ತುಂಬಾ ಪುಣ್ಯ ಮಾಡಿದ್ರೇನೇ ಅಣ್ಣಾವ್ರ ಜತೆ ನಟಿಸೋಕೆ ಆಗೋದು; ನಟಿ ಲಕ್ಷ್ಮೀ

Edited By:

Updated on: Apr 25, 2022 | 2:22 PM

ಜ್​ಕುಮಾರ್ ಜತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಲಕ್ಷ್ಮೀ. ಈ ಬಗ್ಗೆ ಅವರಿಗೆ ತುಂಬಾನೇ ಖುಷಿ ಇದೆ. ಈ ವಿಚಾರದ ಕುರಿತು ಅವರು ಮಾತನಾಡಿದ್ದಾರೆ. ‘ತುಂಬಾ ಪುಣ್ಯ ಮಾಡಿದ್ರೇನೇ ಅಣ್ಣಾವ್ರ ಜತೆ ನಟಿಸೋಕೆ ಆಗೋದು’ ಎಂದಿದ್ದಾರೆ ಅವರು.

2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏಪ್ರಿಲ್ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಏಪ್ರಿಲ್ 24 ಡಾ. ರಾಜ್​ಕುಮಾರ್ ಅವರ (Rajkumar) ಜನ್ಮದಿನ. ಈ ವಿಶೇಷ ದಿನದಂದು ಈ ಕಾರ್ಯಕ್ರಮ ನಡೆದಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ಲಕ್ಷ್ಮೀ (Lakshmi) ಕೂಡ ಪಾಲ್ಗೊಂಡಿದ್ದರು. ಅವರು ರಾಜ್​ಕುಮಾರ್ ಜತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಬಗ್ಗೆ ಅವರಿಗೆ ತುಂಬಾನೇ ಖುಷಿ ಇದೆ. ಈ ವಿಚಾರದ ಕುರಿತು ಅವರು ಮಾತನಾಡಿದ್ದಾರೆ. ‘ತುಂಬಾ ಪುಣ್ಯ ಮಾಡಿದ್ರೇನೇ ಅಣ್ಣಾವ್ರ ಜತೆ ನಟಿಸೋಕೆ ಆಗೋದು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಅಣ್ಣ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾರೆ’; ರಾಜ್​ಕುಮಾರ್ ನೆನೆದು ಸಹೋದರಿ ನಾಗಮ್ಮ ಕಣ್ಣೀರು

‘ಡಾ. ರಾಜ್​ಕುಮಾರ್​ ಬಗ್ಗೆ ಅವರ ತಂದೆ ನುಡಿದಿದ್ರು ಭವಿಷ್ಯ’: ಅಚ್ಚರಿಯ ಘಟನೆ ಮೆಲುಕು ಹಾಕಿದ ರಾಘಣ್ಣ

Follow Us
Web contact

TV9 Kannada

Read More