ನಟಿ ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ

Edited By:

Updated on: Jul 14, 2025 | 6:09 PM

ನಟಿ ಬಿ. ಸರೋಜಾದೇವಿ ಅವರು ನಿಧನರಾಗಿದ್ದು, ಅನೇಕರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಕೂಡ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡುವಾಗ ಅವರು ಭಾವುಕರಾದರು. ರಾಕ್​ಲೈನ್ ವೆಂಕಟೇಶ್ ಮತ್ತು ಸರೋಜಾದೇವಿ ಅವರ ಕುಟುಂಬದ ನಡುವೆ ತುಂಬಾ ಆತ್ಮೀಯತೆ ಇತ್ತು.

ನಟಿ ಬಿ. ಸರೋಜಾದೇವಿ (B Saroja Devi) ನಿಧನರಾಗಿದ್ದು, ಸೆಲೆಬ್ರಿಟಿಗಳು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಮಾತಾಡುವಾಗ ಅವರು ಭಾವುಕರಾದರು. ಸರೋಜಾದೇವಿ ಹಾಗೂ ರಾಕ್​ಲೈನ್ ವೆಂಕಟೇಶ್ (Rockline Venkatesh) ಅವರ ಕುಟುಂಬದ ನಡುವೆ ಬಹಳ ಆತ್ಮೀಯತೆ ಇತ್ತು. ‘ಯಾವುದೇ ಮುಖ್ಯವಾದ ಕೆಲಸ ಇದ್ದಾಗ ನನಗೆ ಫೋನ್ ಮಾಡುತ್ತಿದ್ದರು. ಅವರು ಒಮ್ಮೆ ವಿಲ್ ಬರೆದಾಗ ನನ್ನನ್ನು ಕರೆದಿದ್ದರು. ಇದರಲ್ಲಿ ನಿಮ್ಮ ಸಹಿ ಇರಲೇಬೇಕು ಅಂತ ಹೇಳಿದ್ದರು. ಅಷ್ಟು ಆತ್ಮೀಯತೆ ಇತ್ತು’ ಎಂದು ರಾಕ್​ಲೈನ್ ವೆಂಕಟೇಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.