ನಟಿ ಹೇಮಾ ರೇವ್ ಪಾರ್ಟಿಯಲ್ಲಿದ್ದಿದ್ದು ನಿಜ, ಖಚಿತಪಡಿಸಿದ ಪೊಲೀಸ್ ಆಯುಕ್ತ, ಹಾಗಿದ್ದರೆ ವಿಡಿಯೋ ಮಾಡಿದ್ದು ಹೇಗೆ?

|

Updated on: May 21, 2024 | 5:32 PM

ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ನಾನು ಇರಲಿಲ್ಲವೆಂದು ತೆಲುಗು ನಟಿ ಹೇಮಾ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಆದರೆ ಹೇಮಾ, ಪಾರ್ಟಿಯಲ್ಲಿ ಹಾಜರಿದ್ದರೆಂದು ಪೊಲೀಸರು ಹೇಳಿದ್ದಾರೆ. ಅವರು ಆ ವಿಡಿಯೋ ಹೇಗೆ ಮಾಡಿದರೆಂದು ಅವರೇ ವಿವರಿಸಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿಆರ್ ಫಾರಂ ಹೌಸ್​ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ಚಿತ್ರರಂಗದ (Tollywood) ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು ಎನ್ನಲಾಗಿದ್ದು, ತೆಲುಗಿನ ಜನಪ್ರಿಯ ನಟಿ ಹೇಮಾ ಹೆಸರು ಸಹ ಹರಿದಾಡಿತ್ತು. ಆದರೆ ಅದೇ ಸಮಯದಲ್ಲಿ ಯಾವುದೋ ತೋಟವೊಂದರಲ್ಲಿ ನಿಂತು ಮಾತನಾಡಿರುವ ವಿಡಿಯೋವನ್ನು ಹೇಮಾ ಬಿಡುಗಡೆ ಮಾಡಿ, ನಾನು ಹೈದರಾಬಾದ್​ನಲ್ಲಿದ್ದೇನೆ ಎಂದಿದ್ದರು. ಆದರೆ ಪ್ರಕರಣದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್, ನಟಿ ಹೇಮಾ, ಜಿಆರ್ ಫಾರಂ ಹೌಸ್ ನಲ್ಲಿ ಇದ್ದಿದ್ದು ನಿಜ ಎಂದಿದ್ದಾರೆ. ಪಾರ್ಟಿಗೆ ಬಂದಿದ್ದ ಎಲ್ಲರ ರಕ್ತ ಪರೀಕ್ಷೆ ಮಾಡಿ ಹೊರಕಳಿಸಿದಾಗ ಹೇಗೋ ಕಣ್ತಪ್ಪಿಸಿ ಹೋಗಿ ಹೇಮಾ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ