ಡಬಲ್ ಡೆಕ್ಕರ್ ಫ್ಲೈಓವರ್ ಉದ್ಘಾಟಿಸಿ ತಮ್ಮ ಕಾರಲ್ಲಿ ಟೆಸ್ಟ್ ರೈಡ್ ಗೆ ಹೊರಟ ಡಿಕೆ ಶಿವಕುಮಾರ್

ಮೊಹರಂ ಪ್ರಯುಕ್ತ ಮಂತ್ರಿಗಳು, ಶಾಸಕರು ಮತ್ತು ಸರ್ಕಾರೀ ನೌಕರರು ರಜೆಯಲ್ಲಿದ್ದಾರೆ. ನಾಳೆ ವಿಧಾನ ಸಭೆಯ ಮುಂಗಾರು ಅಧಿವೇಶನ ಪುನರಾರಂಭಗೊಳ್ಳಲಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ನಡುವೆ ಪುನಃ ಮಾತಿನ ಚಕಮಕಿ ನಡೆಯಲಿದೆ. ಹೆಚ್ಚಿನ ಪ್ರಶ್ನೆಗಳಿಗೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಉತ್ತರಿಸುತ್ತಿದ್ದಾರೆ.

ಡಬಲ್ ಡೆಕ್ಕರ್ ಫ್ಲೈಓವರ್ ಉದ್ಘಾಟಿಸಿ ತಮ್ಮ ಕಾರಲ್ಲಿ ಟೆಸ್ಟ್ ರೈಡ್ ಗೆ ಹೊರಟ ಡಿಕೆ ಶಿವಕುಮಾರ್
|

Updated on: Jul 17, 2024 | 6:50 PM

ಬೆಂಗಳೂರು: ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಮತ್ತು ಇಡೀ ದೇಶದಲ್ಲಿ ಕೇವಲ ಎರಡನೇ ಡಬಲ್ ಡೆಕ್ಕರ್ ಫ್ಲೈಓವರನ್ನು ಇವತ್ತು ನಗರದಲ್ಲಿ ಪ್ರಾಯೋಗಿಕವಾಗಿ ಉದ್ಧಾಟಿಸಿದ ನಂತರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅದರ ಮೇಲೆ ತಮ್ಮ ಕಾರಲ್ಲಿ ಟೆಸ್ಟ್ ಡ್ರೈವ್ ಕೂಡ ನಡೆಸಿದರು. ಫಾರ್ ಎ ಚೇಂಜ್ ವ್ಹೀಲ್ ಮೇಲೆ ಅವರೇ ಕುಳಿತರು, ಡ್ರೈವರ್ ನನ್ನು ಕರೆಯಲಿಲ್ಲ. ಅವರ ಪಕ್ಕದಲ್ಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಸೀನರಾಗಿದ್ದರು. ಹಿಂಭಾಗದಲ್ಲಿ ಬೊಮ್ಮನಹಳ್ಳಿಯ ಬಿಜಪಿ ಶಾಸಕ ಸತೀಶ್ ರೆಡ್ಡಿ ಇದ್ದಿದ್ದು ಸ್ವಲ್ಪ ಆಶ್ಚರ್ಯ ಮೂಡಿಸಿತು. ಮಾಧ್ಯಮಗಳ ಕೆಮೆರಾಮನ್ ಗಳಿಗೆ ತಾವು ಕಾರು ಓಡಿಸುವ ದೃಶ್ಯ ಸೆರೆ ಹಿಡಿಯಲು ಅನುಕೂಲವಾಗಲಿ ಎಂದು ಅವರು ನಿಧಾನ ಗತಿಯಲ್ಲಿ ಓಡಿಸಿದರು. ನಾವು ಈಗಾಗಲೇ ವರದಿ ಮಾಡಿರುವ ಹಾಗೆ ಮೂರು ಲೇಯರ್ ಗಳ ಡಬಲ್ ಡೆಕ್ಕರ್ ಫ್ಲೈಓವ್ ವಿಶಿಷ್ಟವಾಗಿದೆ. ಮೊದಲ ಲೇಯರ್ ನಲ್ಲಿ ಮೋಟಾರು ವಾಹನಗಳು ಸಂಚರಿಸುತ್ತವೆ, ಅದರೆ ಇಲ್ಲಿ ಬೇರೆ ರಸ್ತೆಗಳಲ್ಲಿರುವಂತೆ ಸಿಗ್ನಲ್ ಗಳು ಎದುರಾಗುತ್ತವೆ. ಎರಡನೇ ಲೇಯರ್ ಸಹ ಮೋಟಾರು ವಾಹನಗಳಿಗೆ ಮೀಸಲು ಆದರೆ ಇದು ಸಿಗ್ನಲ್ ಮುಕ್ತ! ಮೇಲಿನ ಲೇಯರ್ ಮೆಟ್ರೋ ಟ್ರೇನುಗಳಿಗಾಗಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು: ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಇಂದಿನಿಂದ ಸಂಚಾರಕ್ಕೆ ಮುಕ್ತ

Follow us