ಭಾವುಕರಾಗಿ ಎಸ್​ಎಂ ಕೃಷ್ಣ ಅಂತಿಮ ದರ್ಶನ ಪಡೆದ ನಟಿ ರಮ್ಯಾ

|

Updated on: Dec 10, 2024 | 10:43 AM

Actress Ramya: ಕರ್ನಾಟಕ ಮಾಜಿ ಸಿಎಂ ಎಸ್​ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ನಿಧನ ಹೊಂದಿದ್ದು ಅವರು ನಟಿ ರಮ್ಯಾ ಅವರು ಕೃಷ್ಣ ಅವರ ಮನೆಗೆ ಭೇಟಿ ನೀಡಿ ದರ್ಶನ ಪಡೆದರು.

ಮಾಜಿ ಸಿಎಂ, ಕೇಂದ್ರ ಸಚಿವ ಎಸ್​ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ಎಸ್​ಎಂ ಕೃಷ್ಣ ಅವರು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ರಾಜಕೀಯ ರಂಗದ ಮುತ್ಸದಿ ಆಗಿದ್ದ ಕೃಷ್ಣ ಅವರು ಕರ್ನಾಟಕದ ಪ್ರಗತಿಯ ಮೇಲೆ ಬಹುದೊಡ್ಡ ಪರಿಣಾಮ ಬೀರಿದ್ದರು. ರಾಜಕೀಯ ನಾಯಕರಾಗಿದ್ದ ಕೃಷ್ಣ ಅವರು ಹಲವು ಕ್ಷೇತ್ರದ ಗಣ್ಯರೊಟ್ಟಿಗೆ ಸಂಪರ್ಕ ಹೊಂದಿದ್ದರು. ಹಲವು ಕ್ಷೇತ್ರದ ಗಣ್ಯರು ಕೃಷ್ಣ ಅವರ ಬಗ್ಗೆ ಗೌರವ ಇರಿಸಿಕೊಂಡಿದ್ದರು. ಇದೀಗ ಕೃಷ್ಣ ಅವರು ನಿಧನರಾದ ಬೆನ್ನಲ್ಲೆ ಅವರ ಹಲವು ರಂಗದ ಗಣ್ಯರು ಮುಂಜಾನೆಯೇ ಬಂದು ಅಂತಿಮ ದರ್ಶನ ಪಡೆದರು. ಮಂಡ್ಯ ಮಾಜಿ ಸಂಸದೆ, ನಟಿಯೂ ಆಗಿರುವ ರಮ್ಯಾ ಅವರು ಸಹ ಮುಂಜಾನೆಯೇ ಬಂದು ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಕೃಷ್ಣ ಅವರ ಮನೆಯ ಬಳಿ ಬಂದಾಗ ರಮ್ಯಾ ಬಹಳ ಭಾವುಕರಾಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ