ನನಗೂ ಮೆಸೇಜ್ಗಳು ಬಂದಿದ್ದವು: ಬೋಲ್ಡ್ ನಟಿ ರೂಪಾ ರಾಯಪ್ಪ
ಕನ್ನಡದ ಬೋಲ್ಡ್ ನಟಿ ರೂಪಾ ರಾಯಪ್ಪ ಇತ್ತೀಚೆಗೆ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ತಮಗೂ ಆನ್ಲೈನ್ನಲ್ಲಿ ಕೆಟ್ಟದಾಗಿ ಸಂದೇಶಗಳು ಬಂದಿದ್ದಾಗಿ ಹೇಳಿದ್ದರು. ಬಳಿಕ ಆ ವಿಡಿಯೋ ಡಿಲೀಟ್ ಮಾಡಿದರು. ಇದೀಗ ಆ ವಿಷಯದ ಬಗ್ಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೆ, ನಟಿಯರಿಗೆ ಅಶ್ಲೀಲ ಸಂದೇಶ ಕಳಿಸುವ ಕಾಮುಖರ, ಟ್ರೋಲಿಗರ ಕುರಿತು ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ನಟಿ ರೂಪಾ ರಾಯಪ್ಪ ತಮಗೂ ಸಹ ಅಶ್ಲೀಲ ಸಂದೇಶಗಳು ಬಂದಿವೆ ಎಂದು ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದರು ಅದಾದ ಬಳಿಕ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಇದೀಗ ರೂಪಾ ನಟನೆಯ ‘ರಕ್ತಾಕ್ಷ’ ಸಿನಿಮಾದ ಟ್ರೇಲರ್ ಕಾರ್ಯಕ್ರಮದಲ್ಲಿ ಮಾತನಾಡಿದ ರೂಪಾ ರಾಯಪ್ಪ, ತಮಗೆ ಅಶ್ಲೀಲ ಸಂದೇಶ ಬಂದಿದ್ದ ಬಗ್ಗೆ ಅದರ ಬಗ್ಗೆ ಹಾಕಿದ್ದ ವಿಡಿಯೋವನ್ನು ತಾವೇಕೆ ಡಿಲೀಟ್ ಮಾಡಿದ್ದು ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos