ಚಿತ್ರತಂಡದವರಿಗೆ ಅದಿತಿ ಬೇಕಾಗಿರಲಿಲ್ಲ. ಬೇರೆಯದೇ ಮ್ಯಾನರಿಸಂ ತೋರಿಸೋ ನಟಿ ಬೇಕಿತ್ತು’ ಎಂದಿದ್ದಾರೆ ಅದಿತಿ (Aditi Prabhuadeva).